Corona Vaccine: ಪ್ರತಿ 6 ತಿಂಗಳಿಗೊಮ್ಮೆ ಹಾಕಿಸಬೇಕು Corona Booster Dose! WHO ಹೇಳಿದ್ದೇನು?

Corona Booster Dose ಲಸಿಕೆಯ ಸೀಮಿತ ಸಮಯದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ 6 ತಿಂಗಳಿಗೊಮ್ಮೆ ಕರೋನಾ ಲಸಿಕೆ ಪ್ರಮಾಣವನ್ನು ತೆಗೆದುಕೊಳ್ಳಬೇಕೇ ಎಂಬ ಚರ್ಚೆ ಇದೀಗ ವಿಶ್ವಾದ್ಯಂತ ವೇಗ ಪಡೆದುಕೊಂಡಿದೆ? ಈ ಬಗ್ಗೆ WHO ದೊಡ್ಡ ಹೇಳಿಕೆಯೊಂದನ್ನು ನೀಡಿದೆ.

Written by - Nitin Tabib | Last Updated : Jun 11, 2021, 10:30 PM IST
  • ಪ್ರತಿ ಆರು ತಿಂಗಳಿಗೊಮ್ಮೆ ಬೂಸ್ಟರ್ ಡೋಸ್ ನೀಡಬೇಕೆ?
  • ಈ ಕುರಿತಾದ ಚರ್ಚೆ ಇದೀಗ ವಿಶ್ವಾದ್ಯಂತ ವೇಗ ಪಡೆದುಕೊಂಡಿದೆ.
  • ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ತಿಳಿಯೋಣ ಬನ್ನಿ.
Corona Vaccine: ಪ್ರತಿ 6 ತಿಂಗಳಿಗೊಮ್ಮೆ ಹಾಕಿಸಬೇಕು Corona Booster Dose! WHO ಹೇಳಿದ್ದೇನು? title=
Coronavirus Booster Dose (File Photo)

ನವದೆಹಲಿ: Corona Booster Dose: ಕರೋನಾ ಲಸಿಕೆಯ (Corona Vaccine) ಬೂಸ್ಟರ್ ಡೋಸ್ ಅಗತ್ಯವಿದೆಯೇ ಅಥವಾ ಇಲ್ಲವೇ, ಇದನ್ನು ಮುಂದಿನ ಒಂದು ವರ್ಷದಲ್ಲಿ ನಿರ್ಧರಿಸಲಾಗುವುದು. ಈ ಮಾಹಿತಿಯನ್ನು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಈ ಕುರಿತು ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ, ಇದು ಪೂರ್ಣಗೊಳ್ಳಲು ಸುಮಾರು 1 ವರ್ಷ ಕಾಲಾವಕಾಶ ಬೇಕಾಗಲಿದೆ ಎಂದು ಸಂಘಟನೆ ಹೇಳಿದೆ. COVID-19 ನ ಬೂಸ್ಟರ್ ಡೋಸ್ (Corona Booster Dose) ಎಷ್ಟು ಮಹತ್ವದ್ದಾಗಿದೆ ಎಂಬುದು ಆಗ ಮಾತ್ರ ಸ್ಪಷ್ಟವಾಗಲಿದೆ ಎಂದು WHO ಹೇಳಿದೆ.

ಆರು ತಿಂಗಳುಗಳವರೆಗೆ ಇರಲಿದೆ ವ್ಯಾಕ್ಸಿನ್ ಪ್ರಭಾವ 
ಇದುವರೆಗೆ ಈ ಕುರಿತು ನಡೆಸಲಾಗಿರುವ ಸಂಶೋಧನೆಯ ಪ್ರಕಾರ, ಲಸಿಕೆಯ ಪ್ರಭಾವ 6 ತಿಂಗಳವರೆಗೆ ಇರುತ್ತದೆ ಎನ್ನಲಾಗಿದೆ. ಈ ಲಸಿಕೆ ಮುಂದಿನ ಹಲವು ವರ್ಷಗಳವರೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದರೂ ಕೂಡ,  ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು World Health Organization ಹೇಳಿದೆ. ಲಸಿಕೆ (Covishield) ವೈರಸ್‌ನಿಂದ 100% ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಕೂಡ ಈಗಾಗಲೇ ಸ್ಪಷ್ಟಪಡಿಸಿದೆ.  ಈ ಕುರಿತು ಹೇಳಿಕೆ ನೀಡಿರುವ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್, 'ಬೂಸ್ಟರ್ ಡೋಸ್ ಕುರಿತು ಅಧ್ಯಯನ ನಡೆಯುತ್ತಿದೆ. ಒಂದು ವೇಳೆ ಬೂಸ್ಟರ್ ಡೋಸ್ ಅಗತ್ಯ ಬಿದ್ದಲ್ಲಿ, ಆ ಕುರಿತು ಜನರಿಗೆ ಮೊದಲೇ ಸೂಚಿಸಲಾಗುವುದು' ಎಂದಿದ್ದಾರೆ. 

ಇದನ್ನೂ ಓದಿ-Monkeypox: ಕೊರೊನಾ ಪ್ರಕೋಪದ ನಡುವೆ ತಲೆ ಎತ್ತುತ್ತಿದೆ ಈ ಹೊಸ ಕಾಯಿಲೆ, 100ರಲ್ಲಿ 10 ಜನರ ಸಾವಿನ ಅಪಾಯ

ಅಮೇರಿಕಾ ವಿಜ್ಞಾನಿಯ ಹೇಳಿಕೆಯ ಬಳಿಕ ಚರ್ಚೆ ಆರಂಭಗೊಂಡಿದೆ
ಕರೋನಾ ವೈರಸ್ ಲಸಿಕೆ ಪಡೆಯುವ ಜನರಿಗೆ ಬೂಸ್ಟರ್ ಶಾಟ್ ಅಗತ್ಯವಿದೆ ಎಂದು ಯುಎಸ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಂಥೋನಿ ಫೌಚಿ ಹೇಳಿರುವ ಹಿನ್ನೆಲೆ ಈ ಚರ್ಚೆ ಆರಂಭಗೊಂಡಿದೆ. ಈ ಕುರಿತು ಹೇಳಿಕೆ ನೀಡಿದ್ದ ಫೌಚಿ,  'ಲಸಿಕೆಯಿಂದ ರಕ್ಷಣೆಯ ಅವಧಿ ದೀರ್ಘಾವಧಿ ಎಂದು ನಾನು ಭಾವಿಸುವುದಿಲ್ಲ. ಇದು ಸಾಧ್ಯವೂ ಇಲ್ಲ. ಹೀಗಾಗಿ ನಮಗೆ ಬೂಸ್ಟರ್ ಶಾಟ್ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಲಸಿಕೆ ಪಡೆದ ನಂತರ ಬೂಸ್ಟರ್ ಶಾಟ್‌ಗೆ ಎಷ್ಟು ಸಮಯವನ್ನು ನೀಡಬೇಕು ಎಂದು ನಾವು ಪ್ರಸ್ತುತ ಕಂಡುಹಿಡಿಯುತ್ತಿದ್ದೇವೆ' ಎಂದಿದ್ದರು.

ಇದನ್ನೂ ಓದಿ-Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು

ಬೂಸ್ಟರ್ ಡೋಸ್ ಟ್ರಯಲ್ ಆರಂಭಿಸಿದ ಭಾರತ್ ಬಯೋಟೆಕ್ 
ಕೊರೊನಾ ಮಹಾಮಾರಿಯ ಇಂದಿನ ದಿನಗಳಲ್ಲಿ ವೈರಸ್ ನಿರಂತರವಾಗಿ ರೂಪ ಬದಲಿಸಿ ಮಾರಕವಾಗುತಿದೆ. ಹೀಗಿರುವಾಗ ಹಳೆ ಡೋಸ್ ನಿಂದ ದೊರೆತ ಆಂಟಿ ಬಾಡಿಗಳು ಕೂಡ ಕಡಿಮೆ ಬೀಳಲಿವೆ. ಆಗ ರೂಪಬದಲಾಯಿಸಿರುವ ವೈರಸ್ ಗೆ ಬೂಸ್ಟರ್ ಡೋಸ್ ಅವಶ್ಯಕತೆ ಬೀಳಲಿದೆ. ಇದೇ ಹಿನ್ನೆಲೆ ಭಾರತ್ ಬಯೋಟೆಕ್ ಮಂಗಳವಾರ ವ್ಯಾಕ್ಸಿನ್ ನ ಮೂರನೇ ಡೋಸ್ ಅಂದರೆ ಬೂಸ್ಟರ್ ಡೋಸ್ ಟ್ರಯಲ್ ಕೂಡ ಆರಂಭಿಸಿದೆ. ಈ ಟ್ರಯಲ್ ನಲ್ಲಿ ಬೂಸ್ಟರ್ ಡೋಸ್ ನಿಂದ ಹಲವು ವರ್ಷಗಳವರೆಗೆ ಇಮ್ಯೂನ್ ರೆಸ್ಪಾನ್ಸ್ ಸಿದ್ಧಗೊಳ್ಳಲಿದೆಯೇ ಎಂಬುದರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News