ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..! ಇಲ್ಲಿದೆ ವಿಡಿಯೋ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ  ಕುದುರೆಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಉರುಸ್ ನಿಮಿತ್ಯವಾಗಿ ಕುದುರೆಗಾಡಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಆದರೆ, ಈ ಸ್ಪರ್ಧೆ ವೇಳೆ ಅಚಾತುರ್ಯ ನಡೆದು ಹೋಗಿದೆ. 

Written by - Zee Kannada News Desk | Last Updated : Mar 22, 2022, 10:23 AM IST
  • ಕುದುರೆಗಾಡಿ ಸ್ಪರ್ಧೆಯ ವೇಳೆ ನಡೆದ ಅವಘಡ
  • ವ್ಯಕ್ತಿ ಮೇಲೆ ಹಾದು ಹೋಯಿತು ಮೂರು ಕುದುರೆ ಗಾಡಿ
  • ಕ್ಯಾಮರಾದಲ್ಲಿ ಸೆರೆಯಾಯಿತು ದೃಶ್ಯ
ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..!  ಇಲ್ಲಿದೆ ವಿಡಿಯೋ title=
ಕುದುರೆಗಾಡಿ ಸ್ಪರ್ಧೆಯ ವೇಳೆ ನಡೆದ ಅವಘಡ

ಚಿಕ್ಕೋಡಿ : ಈ ದೃಶ್ಯವನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ (Horse video).  ಎಂಥವರನ್ನು ಕೂಡಾ  ಒಂದು ಕ್ಷಣ ತುದಿಗಾಲ‌ ಮೇಲೆ ನಿಲ್ಲುವಂತೆ ಮಾಡುತ್ತದೆ. ವ್ಯಕ್ತಿಯ ಮೇಲೆ 
ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕದುರೆ ಗಾಡಿಗಳು ಎರಗಿ ಬಂದಿವೆ. ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ (Viral Video). 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ  ಕುದುರೆಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು (Horse cart REace). ಉರುಸ್ ನಿಮಿತ್ಯವಾಗಿ ಕುದುರೆಗಾಡಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಆದರೆ ಈ ಸ್ಪರ್ಧೆ ವೇಳೆ ಅಚಾತುರ್ಯ ನಡೆದು ಹೋಗಿದೆ (Horse video). 

ಇದನ್ನೂ ಓದಿ : ಬೆಂಗಳೂರಿನಲ್ಲಿ ಎಸಿಬಿ ದಾಳಿ : ಬಿಡಿಎ ಮಧ್ಯವರ್ತಿಗಳ ಮನೆಗಳಲ್ಲಿ ಪರಿಶೀಲನೆ

ಸ್ಪರ್ಧೆಯ ವೇಳೆ, ನೋಡ ನೋಡುತ್ತಿದ್ದಂತೆ ಕುದುರೆಗಳು ರಸ್ತೆ ಬಿಟ್ಟು ಕೆಳಗಿಳಿದಿವೆ. ಈ ಸಂದರ್ಭದಲ್ಲಿ ಕುದುರೆ ಗಾಡಿ ಸ್ಪರ್ಧೆ ವೀಕ್ಷಿಸುತ್ತಾ ನಿಂತಿದ್ದವರನ್ನು ಬೀಳಿಸಿಕೊಂಡು ಅವರ ಮೇಲೆಯೇ ಕುದುರೆ ಹಾದು ಹೋಗಿದೆ.  ಹೀಗೆ ವ್ಯಕ್ತಿಯ ಮೇಲೆ ಬರೀ ಒಂದು ಕುದುರೆ ಹಾದು  ಹೋಗಿಲ್ಲ ಮೂರು ಕುದುರೆ ಗಾಡಿಗಳು ವ್ಯಕ್ತಿಯ ಮೇಲಿಂದ ಹೋಗಿದೆ. ಈ ದೃಶ್ಯ ಎಂಥವರ ಕೈ ಕಾಲು ಕೂಡಾ ನಡುಗಿಸಿ ಬಿಡುತ್ತದೆ. 

 

ಆಯಸ್ಸು ಗಟ್ಟಿಯಾಗಿದ್ದರೆ, ಮೈ ಮೇಲೆ ಬಂಡೆಯೇ ಬಂದು ಬಿದ್ದರೂ ಏನೂ ಆಗುವುದಿಲ್ಲವಂತೆ. ಹೌದು ಇಲ್ಲಿನ ದೃಶ್ಯವನ್ನು ನೋಡಿದರೆ ಈ ಮಾತು ಹೌದು ಅನ್ನಿಸುತ್ತದೆ (Video). ಕುದುರೆ ಕೆಳಗೆ ಸಿಕ್ಕರೂ ಇಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಗಯಬಿ ಫೀರ್ ಉರೂಸ್ ನಿಮಿತ್ಯ ಆಯೋಜಿಸಿದ್ದ ಕುದುರೆ ಗಾಡಿ ಸ್ಪರ್ಧೆ  ವೇಳೆ ಇಂಥಹ ಘಟನೆ ನಡೆದಿದೆ. 

ಇದನ್ನೂ ಓದಿ : Fight For Egg: ಮೊಟ್ಟೆ ಹಣಕ್ಕಾಗಿ ಶಿಕ್ಷಕರಿಬ್ಬರ ಬೀದಿ ಜಗಳ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News