ನವದೆಹಲಿ: Dangerous Stunt - ಈ ಜಗತ್ತಿನಲ್ಲಿ ಚಿತ್ರ-ವಿಚಿತ್ರ ಕೆಲಸಗಳಲ್ಲಿ ತೊಡಗಿರುವ ಜನರ ಸಂಖ್ಯೆ ಸಾಕಷ್ಟಿದೆ ಮತ್ತು ಪ್ರತಿ ದಿನವೂ ನಾವು ಇಂತಹ ಕೆಲಸಗಳ ಒಂದಲ್ಲ ಓದು ವೀಡಿಯೊ ನೋಡುತ್ತಲೇ ಇರುತ್ತೇವೆ, ಇದರಲ್ಲಿ ಜನರು ಅನೇಕ ರೀತಿಯ ಸ್ಟಂಟ್ ಗಳನ್ನು(Tesla Stunt) ಮಾಡುತ್ತಿರುವುದನ್ನು ನೀವು ಕಾಣಬಹುದು. ಟೆಸ್ಲಾ (Tesla Electric Car) ಕುರಿತು ಹೇಳುವುದಾದರೆ, ಸ್ವಲ್ಪ ಸಮಯದ ಹಿಂದೆ ಕಂಪನಿಯ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಟೆಸ್ಲಾ ಕಾರಿಗೆ ಸ್ಫೋಟಕಗಳನ್ನೂ ಕಟ್ಟಿ ಸ್ಫೋಟಿಸಿದ್ದ (Telsa Car Blast). ಪ್ರಸ್ತುತ ವ್ಯಕ್ತಿಯೊಬ್ಬ ತನ್ನ ಟೆಸ್ಲಾ ಕಾರನ್ನು ಆಕಾಶದಲ್ಲಿ ಹಾರಿಸಲು (Flying Tesla) ಯತ್ನಿಸಿದ್ದಾನೆ. ಆದರೆ, ಪರಿಣಾಮ ಮಾತ್ರ ಅಷ್ಟೊಂದು ಸರಿಯಾಗಿಲ್ಲ ಎಂದೇ ಹೇಳಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video : ಕೋಳಿ ಮತ್ತು ಹಕ್ಕಿಯ ನಡುವಿನ ಕಾಳಗದಲ್ಲಿ ಸೋತು ಪರಾರಿಯಾದವರು ಯಾರು ?

ಅತ್ಯಂತ ಜನಪ್ರೀಯ ಇಲೆಕ್ಟ್ರಿಕ್ ಕಾರ್ ಕಂಪನಿ
ಟೆಸ್ಲಾ (Tesla) ಕಂಪನಿ ತನ್ನ ಪ್ರತಿ ಹೆಜ್ಜೆಯನ್ನು ಸರಿಯಾದ ಸಮಯಕ್ಕೆ ಇಟ್ಟಿದೆ ಮತ್ತು ಪ್ರಸ್ತುತ ಈ ಕಂಪನಿಯು ವಿಶ್ವದ ಅತ್ಯಂತ ಜನಪ್ರೀಯ ಎಲೆಕ್ಟ್ರಿಕ್ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟೀಕೆಯ ವಿಷಯದಲ್ಲಿಯೂ ಕೂಡ ಈ ಬ್ರಾಂಡ್ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಂಪನಿಯು ತನ್ನ ಆಟೋ ಡ್ರೈವಿಂಗ್ ಮೋಡ್‌ಗಳಿಗೆ ಹೆಚ್ಚು ಜನಪ್ರೀಯವಾಗಿದೆ. ಆದರೆ ಕೆಲವೊಮ್ಮೆ ಈ ಮೋಡ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಮತ್ತು ಇದು ಕಂಪನಿಯ ವಿರುದ್ಧ ಅನೇಕ ಟೀಕೆಗಳು ಕೇಳಿಬರಲು ಕಾರಣವಾಗುತ್ತದೆ. ಇತ್ತೀಚೆಗೆ, ಟೆಸ್ಲಾ ಮಾಲೀಕರೊಬ್ಬರು ತಮ್ಮ ಕಾರನ್ನು ಆಟೋ ಡ್ರೈವಿಂಗ್ ಮೋಡ್‌ನಲ್ಲಿ ಎತ್ತರದ ಸ್ಥಳದಿಂದ ಹಾರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.


ಇದನ್ನೂ ಓದಿ-ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..! ಇಲ್ಲಿದೆ ವಿಡಿಯೋ

ಗಾಳಿಯಲ್ಲಿ ಹಾರುವಂತೆ ಕಂಗೊಳಿಸಿದ ಕಾರು
ಈ ವಿಡಿಯೋದಲ್ಲಿ ಕಾರನ್ನು ಗಾಳಿಯಲ್ಲಿ ಹಾರಿಸಿದಾಗ, ಕಾರು ಒಂದು ಕೋನದಲ್ಲಿ ಹಾರುತ್ತಿರುವಂತೆ ಕಂಗೊಳಿಸುತ್ತದೆ. ನಂತರ ಕಾರು ಮುಖದ ಮೇಲೆ ನೆಲಕ್ಕೆ ಅಪ್ಪಳಿಸಿ, ಅದರ ಬಂಪರ್ ಚಲ್ಲಾಪಿಲ್ಲಿಯಾಗುತ್ತದೆ.  ಈ ಪ್ರಕರಣವನ್ನು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಮಾರು 50 ಅಡಿಗಳಷ್ಟು ಹಾರಿಹೋದ ನಂತರ, ಕಾರಿನ ಮುಂಭಾಗ ಮತ್ತು ಹಿಂಭಾಗವು ರಸ್ತೆಗೆ ತುಂಬಾ ಕೆಟ್ಟ ರೀತಿಯಲ್ಲಿ ಅಪ್ಪಳಿಸುತ್ತದೆ ಮತ್ತು ಕಾರಿನ ಭಾಗಗಳು ಚಲ್ಲಾಪಿಲ್ಲಿಯಾಗುತ್ತವೆ.  ಕಾರಿನ ಬಾನೆಟ್ ಕೂಡ ತೆರೆದುಕೊಂಡು ಮುಂದೆ ಇರುವ ಕೋಚ್‌ಗಳಿಗೆ ಆಪ್ಪಲಿಸುತ್ತದೆ. ಈ ಸಂದರ್ಭದಲ್ಲಿ ಕಾರಿನ ಆಟೋಪೈಲಟ್ ಒಳಗೆ ಕುಳಿತ ಪ್ರಯಾಣಿಕರ ಜೀವ ಅಪಾಯದಲ್ಲಿ ಸಿಲುಕಿಕೊಳ್ಳುತ್ತದೆ.
Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.