ದುಬೈ: Mass Death Penalty In Saudi Arabia - ಕೊಲೆ ಮತ್ತು ಭಯೋತ್ಪಾದನೆಯ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೌದಿ ಅರೇಬಿಯಾ ಕಠಿಣ ಕ್ರಮ ಕೈಗೊಂಡಿದೆ. ಭಯೋತ್ಪಾದನೆ ಆರೋಪಗಳು ಸೇರಿದಂತೆ ವಿವಿಧ ಅಪರಾಧಗಳಿಗೆ ಶಿಕ್ಷೆಗೊಳಗಾದ 81 ಜನರಿಗೆ ಅದು ಶನಿವಾರ ಸಾಮೂಹಿಕವಾಗಿ ಮರಣದಂಡನೆ ಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

ಸೌದಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಮಂದಿಗೆ ಶಿಕ್ಷೆ
ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟು ಮಂದಿಯನ್ನು ಗಲ್ಲಿಗೇರಿಸಿರುವುದು ಇದೇ ಮೊದಲು. ಜನವರಿ 1980 ರಲ್ಲಿ, ಮೆಕ್ಕಾದ ದೊಡ್ಡ ಮಸೀದಿಗೆ ಸಂಬಂಧಿಸಿದ ಒತ್ತೆಯಾಳು ಪ್ರಕರಣದಲ್ಲಿ 63 ಉಗ್ರರಿಗೆ ಮರಣದಂಡನೆ ವಿಧಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ..


ಮರಣದಂಡನೆಯನ್ನು ಜಾರಿಗೊಳಿಸಲು ಸರ್ಕಾರ ಶನಿವಾರವನ್ನೇ  ಏಕೆ ಆಯ್ಕೆ ಮಾಡಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವಿಶ್ವದ ಸಂಪೂರ್ಣ ಗಮನ ಉಕ್ರೇನ್-ರಷ್ಯಾ ಯುದ್ಧದ (Russia-Ukraine War) ಮೇಲೆ ಕೇಂದ್ರೀಕೃತವಾಗಿರುವ ಈ  ಸಮಯದಲ್ಲಿ ಈ ಬೆಳವಣಿಗೆ ನಡೆದಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ.


ಸೌದಿ ಪ್ರಿನ್ಸ್ ಆಳ್ವಿಕೆಯಲ್ಲಿಯೂ ಕಠಿಣ ಶಿಕ್ಷೆ  ಮುಂದುವರೆಯಲಿದೆ
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಸೌದಿ ಅರೇಬಿಯಾದಲ್ಲಿ ಮರಣದಂಡನೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ, ದೊರೆ ಸಲ್ಮಾನ್ ಮತ್ತು ಅವರ ಪುತ್ರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಆಳ್ವಿಕೆಯಲ್ಲಿ, ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳ ಶಿರಚ್ಛೇದ ಮುಂದುವರೆಯಲಿದೆ.

ಶನಿವಾರ ನೀಡಲಾಗಿರುವ ಈ ಮರಣದಂಡನೆಗಳ ಕುರಿತು ಅಲ್ಲಿನ ಸರ್ಕಾರಿ ನಿಯಂತ್ರಿತ 'ಸೌದಿ ಪ್ರೆಸ್ ಏಜೆನ್ಸಿ' ಮಾಹಿತಿ ನೀಡಿದೆ. ಮರಣದಂಡನೆಗೆ ಗುರಿಯಾದವರಲ್ಲಿ ಮುಗ್ಧ ಪುರುಷರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಹತ್ಯೆಗೈದವರು ಸೇರಿದಂತೆ ವಿವಿಧ ಅಪರಾಧಗಳಿಗೆ ಶಿಕ್ಷೆಗೊಳಗಾದವರು ಶಾಮೀಲಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.


ಭಯೋತ್ಪಾದಕರ ಬೆಂಬಲಿಗರು ಮತ್ತು ಹೌತಿ ಬೆಂಬಲಿಗರನ್ನು ಶಿಕ್ಷಿಸಲಾಗಿದೆ
ಮರಣದಂಡನೆಗೆ ಗುರಿಯಾದವರಲ್ಲಿ ಕೆಲವರು ಅಲ್-ಖೈದಾ, ಇಸ್ಲಾಮಿಕ್ ಸ್ಟೇಟ್ ಗುಂಪಿನ ಸದಸ್ಯರು ಮತ್ತು ಯೆಮೆನ್‌ನ ಹೌತಿ ಬಂಡುಕೋರರ ಬೆಂಬಲಿಗರು ಶಾಮೀಲಾಗಿದ್ದಾರೆ ಎಂದು ಸರ್ಕಾರ ಹೇಳಿದೆ. ಸೌದಿ ನೇತೃತ್ವದ ಒಕ್ಕೂಟವು 2015 ರಿಂದ ನೆರೆಯ ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರ್ಕಾರವನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ನಿರತವಾಗಿದ್ದು, ಅದಕ್ಕಾಗಿ ತನ್ನ ಹೋರಾಟ ಮುಂದುವರೆಸಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Missiles Attack: Iraq ನ ಅಮೆರಿಕಾದ ದೂತಾವಾಸದ ಮೇಲೆ 12 ಮಿಸೈಲ್ ಗಳಿಂದ ದಾಳಿ, ಇರಾನ್ ಹೇಳಿದ್ದೇನು?

ಆರೋಪಿಗಳಿಗೆ ವಕೀಲರ ನೆರವು ಒದಗಿಸಲಾಗಿತ್ತು
ಯಾವ ಯಾವ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ ಮತ್ತು ಎಲ್ಲಿ ನೀಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ . ಈ ಕುರಿತು ವರದಿ ಮಾಡಿರುವ ಸೌದಿ ಪ್ರೆಸ್ ಏಜೆನ್ಸಿ, "ಆರೋಪಿಗಳಿಗೆ ವಕೀಲರ ನೆರವು ಒದಗಿಸಲಾಗಿತ್ತು ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸೌದಿ (Soudi Arabia) ಕಾನೂನಿನ ಅಡಿಯಲ್ಲಿ ಅವರ ಸಂಪೂರ್ಣ ಹಕ್ಕುಗಳನ್ನು ಖಾತರಿಪಡಿಸಲಾಗಿದೆ" ಎಂದು ಹೇಳಿದೆ. ಇವರಲ್ಲಿ ಹಲವರು ಘೋರ ಅಪರಾಧಗಳಲ್ಲಿ ತಪ್ಪಿತಸ್ಥರಾಗಿದ್ದಾರೆ. ಇವರು ಎಸಗಿದ ಅಪರಾಧಿ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಮತ್ತು ಕಾನೂನು ಜಾರಿ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ.


ಇದನ್ನೂ ಓದಿ-Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ

ಬಹುತೇಕ ಶಿಯಾಗಳಿಗೆ ಮರಣ ದಂಡನೆ ವಿಧಿಸಲಾಗಿದೆ
"ಇಡೀ ವಿಶ್ವದ ಸ್ಥಿರತೆಗೆ ಬೆದರಿಕೆ ಒಡ್ಡುತ್ತಿರುವ ಭಯೋತ್ಪಾದನೆ ಮತ್ತು ಉಗ್ರಗಾಮಿ ಸಿದ್ಧಾಂತಗಳ ವಿರುದ್ಧ ಸರ್ಕಾರವು ಕಠಿಣ ನಿಲುವು ತೆಗೆದುಕೊಳ್ಳುವುದನ್ನು ಮುಂದುವರೆಸಲಿದೆ" ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೂ ಮುನ್ನ 2016ರ ಜನವರಿಯಲ್ಲಿ ಶಿಯಾ ಧರ್ಮಗುರು ಸೇರಿದಂತೆ 47 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು. 2019ರಲ್ಲಿ 37 ಮಂದಿಯ ಶಿರಚ್ಛೇದ ಮಾಡಲಾಗಿದೆ (Death Penalty). ಈ ಅಲ್ಪಸಂಖ್ಯಾತರಲ್ಲಿ ಹೆಚ್ಚಿನವರು ಶಿಯಾ ಸಮುದಾಯದವರಾಗಿದ್ದಾರೆ.


ಇದನ್ನೂ ಓದಿ-ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.