ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ-ಡೊನಾಲ್ಡ್ ಟ್ರಂಪ್ ಘೋಷಣೆ
ವಿವಾದಿತ ನಗರ ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿಯಾಗಿ ಮಾಡಲು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ವಾಷಿಂಗ್ ಟನ್: ವಿವಾದಿತ ನಗರ ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿಯಾಗಿ ಮಾಡಲು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಈ ಮೂಲಕ ಅಮೆರಿಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು ಈ ನಿರ್ಧಾರದಿಂದ ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕುರಿತು ಶ್ವೇತ ಭವನದಲ್ಲಿ ಮಾತನಾಡಿದ ಅವರು, ಇಸ್ರೆಲ್ನ ರಾಜಧಾನಿಯಾಗಿ ಜೆರುಸ್ನೇಮ್ ಅನ್ನು ಮಾನ್ಯ ಮಾಡಲಿದ್ದು, ಅಮೇರಿಕ ರಾಜಧಾನಿಯನ್ನು ಟೆಲ್ ಅವಿವ್ ನಿಂದ ಜೆರುಸಲೇಮ್ ಗೆ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಜೆರುಸಲೇಮ್ ನ್ನು ಇಸ್ರೇಲಿಗಳು ಹಾಗೂ ಪ್ಯಾಲೆಸ್ಟೀನಿಯಾದವರು ಇಬ್ಬರೂ ತಮ್ಮ ನಗರವೆಂದು ಹೇಳಿಕೊಳ್ಳುತ್ತಿದ್ದು, ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸುಮಾರು 7 ದಶಕಗಳ ಗೊಂದಲಕ್ಕೆ ಪೂರ್ಣ ವಿರಾಮ ಹಾಕುವ ಸೂಚನೆಯೆಂದು ವಿಶ್ಲೇಷಿಸಲಾಗುತ್ತಿದೆ.