ಹನೋಯಿ: ವಿಯೆಟ್ನಾಂನ ಡೆಲಿವರಿ ಬಾಯ್ ವಿವೇಕ ಮತ್ತು ಧೈರ್ಯದಿಂದಾಗಿ 3 ವರ್ಷದ ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ್ದಾರೆ. ಇದೀಗ ವಿಯೆಟ್ನಾಂನಲ್ಲಿ ಈ ಡೆಲಿವೆರಿ ಬಾಯಿಯದ್ದೇ (Delivery Boy ) ಸುದ್ದಿ. ಸೋಷಿಯಲ್ ಮೀಡಿಯಾದಲ್ಲೂ ಈ ಯುವಕನ ಸಾಹಸಗಾಥೆ ಭಾರೀ ವೈರಲ್ (Viral)ಆಗುತ್ತಿದೆ. ಅಷ್ಟಕ್ಕೂ ಈ ಯುವಕ ಮಾಡಿರುವ ಕೆಲಸ ಗೊತ್ತಾದರೆ ನೀವೂ ಶಹಬ್ಬಾಸ್ ಎನ್ನದೇ ಇರಲ್ಲ. ಹನೋಯಿಯಲ್ಲಿರುವ ಅಪಾರ್ಟ್ ಮೆಂಟ್ ನ (apartment) 12 ನೇ ಮಹಡಿಯಿಂದ ಕೆಳಗೆ ಬಿದ್ದ ಕಂದಮ್ಮನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ ಈ ಡೆಲಿವರಿ ಬಾಯ್.  ಈ ಸಂಪೂರ್ಣ ಘಟನೆ ಅಪಾರ್ಟ್ ಮೆಂಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. 


COMMERCIAL BREAK
SCROLL TO CONTINUE READING

ಡೆಲಿವೆರಿ ನೀಡಲು ಬಂದಿದ್ದ ಯುವಕ :
ಮಾಧ್ಯಮ ವರದಿಗಳ ಪ್ರಕಾರ, ಡೆಲಿವರಿ ಹುಡುಗನ ಹೆಸರು Nguyen Ngoc Manh. ಭಾನುವಾರ ಡೆಲಿವೆರಿ ತಲುಪಿಸಲು ಘಟನಾ ಸ್ಥಳಕ್ಕೆ ಆಗಮಿಸಿದ್ದರು Nguyen. ಈ ಸಂದರ್ಭದಲ್ಲಿ  ಕಟ್ಟಡದ 12 ನೇ ಮಹಡಿಯಲ್ಲಿ ಪುಟ್ಟ ಕಂದಮ್ಮ ನೇತಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಮಗುವನ್ನು ಕಾಪಾಡುವಂತೆ ಮಹಿಳೆಯೊಬ್ಬರು ಕೂಗಾಡುತ್ತಿರುವುದು ಕೇಳಿಸಿಕೊಂಡಿದೆ. 


World's First Hotel In Space - ಬಾಹ್ಯಾಕಾಶದಲ್ಲೊಂದು ಹೋಟಲ್ ನಿರ್ಮಾಣ, 400 ಜನರ ವಾಸಕ್ಕೆ ವಸತಿ ವ್ಯವಸ್ಥೆ


ನೇತಾಡುತ್ತಿರವ ಮಗುವನ್ನು ಕಂಡು ಒಂದು ಕ್ಷಣಕ್ಕೆ ತಬ್ಬಿಬ್ಬಾದ ಯುವಕ : 
ಮೂರು ವರ್ಷದ  ಮಗು  ನೆಲದಿಂದ ಸುಮಾರು 164 ಅಡಿ ಎತ್ತರದಲ್ಲಿ ನೇತಾಡುತ್ತಿತ್ತು. ಮಗು (Child) ಕೆಳಗೆ ಬಿದ್ದರೆ ಏನು ಮಾಡುವುದು  ಎಂದು ತಕ್ಷಣಕ್ಕೆ Nguyen ಗೂ ತಿಳಿಯಲಿಲ್ಲ,. ಆದರೂ ಧೈರ್ಯ ಮಾಡಿಕೊಂಡು, ಯುವಕ ಜನರೇಟರ್ ಸೈಟ್ ಇಡುವ ಸ್ಥಳದ ಛಾವಣಿ ಮೇಲೆ ಹತ್ತುತ್ತಾರೆ. ಮಗು ನೆಲಕ್ಕೆ ಬಿದ್ದರೆ ಏನಾಗಬಹುದು ಎಂಬ ಕಲ್ಪನೆ ಯುವಕನಿಗಿತ್ತು. ಹಾಗಾಗಿ ಮಗು ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶ ಅವರದ್ದಾಗಿತ್ತು.  ಮಗು ನೆಲಕ್ಕೆ ಬೀಳುವ ಮೊದಲೆ ಡೆಲಿವೆರಿ ಬಾಯ್ ಮಗುವನ್ನು ಕ್ಯಾಚ್ ಹಿಡಿಯುತ್ತಾರೆ.  ಈ ಸಂಪೂರ್ಣ ಘಟನೆ ಅಪಾರ್ಟ್ ಮೆಂಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.


ಇಬ್ಬರಿಗೂ ಸಣ್ಣ ಪುಟ್ಟ ಗಾಯ : 
ಅಂದಹಾಗೆ, ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ ಯುವಕನ ಕಾಲು ಸಹಾ ಉಳುಕಿದೆ. ಆದರೆ ಮಗುವಿನ ಪ್ರಾಣಕ್ಕೆ ಏನೂ ತೊಂದರೆಯಾಗಿಲ್ಲ ಎನ್ನುವುದೇ ಖುಷಿಯ ಸಂಗತಿ. 


ಇದನ್ನೂ ಓದಿ : Flight Emergency Landing : ಕಳ್ಳ ಬೆಕ್ಕಿಗೆ ಹೆದರಿ ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.