ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 5.2 ತೀವ್ರತೆಯ ಭೂಕಂಪ
Earthquake in Bangladesh: ಢಾಕಾದ ಅಗರಗಾಂವ್ ಭೂಕಂಪನ ಕೇಂದ್ರದಿಂದ 520 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ಹಾವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
Earthquake in Bangladesh: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಇಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಢಾಕಾದ ಅಗರಗಾಂವ್ ಭೂಕಂಪನ ಕೇಂದ್ರದಿಂದ 520 ಕಿ.ಮೀ ದೂರದಲ್ಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದ ಹವಾಮಾನ ಇಲಾಖೆ (BMD) ಪ್ರಕಾರ, ಇಂದು (05 ಡಿಸೆಂಬರ್, ಸೋಮವಾರ) ಬೆಳಗ್ಗೆ 9.02ರ ಸುಮಾರಿಗೆ ರಾಜಧಾನಿ ಢಾಕಾದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.2 ರಷ್ಟಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ- Earthquake in Delhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು
ಈ ಬಗ್ಗೆ ಕ್ಸಿನ್ಹುವಾ ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಬಿಎಂಡಿ ಹವಾಮಾನಶಾಸ್ತ್ರಜ್ಞ ಕಾಜಿ ಜೆಬುನ್ನೆಸಾ, ಬಂಗಾಳಕೊಲ್ಲಿಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದಿದ್ದಾರೆ.
ಇದನ್ನೂ ಓದಿ- Earthquake: ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಇನ್ನು ಇಂದು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಯಾವುದೇ ರೀತಿಯ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.