ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಕಳೆದ ವರ್ಷ ಸುಮಾರು 23 ಮಿಲಿಯನ್(2.30 ಕೋಟಿ)ಗಿಂತಲೂ ಹೆಚ್ಚು ಮಕ್ಕಳು ವಾಡಿಕೆ ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. ಇದು ಕಳೆದೊಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ದಾಖಲಾದ ಹೆಚ್ಚಿನ ಸಂಖ್ಯೆಯಾಗಿದೆ. ವಾಡಿಕೆ ಲಸಿಕೆ ಹಾಕಿಸಿಕೊಳ್ಳದ ಪರಿಣಾಮ ಮಕ್ಕಳು ದಡಾರ, ಪೋಲಿಯೊ ಮತ್ತು ಇತರ ತಪ್ಪಿಸಬಹುದಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ವಿಶ್ವ ಆರೋಗ್ಯ ಸಂಸ್ಥೆ(WHO) ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ ವಾರ್ಷಿಕ ವರದಿಯಲ್ಲಿ, ವಿಶ್ವದಾದ್ಯಂತ ಲಸಿಕೆ ವ್ಯಾಪ್ತಿಯ ಅಂತರ ದೊಡ್ಡ ಕಂದರವನ್ನೇ ಸೃಷ್ಟಿಸಿದೆ. ಅನೇಕ ದೇಶಗಳು ಕೋವಿಡ್-19(COVID-19) ನಿಯಮಗಳನ್ನು ಸಡಿಲಗೊಳಿಸುವುದರಿಂದ ಹೆಚ್ಚಿನ ಮಕ್ಕಳು ಸಾಂಕ್ರಾಮಿಕ ಸೋಂಕಿಗೆ ಗುರಿಯಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುವುದು ಮಾತ್ರವಲ್ಲದೆ, ವಿವಿಧ ರೋಗಗಳ ಹರಡುವಿಕೆಯೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಬ್ರಿಟನ್ ನಲ್ಲಿ ವರ್ಣಭೇದ ನೀತಿಯು ಒಂದು ಬಿಕ್ಕಟ್ಟಾಗಿದೆ- ಬೋರಿಸ್ ಜಾನ್ಸನ್


2021ರಲ್ಲಿ ಕೊರೊನಾ ವೈರಸ್(CoronaVirus) ಸಾಂಕ್ರಾಮಿಕದ ದೊಡ್ಡ ಅಲೆ ಅಪ್ಪಳಿಸುವ ಸಂಭವನೀಯತೆಯನ್ನು ನಾವು ಹೊಂದಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ರೋಗನಿರೋಧಕ, ಲಸಿಕೆಗಳು ಮತ್ತು ಜೈವಿಕ ವಿಭಾಗದ ನಿರ್ದೇಶಕ ಕೇಟ್ ಒ'ಬ್ರಿಯೆನ್ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಅತ್ಯಂತ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾದ ದಡಾರವು 5 ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಬಹುದು. ವಿಶೇಷವಾಗಿ ದುರ್ಬಲ ಆರೋಗ್ಯ ವ್ಯವಸ್ಥೆ ಹೊಂದಿರುವ ಆಫ್ರಿಕನ್ ಮತ್ತು ಏಷ್ಯಾದ ರಾಷ್ಟ್ರಗಳಲ್ಲಿ ಇದರ ತೀವ್ರತೆ ಹೆಚ್ಚಿರುತ್ತದೆ. ಪೋಲಿಯೊ ಕಾಯಿಲೆಯು ಮಕ್ಕಳು ಮತ್ತು ಯುವಕರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಬಹುದೆಂದು ತಿಳಿಸಲಾಗಿದೆ.


ಬಾಲ್ಯದಲ್ಲಿಯೇ ಲಸಿಕೆ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ 2020ರಲ್ಲಿ ಭಾರತ ಮತ್ತು ನೈಜೀರಿಯಾ ನೇತೃತ್ವದ 10 ದೇಶಗಳ 22.7 ಮಿಲಿಯನ್ ಮಕ್ಕಳು  ಬಹುಪಾಲು ಡಿಫ್ತಿರಿಯಾ, ಟೆಟನಸ್ ಮತ್ತು ಪೆರ್ಟುಸಿಸ್(ಡಿಟಿಪಿ) ಕಾಯಿಲೆಗಳಿಗೆ ಲಸಿಕೆ(CoronaVirus Vaccine) ಹಾಕಿಸಿಕೊಂಡಿಲ್ಲ ಅಥವಾ ಕಡಿಮೆ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.


ಇದನ್ನೂ ಓದಿ: MasterChef Australia: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆದ್ದ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ..?


ವಾಡಿಕೆ ಲಸಿಕೆಯಿಂದ ವಂಚಿತರಾಗಿರುವ ಒಂದೇ ಒಂದು ಡೋಸ್ ಪಡೆಯದ ಮಕ್ಕಳಲ್ಲಿ ಅಪಾಯಕಾರಿ ಪ್ರಮಾಣ ಹೆಚ್ಚಳವಾಗಿದೆ. ಇದು ಕಳೆದ ವರ್ಷವಿದ್ದ 13.6 ಮಿಲಿಯನ್‌ನಿಂದ 17.1 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಯುನಿಸೆಫ್ ರೋಗನಿರೋಧಕ ವಿಭಾಗದ ಮುಖ್ಯಸ್ಥ ಎಫ್ರೆಮ್ ಲೆಮಾಂಗೊ ಹೇಳಿದ್ದಾರೆ. ಕಾಯಿಲೆಗೆ ತುತ್ತಾಗುತ್ತಿರುವ ಅನೇಕರು ಯುದ್ಧ ಪೀಡಿತ ದೇಶಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.


66 ದೇಶಗಳು ತಡೆಗಟ್ಟಬಹುದಾದ ಕಾಯಿಲೆಗಳ ವಿರುದ್ಧದ ರೋಗನಿರೋಧಕ ಅಭಿಯಾನವನ್ನು ಮುಂದೂಡಿವೆ. ಮೆಕ್ಸಿಕೊ(Mexico) ಸೇರಿದಂತೆ ಕೆಲವು ದೇಶಗಳು ಮಾತ್ರ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ ಎಂದು ವರದಿ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇ