MasterChef Australia: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆದ್ದ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ..?

‘ಮಾಸ್ಟರ್‌ಶೆಫ್’ ಟ್ರೋಫಿಯೊಂದಿಗೆ ಜಸ್ಟಿನ್ 1.86 ಕೋಟಿ ರೂ. ನಗದು ಬಹುಮಾನ ಗೆದ್ದಿದ್ದಾರೆ.

Written by - Zee Kannada News Desk | Last Updated : Jul 14, 2021, 06:13 PM IST
  • 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’ ಎಂಬುದು ಜನಪ್ರಿಯ ಟಿವಿ ಕುಕ್ಕಿಂಗ್ ಶೋ ಆಗಿದೆ
  • ಫೈನಲಿಸ್ಟ್ ಗಳಾದ ಕಿಶ್ವರ್ ಚೌಧರಿ, ಪೀಟ್ ಕ್ಯಾಂಪ್‌ಬೆಲ್ ಸೋಲಿಸಿ ಪ್ರಶಸ್ತಿ ಗೆದ್ದ ಜಸ್ಟಿನ್
  • ‘ಮಾಸ್ಟರ್‌ಶೆಫ್’ ಟ್ರೋಫಿ ಜೊತೆಗೆ 1.86 ಕೋಟಿ ರೂ. ನಗದು ಬಹುಮಾನ
MasterChef Australia: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆದ್ದ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ..? title=
‘ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’ ಟ್ರೋಫಿಯೊಂದಿಗೆ ಜಸ್ಟಿನ್ ನಾರಾಯಣ್

 ಆಸ್ಟ್ರೇಲಿಯಾ: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಅವರು 13ನೇ ಆವೃತ್ತಿಯ ‘ಮಾಸ್ಟರ್ ಶೆಫ್ ಆಸ್ಟ್ರೇಲಿಯಾ’ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’(MasterChef Australia) ಎಂಬುದು ಜನಪ್ರಿಯ ಟಿವಿ ಕುಕ್ಕಿಂಗ್ ಶೋ ಆಗಿದ್ದು, ಈ ಬಾರಿ ಪ್ರಶಸ್ತಿ ಭಾರತೀಯ ಮೂಲದ 27 ವರ್ಷದ ಜಸ್ಟಿನ್ ನಾರಾಯಣ್ ಪಾಲಾಗಿದೆ. ಈ ವರ್ಷದ ಅತ್ಯುತ್ತಮ ಸ್ಪರ್ಧಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ನಾರಾಯಣ್ ಫೈನಲಿಸ್ಟ್ ಗಳಾದ ಕಿಶ್ವರ್ ಚೌಧರಿ ಮತ್ತು ಪೀಟ್ ಕ್ಯಾಂಪ್‌ಬೆಲ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?

ಗೆಲುವಿನ ಬಳಿಕ ತಮ್ಮಇನ್‌ಸ್ಟಾಗ್ರಾಮ್(Instagram)ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ನಾರಾಯಣ್, ಸ್ಪರ್ಧೆಯಲ್ಲಿ ತಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಮಾಸ್ಟರ್‌ಶೆಫ್ ಟ್ರೋಫಿಯೊಂದಿಗೆ ಜಸ್ಟಿನ್ ಬರೋಬ್ಬರಿ 2.50 ಲಕ್ಷ ಯುಎಸ್ ಡಾಲರ್ (ಅಂದಾಜು 1.86 ಕೋಟಿ ರೂ.) ನಗದು ಬಹುಮಾನವನ್ನು ಮನೆಗೆ ಕೊಂಡೊಯ್ದಿದ್ದಾರೆ.

'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’(MasterChef Australia) ಪ್ರಶಸ್ತಿ ನನಗೆ ಸಿಕ್ಕಿರುವುದು ತುಂಬಾ ಖುಷಿ ನೀಡಿದೆ. ನನಗೆ ಇನ್ನೂ ನಂಬಲಾಗುತ್ತಿಲ್ಲ. ಪ್ರಶಸ್ತಿ ಗುಂಗಿನಿಂದ ಹೊರಬರಲು ನನಗೆ ಕನಿಷ್ಠ 1 ವಾರವಾದರೂ ಬೇಕಾಗುತ್ತದೆ. ನಂತರ ಪ್ರಶಸ್ತಿ ಗೆದ್ದಿರುವ ನನ್ನ ಅನುಭವವನ್ನು ಇಮೇಲ್ ಮೂಲಕ ನಿಮಗೆ ತಿಳಿಸುತ್ತೇನೆ’ ಎಂದು ಜಸ್ಟಿನ್ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ತೀವ್ರವಾಗಿ ವ್ಯಾಪಿಸಿದ ಹಂದಿ ಜ್ವರ

ಹೆಚ್ಚಿನ ಒತ್ತಡದ ಸಂದರ್ಭದಲ್ಲಿ ಜಸ್ಟಿನ್ ತಮ್ಮ ಅಡುಗೆ ಶೈಲಿ(Cooking Style)ಯ ಮೇಲೆ ಹಿಡಿತ ಸಾಧಿಸಿದ್ದರು. ಸೃಜನಶೀಲತೆಯಿಂದ ಅಪಾರ ಅಭಿಮಾನಿ ಬಳಗವನ್ನು ಅವರು ಸೃಷ್ಟಿಸಿಕೊಂಡಿದ್ದರು. ಅನೇಕ ಕಂತುಗಳಲ್ಲಿ ಪ್ರಸಾರವಾಗುತ್ತಿದ್ದ ಜಸ್ಟಿನ್ ಅಡುಗೆ ಕಾರ್ಯಕ್ರಮಗಳನ್ನು ವೀಕ್ಷಿಸಿದ ಅಭಿಮಾನಿಗಳು ಮನಸಾರೆ ಖುಷಿಪಟ್ಟಿದ್ದರು. ಇದು ಜಸ್ಟಿನ್ ಪ್ರಶಸ್ತಿ ಗೆಲ್ಲಲು ಮುಖ್ಯ ಕಾರಣವಾಗಿದೆ.

ಈ ಬಗ್ಗೆ ಕೇಳಿದಾಗ ‘ನನ್ನ ಸಾರ್ವಕಾಲಿನ ಮೆಚ್ಚಿನ ಭಕ್ಷ್ಯವೆಂದರೆ ಚಾರ್ಕೋಲ್ ಚಿಕನ್(Charcoal Chicken) ಮತ್ತು ಟೌಮ್ ರೆಸಿಪಿ. ಇದು ತುಂಬಾ ರುಚಿಕರವಾಗಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ನನಗೆ ಅನೇಕ ಒಳ್ಳೆಯ ಸಮಯಗಳನ್ನು ಇದು ನೆನಪಿಸುತ್ತದೆ. ಆಂಡಿ ತ್ರೀ ಬ್ಲೂ ಡಕ್ಸ್ ರೆಸ್ಟೋರೆಂಟ್‌ನಲ್ಲಿ ಅಡುಗೆ ಮಾಡುವುದು ನನ್ನ ನೆಚ್ಚಿನ ಸವಾಲಾಗಿದೆ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.  ಜಸ್ಟಿನ್ ಅವರು ಪ್ರಶಸ್ತಿ ಗೆದ್ದಿರುವ ಸುದ್ದಿಯನ್ನು ‘ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’ದ  ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News