ಟ್ರಂಪ್ ಕೊರೊನಾ ಸರಿಯಾಗಿ ನಿಭಾಯಿಸಿಲ್ಲ, ಆದರೆ ಮೋದಿ ಭಾರತವನ್ನು ರಕ್ಷಿಸಿದ್ದಾರೆ-ಜೆ.ಪಿ ನಡ್ದಾ

ಭಾರತದ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ಕೇಂದ್ರ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದೆ ಎಂದು ಶ್ಲಾಘಿಸಿದರು.

Last Updated : Nov 5, 2020, 10:00 PM IST
ಟ್ರಂಪ್ ಕೊರೊನಾ ಸರಿಯಾಗಿ ನಿಭಾಯಿಸಿಲ್ಲ, ಆದರೆ ಮೋದಿ ಭಾರತವನ್ನು ರಕ್ಷಿಸಿದ್ದಾರೆ-ಜೆ.ಪಿ ನಡ್ದಾ title=
Photo Courtesy: PTI

ನವದೆಹಲಿ: ಭಾರತದ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ಕೇಂದ್ರ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದೆ ಎಂದು ಶ್ಲಾಘಿಸಿದರು.

ಬಿಹಾರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಡ್ದಾ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೋವಿಡ್ -19 ಅನ್ನು ಸರಿಯಾಗಿ ನಿಭಾಯಿಸಲಿಲ್ಲ, ಆದರೆ ಭಾರತದ ಮೋದಿ ಸರ್ಕಾರ ಕೊರೋನಾದಿಂದ ದೇಶವನ್ನು ರಕ್ಷಿಸಿತು ಎಂದು ಹೇಳಿದ್ದಾರೆ.

"ಯುಎಸ್ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಲಾಗುತ್ತಿದೆ ಮತ್ತು ಡೊನಾಲ್ಡ್ ಟ್ರಂಪ್ ವಿರುದ್ಧದ ಆರೋಪವೆಂದರೆ ಅವರು ಕೋವಿಡ್ -19 ಅನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ, ಆದರೆ ಮೋದಿಜಿ ಅವರು ದೇಶ ಮತ್ತು ಅದರ 130 ಕೋಟಿ ಜನಸಂಖ್ಯೆಯನ್ನು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಳಿಸಿದ್ದಾರೆ" ಎಂದು ನಡ್ದಾ ಹೇಳಿದರು.

 

Trending News