Covid-19 Lab Leak Theory - ಚೀನಾ ಪ್ರಯೋಗಾಲಯದಿಂದ ಲೀಕ್ ಆಗಿತ್ತಾ ಕೊರೊನಾ ವೈರಸ್? 18 ವಿಜ್ಞಾನಿಗಳ ಸಮೂಹ ನೀಡಿದ ಹೇಳಿಕೆ ಇದು
Covid-19 Lab Leak Theory - ಈ ಕುರಿತು ಹೇಳಿಕೆ ನೀಡಿರುವ ವೈಜ್ಯಾನಿಕರ ಸಮೂಹವೊಂದು, ವೈರಸ್ ಚೀನಾದ ಪ್ರಯೋಗಾಲಯದಿಂದ ಲೀಕ್ ಆಗಿರುವ ಥಿಯರಿ ಅಲ್ಲಗಳೆಯಲಾಗುವುದಿಲ್ಲ ಎಂದು ಹೇಳಿದೆ.
ನವದೆಹಲಿ: Covid-19 Lab Leak Theory - ವಿಶ್ವಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕರೋನಾ ವೈರಸ್ ಎಲ್ಲಿಂದ ಬಂತು? ಇದು ಯಾರಿಗೂ ನಿಖರವಾಗಿ ತಿಳಿದಿಲ್ಲ, ಆದರೆ ದತ್ತಾಂಶ-ತೀವ್ರ ತನಿಖೆಯ ಆಧಾರದ ಮೇಲೆ ಚೀನಾದ (China) ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗುವ ಸಿದ್ಧಾಂತವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ವಿಶ್ವದ ಉನ್ನತ ವಿಜ್ಞಾನಿಗಳ ಗುಂಪು ಹೇಳಿದೆ. 2019 ರ ಕೊನೆಯಲ್ಲಿ, ಚೀನಾದಲ್ಲಿ ಕರೋನಾ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ. ಅಂದಿನಿಂದ, ಈ ವೈರಸ್ (Coronavirus) ಜಾಗತಿಕವಾಗಿ 3 ದಶಲಕ್ಷಕ್ಕೂ ಹೆಚ್ಚು ಜನರ ಪ್ರಾಣ ತೆಗೆದಿದೆ. ಶತಕೋಟಿ ಡಾಲರ್ ಆರ್ಥಿಕ ನಷ್ಟಗಳಷ್ಟು ಸಂಭವಿಸಿದೆ ಮತ್ತು ಏಳು ಶತಕೋಟಿ ಮಾನವರ ಜೀವನ ಹಳಿ ತಪ್ಪಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಮೈಕ್ರೋಬಯಾಲಜಿಸ್ಟ್ ರವೀಂದ್ರ ಗುಪ್ತಾ ಮತ್ತು ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ ವೈರಸ್‌ಗಳ ಬೆಳವಣಿಗೆಯನ್ನು ಅಧ್ಯಯನ ಮಾಡಿದ ಜೆಸ್ಸಿ ಬ್ಲೂಮ್ ಸೇರಿದಂತೆ 18 ವಿಜ್ಞಾನಿಗಳು, ಕೊರೊನಾ ಸಾಂಕ್ರಾಮಿಕ ರೋಗದ ಹುಟ್ಟಿನ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳ ಗುಂಪಿನಲ್ಲಿ ಸೇರ್ಪಡೆಗೊಂಡ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ಪ್ರಾಧ್ಯಾಪಕ, ಸೈನ್ಸ್ ಜರ್ನಲ್‌ಗೆ ಬರೆದ ಪತ್ರದಲ್ಲಿ, ಚೀನಾದ ಪ್ರಯೋಗಾಲಯಗಳಿಂದ ವೈರಸ್ ನ ಸೋರಿಕೆ ಅಥವಾ ಪ್ರಾಣಿಗಳಿಂದ ವೈರಸ್ ಹರಡಿರುವ ಸಿದ್ಧಾಂತವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ- ಅಭಿಮಾನಿಗಳ ಜೊತೆಗೆ ತನ್ನ ಸಾವಿನ ಸುದ್ದಿ ಹಂಚಿಕೊಂಡ Paresh Rawal! ಅಭಿಮಾನಿಗಳು ಮಾಡಿದ್ದೇನು?
ವುಹಾನ್‌ನಲ್ಲಿನ ಕರೋನಾ ವೈರಸ್ (Covid-19) ಸೋಂಕಿನ ಉಗಮ ಮತ್ತು ಹರಡುವಿಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಡೆಸಿರುವ ತನಿಖೆಯು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಷ್ಟೇ ಯಾಕೆ, ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬ ಸಿದ್ಧಾಂತವನ್ನು ಕೂಡ ತನಿಖೆಗೆ ಯೋಗ್ಯ ಎಂದು ಭಾವಿಸಲಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವುಹಾನ್ (Wuhan)ನಲ್ಲಿನ ಕರೋನಾ ವೈರಸ್ ಸೋಂಕಿನ ಬಗ್ಗೆ ತನಿಖೆ ನಡೆಸಲು ಹೋದ ವಿಶ್ವ ಆರೋಗ್ಯ ಸಂಸ್ಥೆ ತಂಡವು ಚೀನಾದ ವಿಜ್ಞಾನಿಗಳ ಸಹಯೋಗದೊಂದಿಗೆ ಬರೆದ ಅಂತಿಮ ವರದಿಯಲ್ಲಿ, ವೈರಸ್ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಿದ್ದು, ಅದು ಬಹುತೇಕ ಬಾವುಲಿಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ- Black Fungus ಹೇಗೆ ಬರುತ್ತದೆ? ಹೇಗೆ ರಕ್ಷಿಸಿಕೊಳ್ಳಬೇಕು? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?
ಈ ವರ್ಷದ ಜನವರಿ-ಫೆಬ್ರವರಿ ಪ್ರಕಟಗೊಂಡ ತನ್ನ ವರದಿಯಲ್ಲಿ WHO, ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಥಿಯರಿಯನ್ನು ಬಹುತೇಕ ನಿರಾಕರಿಸಿತ್ತು.
ಇದನ್ನೂ ಓದಿ- Covaxin, Covishield, Sputnik-V: ಭಾರತದ ಬಳಿ ಮೂರು ಅಸ್ತ್ರಗಳು, ಯಾವುದು ಎಷ್ಟು ಪರಿಣಾಮಕಾರಿ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.