ವಾಷಿಂಗ್ಟನ್: ವೈಟ್ ಹೌಸ್ ನಿಂದ ಹೊರಬೀಳುವುದಕ್ಕೂ ಮುನ್ನ ಅಮೆರಿಕಾದ ಹಾಲಿ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ (Donald Trump) ಚೀನಾ ವಿರುದ್ಧದ ದೊಡ್ಡ ನಿರ್ಣಯವೊಂದನ್ನು ಕೈಗೊಂಡಿದ್ದಾರೆ. ಟ್ರಂಪ್ ಆಡಳಿತವು ಚೀನಾದ ಕಂಪನಿಗಳಿಗೆ ಯುಎಸ್ ನಲ್ಲಿ  ಹೂಡಿಕೆಯನ್ನು ನಿಷೇಧಿಸಿ ಕಾರ್ಯನಿರ್ವಾಹಕ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಅಮೆರಿಕ ಅಧ್ಯಕ್ಷ ಸ್ಥಾನ ತೊರೆಯುತ್ತಿದ್ದಂತೆ ಜೈಲು ಪಾಲಾಗ್ತಾರಾ ಡೊನಾಲ್ಡ್ ಟ್ರಂಪ್...?


ಒಟ್ಟು 31 ಕಂಪನಿಗಳನ್ನು ಗುರುತಿಸಲಾಗಿದೆ
 ಚೀನಾದ ಮಿಲಿಟರಿಯ ಜೊತೆಗೆ ಯಾವುದೇ ರೀತಿಯ ಸಂಬಂಧ ಹೊಂದಿರುವ ಚೀನೀ ಕಂಪನಿಗಳಲ್ಲಿ ಯುಎಸ್ ಹೂಡಿಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಯುಎಸ್ ಹೂಡಿಕೆ ಸಂಸ್ಥೆಗಳು, ಪಿಂಚಣಿ ನಿಧಿಗಳು ಮತ್ತು ಇತರರು 31 ಚೀನೀ ಕಂಪನಿಗಳ ಷೇರುಗಳನ್ನು ಖರೀದಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ, ಇದನ್ನು ರಕ್ಷಣಾ ಇಲಾಖೆಯು ಚೀನಾದ ಮಿಲಿಟರಿ ಬೆಂಬಲಿತ ಕಂಪನಿಗಳು ಎಂದು ಕರೆದಿದೆ.


ಇದನ್ನು ಓದಿ- ಡೈವೋರ್ಸ್ ನೀಡಲು ಮುಂದಾಗಿದ್ದಾರೆಯೇ ಟ್ರಂಪ್ ಪತ್ನಿ ಮೆಲಾನಿಯಾ..? ಇಲ್ಲಿದೆ ಮಹತ್ವದ ಸುಳಿವು


ಚೀನಾಗೆ ಭಾರಿ ಹಾನಿ
ಡೊನಾಲ್ಡ್ ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಚೀನಾ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾ ಟೆಲಿಕಾಂ ಕಾರ್ಪ್ ಲಿಮಿಟೆಡ್, ಚೀನಾ ಮೊಬೈಲ್ ಲಿಮಿಟೆಡ್ ಮತ್ತು ಕಣ್ಗಾವಲು ಸಾಧನ ತಯಾರಕ ಹಿಕ್ವಿಷನ್ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ.ಈ ಆದೇಶವು ಮುಂದಿನ ವರ್ಷ ಜನವರಿ 11 ರಿಂದ ಜಾರಿಗೆ ಬರಲಿದೆ ಮತ್ತು ಅದರ ನಂತರ ಅಮೆರಿಕಾದ ಹೂಡಿಕೆದಾರರು ಪಟ್ಟಿಮಾಡಿದ ಚೀನಾದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.


ಇದನ್ನು ಓದಿ- ಟ್ರಂಪ್ ಕೊರೊನಾ ಸರಿಯಾಗಿ ನಿಭಾಯಿಸಿಲ್ಲ, ಆದರೆ ಮೋದಿ ಭಾರತವನ್ನು ರಕ್ಷಿಸಿದ್ದಾರೆ-ಜೆ.ಪಿ ನಡ್ದಾ


ಯಾವುದೇ ಅವಕಾಶ ನೀಡಲು ಟ್ರಂಪ್ ಬಯಸುತ್ತಿಲ್ಲ
ತನ್ನ ಮಿಲಿಟರಿ, ಗುಪ್ತಚರ ಮತ್ತು ಇತರ ಭದ್ರತಾ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಆಧುನೀಕರಿಸಲು ಚೀನಾ ಬಹಳ ಹಿಂದಿನಿಂದಲೂ ಯುಎಸ್ ಬಂಡವಾಳವನ್ನು ಬಳಸುತ್ತಿದೆ ಎಂದು ಶ್ವೇತಭವನ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ, ಆದರೆ ಈಗ ಅದು ಸಂಭವಿಸಲು ಅನುಮತಿಸುವುದಿಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಸೋಲಿನ ನಂತರ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಮೊದಲ ಪ್ರಮುಖ ನಿರ್ಧಾರ ಇದಾಗಿದೆ.  ಅಧಿಕಾರ ವರ್ಗಾವಣೆಯ ಮೊದಲು ಚೀನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಟ್ರಂಪ್ ಹಿಂಜರಿಯುತ್ತಿಲ್ಲ ಎಂಬುದನ್ನು ಇದು ತೋರಿಸುತ್ತದೆ.


ಬೈಡನ್ ಗೆ ಇದು ಸ್ವೀಕಾರಾರ್ಹವೇ?
ಜೋ ಬೈಡನ್ ಚೀನಾಕ್ಕೆ ಸಂಬಂಧಿಸಿದ ತಮ್ಮ ಕಾರ್ಯತಂತ್ರವನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಅವರ ನಿಲುವು ಬೀಜಿಂಗ್ ಪ್ರತಿ ಕಟುವಾಗಿರುತ್ತದೆ ಎಂದೇ ನಂಬಲಾಗಿದೆ. ಆದರೂ ಕೂಡ ಅವರು ಟ್ರಂಪ್ನ ಕೈಗೊಂಡ ಕೆಲವು ನಿರ್ಧಾರಗಳನ್ನುಹಿಂಪಡೆಯುವ ಸಾಧ್ಯತೆ ಇದೆ. ಡೊನಾಲ್ಡ್ ಟ್ರಂಪ್ ರಾಷ್ಟ್ರಪತಿ ಭವನವನ್ನು ತ್ಯಜಿಸುವ ಸಮಯದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಜ್ಞರು ಹೇಳುತ್ತಾರೆ, ಆದ್ದರಿಂದ ಅಧಿಕಾರ ವಹಿಸಿಕೊಂಡ ನಂತರ ಬೈಡನ್ ಅದನ್ನು ಹಿಂಪಡೆಯುವ ಸಾಧ್ಯತೆಯಿದೆ.