Covid Vaccine for Children: ಯುಎಸ್ ಆರೋಗ್ಯ ಅಧಿಕಾರಿಗಳು  (US health authorities) ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಅನುಮೋದಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಯುಎಸ್‌ನಲ್ಲಿ 5-11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್-ಬಯೋಎನ್‌ಟೆಕ್ ಕೋವಿಡ್ ಲಸಿಕೆ (Pfizer-BioNtech Covid vaccine)ನೀಡುವ ಈ ಅಂತಿಮ ಹಂತವನ್ನು ಅವರು ಅನುಮೋದಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಿಂದ  (Food and Drug Administration)  ಅನುಮೋದನೆ ಪಡೆದ ನಂತರ, ಈಗ ಅಮೆರಿಕದಲ್ಲಿ 28 ಮಿಲಿಯನ್ ಮಕ್ಕಳಿಗೆ ಲಸಿಕೆ (Vaccine for Children) ನೀಡುವ ಕೆಲಸವನ್ನು ಪ್ರಾರಂಭಿಸಬಹುದು. ಈ ಲಸಿಕೆಯನ್ನು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಬೆಂಬಲಿಸುತ್ತವೆ.


ಇದನ್ನೂ ಓದಿ- Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?


ಈ ಕುರಿತಂತೆ ಮಾಹಿತಿ ನೀಡಿರುವ ಅಮೇರಿಕ ಅಧ್ಯಕ್ಷ ಜೋ ಬಿಡೆನ್ , "ಇಂದು, ನಾವು ಕೋವಿಡ್-19 (COVID-19) ವಿರುದ್ಧದ ನಮ್ಮ ಯುದ್ಧದಲ್ಲಿ ಒಂದು ಮಹತ್ವದ ಘಟ್ಟವನ್ನು ತಲುಪಿದ್ದೇವೆ" ಎಂದು ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಿರಿಯ ಮಕ್ಕಳಿಗೆ ಲಸಿಕೆ ಹಾಕುವುದರಿಂದ ಕರೋನಾವೈರಸ್ ಕುರಿತಂತೆ ತಮ್ಮ ಮಕ್ಕಳ ಬಗೆಗಿನ ಪೋಷಕರ ಚಿಂತೆ ಕೊಂಚ ಮಟ್ಟಿಗೆ ದೂರವಾಗುತ್ತದೆ. ಕೋವಿಡ್-19 ಅನ್ನು ಸೋಲಿಸುವ ನಮ್ಮ ಹೋರಾಟದಲ್ಲಿ ಇದು ನಮ್ಮ ರಾಷ್ಟ್ರದ ಪ್ರಮುಖ ಹೆಜ್ಜೆಯಾಗಿದೆ ಎಂದು ಅಧ್ಯಕ್ಷರು ಹೇಳಿದರು.


ಇದನ್ನೂ ಓದಿ- Video Viral- ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಿಶೇಷ ರೀತಿಯಲ್ಲಿ ಪ್ರೇರೇಪಿಸುತ್ತಿರುವ ವ್ಯಕ್ತಿ ವಿಡಿಯೋ ವೈರಲ್


ಅಮೆರಿಕದ ಪ್ರತಿ ಮಗುವಿಗೆ ಸರ್ಕಾರವು ಈಗಾಗಲೇ ಸಾಕಷ್ಟು ಲಸಿಕೆಯನ್ನು ಪಡೆದುಕೊಂಡಿದೆ, ವಾರಾಂತ್ಯದಲ್ಲಿ ಅಧಿಕಾರಿಗಳು ಲಕ್ಷಾಂತರ ಡೋಸ್‌ಗಳನ್ನು ಪ್ಯಾಕಿಂಗ್ ಮತ್ತು ರವಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ  ಎಂದು ಹೇಳಲಾಗಿದೆ.


ಎಫ್‌ಡಿಎ ಲಸಿಕೆಯನ್ನು ಅನುಮೋದಿಸಿದ ತಕ್ಷಣ, ನಾವು ಒಂದು ಕ್ಷಣವೂ ವಿಳಂಬ ಮಾಡಲಿಲ್ಲ ಮತ್ತು ತಕ್ಷಣವೇ ಲಸಿಕೆಯನ್ನು ಪ್ಯಾಕಿಂಗ್ ಮಾಡಲು ಮತ್ತು ಸಾಗಿಸಲು ಪ್ರಾರಂಭಿಸಿದ್ದೇವೆ ಎಂದು ಶ್ವೇತಭವನದ ಸಾಂಕ್ರಾಮಿಕ ಕೋ-ಆರ್ಡಿನೇಟರ್ ಜೆಫ್ ಜೈಂಟ್ಸ್ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ