Watch: ಸಂಸದರ ನಡುವೆ ಮಾರಾಮಾರಿ; ಪಾಕಿಸ್ತಾನ ಸಂಸತ್ತಿನಲ್ಲಿ ಮುಜುಗರದ ಘಟನೆ
ಪಾಕಿಸ್ತಾನ ಸಂಸತ್ತಿನಲ್ಲಿ ನಡೆದಿರುವ ಈ ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ಪಡೆಯುತ್ತಿದೆ.
ಇಸ್ಲಾಮಾಬಾದ್: ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಕೆರಳುತ್ತಿರುವುದು ಒಂದೆಡೆಯಾದರೆ, ಸಂಸತ್ತಿನಲ್ಲಿ ಸಂಸದರ ವರ್ತನೆ ನಾಚಿಕೆಗೇಡು ಎಂಬಂತಿದೆ. ಪಾಕಿಸ್ತಾನ ಸಂಸತ್ತಿನಲ್ಲಿ ಗುರುವಾರ ಇದೇ ರೀತಿಯ ಪ್ರಸಂಗ ಕಂಡುಬಂದಿದೆ. ಜಂಟಿ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಘರ್ಷಣೆ ಉಂಟಾಗಿದೆ. ಉಭಯ ನಾಯಕರ ನಡುವೆ ವಾಕ್ಸಮರ ಜೋರಾಗಿಯೇ ಇತ್ತು, ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಈ ಸಂದರ್ಭದಲ್ಲಿ ಮಹಿಳಾ ಸಂಸದರನ್ನು ಸಹ ನಿಂದಿಸಲಾಯಿತು ಮತ್ತು ವಿರೋಧ ಪಕ್ಷದ ಸಂಸದರು ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನ ಸಂಸತ್ತಿನಲ್ಲಿ ನಡೆದಿರುವ ಈ ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ಪಡೆಯುತ್ತಿದೆ. ಕೆಲವರು ಪಾಕಿಸ್ತಾನದ ಸಂಸತ್ತಿನಲ್ಲಿರುವ ಜನನಾಯಕರನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ನಾಚಿಕೆಗೇಡಿನ ಸಂಗತಿಯೆಂದರೆ, ಈ ಕೋಲಾಹಲ ನಡೆಯುತ್ತಿರುವಾಗ, ಪಾಕಿಸ್ತಾನ ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥ ಮತ್ತು ಜಂಟಿ ಮುಖ್ಯಸ್ಥರ ಸಿಬ್ಬಂದಿ ಸಮಿತಿಯ ಅಧ್ಯಕ್ಷರಾದ ಪ್ರಧಾನಿ ಇಮ್ರಾನ್ ಖಾನ್ ಸಹ ಸಂಸತ್ತಿನಲ್ಲಿ ಉಪಸ್ಥಿತರಿದ್ದರು.
ಪಾಕ್ ಸಂಸತ್ತಿನಲ್ಲಿ ಸಂಸದರ ಗದ್ದಲದ ವಿಡಿಯೋ ನೋಡಿ ...
ವಾಸ್ತವವಾಗಿ, ಗುರುವಾರ ನಡೆದ ಜಂಟಿ ಅಧಿವೇಶನದಲ್ಲಿ, ರಾಷ್ಟ್ರಪತಿ ಆರಿಫ್ ಅಲ್ವಿ ಅವರ ಭಾಷಣದಲ್ಲಿ ಪಿಎಂ ಇಮ್ರಾನ್ ಖಾನ್ ವಿರುದ್ಧ ಸಾಕಷ್ಟು ಘೋಷಣೆಗಳನ್ನು ಎತ್ತಲಾಯಿತು. ಸಂಸತ್ತಿನ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಸಾಕಷ್ಟು ಘೋಷಣೆಗಳನ್ನು ಕೂಗಲಾರಂಭಿಸಿದರು. ಇಮ್ರಾನ್ ಖಾನ್ ಸರ್ಕಾರದ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಅಧಿವೇಶನವನ್ನು ಕರೆಯಲಾಯಿತು. ಒಂದು ವರ್ಷ ಪೂರೈಸಿದ ಇಮ್ರಾನ್ ಖಾನ್ ಸರ್ಕಾರವನ್ನು ರಾಷ್ಟ್ರಪತಿ ಅಲ್ವಿ ಅಭಿನಂದಿಸಿದ ಕೂಡಲೇ ಸಂಸತ್ತಿನಲ್ಲಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷದ ನಾಯಕ ಇಮ್ರಾನ್ ಖಾನ್ ಅವರ ವಿದೇಶಾಂಗ ನೀತಿಯನ್ನು ಪ್ರಶ್ನಿಸಲು ಪ್ರಾರಂಭಿಸಿದರು ಮತ್ತು ಎಲ್ಲಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ವಿಫಲತೆಗೆ ಇಮ್ರಾನ್ ಸರ್ಕಾರವನ್ನು ಶಪಿಸಿದರು.
ಇದು ಇಮ್ರಾನ್ ಖಾನ್ ಅವರ ಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಪ್ರತಿಪಕ್ಷದ ನಾಯಕ 'ಗೋ ನಿಯಾಜಿ ಗೋ' ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವಿಚಾರ ತಾರಕಕ್ಕೇರಿ ಆಡಳಿತ ಪಕ್ಷದ ಸಂಸದರು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸಾಕಷ್ಟು ಮಾರಾಮಾರಿ ಆರಂಭವಾಗಿತು. ಪರಿಸ್ಥಿತಿಯನ್ನು ನಿಯಂತ್ರಿಸಲು, ಸೇನಾ ನಾಯಕರು ಮಧ್ಯಪ್ರವೇಶಿಸಬೇಕಾಯಿತು. ಆದರೆ ಇದರ ನಂತರವೂ ಪಾಕ್ ನಾಯಕರ ನಡುವೆ ಹೊಡೆದಾಟ ಕಂಡು ಬಂದಿದೆ.
ಪಾಕಿಸ್ತಾನ ಸಂಸತ್ತಿನಲ್ಲಿ ಈ ಮುಜುಗರದ ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಪಾಕ್ ನಾಯಕರ ಕೋಲಾಹಲ ಮತ್ತು ಘೋಷಣೆಗಳನ್ನು ಕಾಣಬಹುದು.