ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ

ಚೀನಾದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾದ ಎರಡು ವರ್ಷಗಳ ನಂತರ, ಮತ್ತೆ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ.

Written by - Zee Kannada News Desk | Last Updated : Mar 12, 2022, 04:29 PM IST
  • ಚೀನಾದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾದ ಎರಡು ವರ್ಷಗಳ ನಂತರ, ಮತ್ತೆ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ.
 ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ  title=

ನವದೆಹಲಿ: ಚೀನಾದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾದ ಎರಡು ವರ್ಷಗಳ ನಂತರ, ಮತ್ತೆ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ.

ಇದನ್ನೂ ಓದಿ: China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ

ಮೇನ್ ಲ್ಯಾಂಡ್ ಚೀನಾದ ವರದಿ ಪ್ರಕಾರ ಶನಿವಾರದಂದು ಸುಮಾರು 1,500 ಹೊಸ ಕೋವಿಡ್ -19 (Coronavirus) ಪ್ರಕರಣಗಳು ವರದಿಯಾಗಿವೆ,ಇದು 2020 ರ ಆರಂಭದಲ್ಲಿ ಸೋಂಕು ಹೆಚ್ಚಳ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: Omicron ಹಾಗೂ Delta ಸೇರಿ ಹುಟ್ಟಿಕೊಂಡಿದೆ ಹೊಸ ವೈರಸ್, ಮೊದಲಿನಿಂದಲೇ ಭೀತಿ ಇತ್ತು ಎಂದ WHO

ಚೀನಾದ 588 ದೈನಂದಿನ ಪ್ರಕರಣಗಳು ಇತರ ಹಲವು ದೇಶಗಳಿಗಿಂತ ತೀರಾ ಕಡಿಮೆ, ಆದರೆ ಹೆಚ್ಚುತ್ತಿರುವ ಸಂಖ್ಯೆಯು ಸಾಧ್ಯವಾದಷ್ಟು ಬೇಗ ಸಾಂಕ್ರಾಮಿಕವನ್ನು ನಿಗ್ರಹಿಸುವ ಬೀಜಿಂಗ್‌ನ ಮಹತ್ವಾಕಾಂಕ್ಷೆಯನ್ನು ಸಂಕೀರ್ಣಗೊಳಿಸಬಹುದು ಎನ್ನಲಾಗಿದೆ.

ಈಗ ಮುನ್ನೆಚ್ಚರಿಕೆ ಕ್ರಮವಾಗಿ ಚೀನಾದ ಪ್ರಮುಖ ನಗರಗಳಲ್ಲಿ ಬೃಹತ್ ಗುಂಪು ಸೇರುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.ಮತ್ತೊಮ್ಮೆ ಸಾಮೂಹಿಕ ಪರೀಕ್ಷೆಗಳಿಗೆ ಕರೆ ನೀಡಿರುವುದಲ್ಲದೆ, ಶಾಲಾ ತರಗತಿಗಳನ್ನು ಕಡಿತಗೊಳಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News