ಆ ಸ್ಥಾನ ನನ್ನದು, ಬಾ ಕೆಳಗಿಳಿ, ಮತ್ತೆ ವಿಶ್ವದ ನಂ.1 ಧಣಿ ಪಟ್ಟ ಅಲಂಕರಿಸಿದ Jeff Bezos
World Richest Person - ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಎಲೋನ್ ಮಸ್ಕ್ನಿಂದ ಒಂದು ವಾರದೊಳಗೆ ಕಸಿದುಕೊಂಡಿದ್ದಾರೆ. ಎಲೋನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ.
World Richest Person - ನವದೆಹಲಿ: ಒಂದೇ ವಾರದೊಳಗೆ ಸ್ಪೇಸ್ ಎಕ್ಸ್ ಸಂಸ್ಥಾಪಕ ಹಾಗೂ ಟೆಸ್ಲಾ ಸಿಇಓ ಎಲೋನ್ ಮಸ್ಕ್ ಅವರಿಂದ ವಿಶ್ವದ ನಂ.1 ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಕಸಿದುಕೊಳ್ಳಲಾಗಿದೆ. ಹೀಗಾಗಿ ಇದೆಗ ಅವರು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತೊಮ್ಮೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ, ಟೆಸ್ಲಾ ಷೇರುಗಳು ಸೋಮವಾರ ಸುಮಾರು ಶೇ.8 ಕುಸಿತ ಕಂಡ ಬಳಿಕ ಒಂದೇ ದಿನದಲ್ಲಿ, ಅವರ ಆಸ್ತಿ ಸುಮಾರು14 ಬಿಲಿಯನ್ ನಷ್ಟು ಇಳಿಕೆಯಾಗಿ ಅವರು ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಎಲೋನ್ ಮಸ್ಕ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಒಂದು ವಾರದ ಹಿಂದೆಯೇ ಪಡೆದಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ನೆಟ್ ವರ್ಥ್ ನಲ್ಲಿ ಶೇ.8 ರಷ್ಟು ಕುಸಿತ
ಸೋಮವಾರ, ಟೆಸ್ಲಾ ಷೇರುಗಳ ಬೆಲೆಯಲ್ಲಿ ಶೇ.8 ರಷ್ಟು ಕುಸಿತ ಗಮನಿಸಲಾಗಿದೆ. ಈ ಕಾರಣದಿಂದಾಗಿ, ಮಸ್ಕ್‌ನ ನಿವ್ವಳ ಮೌಲ್ಯವನ್ನು US $ 176.2 ಶತಕೋಟಿಗೆ ಇಳಿಕೆಯಾಗಿದೆ. ಮಸ್ಕ್ ಅವರ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ಈ ವರ್ಷ ತನ್ನ ಮಾರುಕಟ್ಟೆ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕಳೆದ ವಾರ, ಮಸ್ಕ್ ಕಂಪನಿಯು ಷೇರುಗಳ ಬೆಲೆಯಲ್ಲಿ ದೊಡ್ಡ ಏರಿಕೆ ಕಂಡಿತು, ನಂತರ ಅವರು ಒಟ್ಟು ಆಸ್ತಿಗಳ ವಿಷಯದಲ್ಲಿ ಮೊದಲ ಸ್ಥಾನಕ್ಕೆ ತಲುಪಿದ್ದರು. ಅವರ ಒಟ್ಟು ಸಂಪತ್ತು 185 ಬಿಲಿಯನ್ ಡಾಲರ್ (1 ಟ್ರಿಲಿಯನ್ 85 ಬಿಲಿಯನ್ ಡಾಲರ್) ದಾಟಿದೆ.
ಇದನ್ನು ಓದಿ-ಮೆದುಳಿನಲ್ಲಿಯೇ ಯಾವುದೇ ಹಾಡಿನ ಲೈವ್ ಸ್ಟ್ರೀಮಿಂಗ್ ಮಾಡಲು ಸಿದ್ಧವಾಗುತ್ತಿದೆ ಚಿಪ್, Elon Musk ಬಿಚ್ಚಿಟ್ಟ ರಹಸ್ಯ
ಮತ್ತೆ ನಂ.1 ಸ್ಥಾನ ಅಲಂಕರಿಸಿದ ಜೆಫ್ ಬೆಜೋಸ್
ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ 'ಅಮೆಜಾನ್' ಸಂಸ್ಥಾಪಕ ಜೆಫ್ ಬೆಜೋಸ್ ಅವರಿಂದ ಮಸ್ಕ್ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದರು. ಜೆಫ್ ಬೆಜೋಸ್ 2017 ರಿಂದ ಈ ಸ್ಥಾನ ಅಲಂಕರಿಸಿದ್ದರು. ಮಸ್ಕ್ ಇದೀಗ ಬೆಜೋಸ್‌ಗಿಂತ 6 ಬಿಲಿಯನ್ ಡಾಲರ್ ಗಿಂತ ಹಿಂದೆ ಉಳಿದಿದ್ದಾರೆ. ಜೆಫ್ ಬೆಜೋಸ್ ಅವರ ನಿವ್ವಳ ಆಸ್ತಿ 182.1 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ ಮತ್ತು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಸೋಮವಾರ, ಜೆಫ್ ಬೆಜೋಸ್ ಕಂಪನಿಯ ಅಮೆಜಾನ್ ಷೇರುಗಳ ಬೆಲೆ ಕೂಡ ಶೇ.2 ರಷ್ಟು ಕುಸಿತ ದಾಖಲಿಸಿದ್ದು ಮತ್ತು ಅವರ ನಿವ್ವಳ ಮೌಲ್ಯವು 3.6 ಬಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿದೆ.
ಇದನ್ನು ಓದಿ-Elon Musk ಅಬ್ಬಬ್ಬಾ..! ಈತನ ಸಂಪಾದನೆಯೇ..! ಒಂದೇ ವರ್ಷದಲ್ಲಿ 160 ಬಿಲಿಯನ್ ಡಾಲರ್ ಲಾಭ
ಕರೋನಾ ವೈರಸ್‌ನಿಂದಾಗಿ ಸೊರಗಿದ ಆರ್ಥಿಕತೆಯ ಹೊರತಾಗಿಯೂ ಕೂಡ ಕಳೆದ 12 ತಿಂಗಳುಗಳಲ್ಲಿ ಮಸ್ಕ್ (Elon Musk) ಅವರ ನಿವ್ವಳ ಆಸ್ತಿ ಮೌಲ್ಯದಲ್ಲಿ 150 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಅವರು ಬಹುಶಃ ವಿಶ್ವದಲ್ಲೇ ವೇಗವಾಗಿ ಗಳಿಕೆ ಮಾಡಿದ ವ್ಯಕ್ತಿಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಸ್ಕ್ ಪ್ರತಿ ಗಂಟೆಗೆ 1.736 ಮಿಲಿಯನ್ ಡಾಲರ್ ಅಥವಾ ಸುಮಾರು 127 ಕೋಟಿ ರೂ. ಗಳಿಕೆ ಮಾಡಿದ್ದಾರೆ. ಈ ಕಾರಣದಿಂದಾಗಿ ವಿಶ್ವದ ಅತ್ಯಮೂಲ್ಯ ಆಟೋ ಕಂಪನಿಯಾದ ಟೆಸ್ಲಾ ಷೇರುಗಳ ಬೆಲೆಯಲ್ಲಿ ಅಭೂತಪೂರ್ವ ಅಭೂತಪೂರ್ವವಾಗಿ ಹೆಚ್ಚಾಗಿದೆ.
ಇದನ್ನು ಓದಿ-Elon Musk ನೂತನ ಯೋಜನೆ, ಮೆದುಳು ನಿಯಂತ್ರಿಸುವ ಚಿಪ್ ನಲ್ಲಿ ನೆನಪುಗಳ Back-UP ಪಡೆಯಬಹುದಂತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.