Woman Joined Adult Site To Buy Home: ಜನರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಶ್ರಮಿಸುತ್ತಾರೆ. ಸರಿಯಾದ ಯೋಜನೆ ಮತ್ತು ಹೂಡಿಕೆಯೊಂದಿಗೆ, ಅನೇಕ ಜನರು ತಮ್ಮ ಕನಸನ್ನು ನನಸಾಗಿಸುತ್ತಾರೆ. ಆದರೆ ಅಂತಹ ಮನೆ ಕಟ್ಟಲೆಂದು ಅಡಲ್ಟ್  ಚಿತ್ರ ಲೋಕಕ್ಕೆ ಕಾಲಿಡಲು ಬಯಸುತ್ತಾರೆಯೇ? ಈ ಮಾತು ಆಶ್ಚರ್ಯ ಎನಿಸಿದರೂ ಸತ್ಯ. ಇದು ಫ್ಯಾಂಟಸಿ ಅಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಎಮಿಲಿ ಎಂಬಾಕೆಯ ನಿಜವಾದ ಕಥೆ.  


COMMERCIAL BREAK
SCROLL TO CONTINUE READING

 ಇದನ್ನೂ ಓದಿ: Ghost Video: ಮತ್ತೆ ಬಂದ ಮೃತಪಟ್ಟಿದ್ದ ವ್ಯಕ್ತಿ…ದೆವ್ವದ ಜೊತೆ ಮಾತನಾಡಿದ ಸಿಬ್ಬಂದಿ..ಕ್ಯಾಮರಾದಲ್ಲಿ ವಿಡಿಯೋ ಸೆರೆ


ಬ್ರಿಟಿಷ್ ಸುದ್ದಿ ವೆಬ್‌ಸೈಟ್ 'ಡೈಲಿ ಸ್ಟಾರ್' ಪ್ರಕಾರ, ಎಮಿಲಿ ಎಂಬಾಕೆಗೆ ಆರ್ಥಿಕ ಸಂಕಷ್ಟವಿದ್ದು, ಈ ಹಿನ್ನೆಲೆಯಲ್ಲಿ ನೀಲಿಚಿತ್ರ ಉದ್ಯಮಕ್ಕೆ ಬಂದಿದ್ದಾಳೆ. ಈಕೆ ಮಾಡೆಲ್ ಆಗಿದ್ದು, ತನ್ನ ಇತ್ತೀಚಿನ ಸಂದರ್ಶನದಲ್ಲಿ ಹೀಗೆ ಹೇಳಿದ್ದಳು. “ತನ್ನ ಹಿಂದಿನ ಗಳಿಕೆಯು ದೈನಂದಿನ ಖರ್ಚುಗಳಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಸ್ವಂತ ಮನೆ ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ನಿತ್ಯ 9 ರಿಂದ 5 ನೌಕರಿ ಬಿಟ್ಟು ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸಲು ಈ ಉದ್ಯಮಕ್ಕೆ ಬಂದಿದ್ದೇನೆ” ಎಂದಿದ್ದಾಳೆ


32 ವರ್ಷದ ಎಮಿಲಿ ಇಂದು ಅಡೆಲ್ಟ್ ರೂಪದರ್ಶಿಯಾಗಿ ಪ್ರತಿ ತಿಂಗಳು ಲಕ್ಷಗಟ್ಟಲೆ ರೂಪಾಯಿ ಸಂಪಾದಿಸುತ್ತಾಳೆ. ಎಮಿಲಿಗೆ ಒಬ್ಬ ಮಗನಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಈಕೆಯ ವಾರ್ಷಿಕ ಆದಾಯ ಸುಮಾರು 1 ಕೋಟಿ 75 ಲಕ್ಷ. ಒಬ್ಬ ಸರಳ ಹುಡುಗಿ ತನ್ನ ಮನೆಯನ್ನು ಕಟ್ಟಲು ಈ ಕೆಲಸವನ್ನು ಪ್ರಾರಂಭಿಸಬೇಕು ಎಂದು ಯೋಚಿಸಲಿಲ್ಲ. ವಾಸ್ತವವಾಗಿ, ಎಮಿಲಿ ಬಾಡಿಗೆ ಮನೆಯ ಜೊತೆಗೆ ಜಮೀನುದಾರನ ಗೇಲಿಗಳಿಂದ ಸಿಟ್ಟಾಗಿದ್ದಳು. ಆದ್ದರಿಂದ ಅವಳು ಸಾಧ್ಯವಾದಷ್ಟು ಬೇಗ ತನ್ನ ಸ್ವಂತ ಮನೆಯನ್ನು ಖರೀದಿಸಲು ಬಯಸಿದ್ದಳು.


 ಇದನ್ನೂ ಓದಿ: Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ!


ಇಂದು ಎಮಿಲಿ ಆಸ್ಟ್ರೇಲಿಯಾದ ಟಾಪ್ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾಳೆ. ಆಕೆಗೆ ಹಣದ ಅವಶ್ಯಕತೆಯೂ ಇಲ್ಲ. ಇನ್ನು ಎಮಿಲಿಯ ಕುಟುಂಬ ಸದಸ್ಯರು ಅವಳ ಈ ನಿರ್ಧಾರವನ್ನು ವಿರೋಧಿಸಿದ್ದರು. ಈ ವೃತ್ತಿಯಿಂದ ದೂರ ಉಳಿಯುವಂತೆ ಹೇಳಿದ್ದರು. ವಾಸ್ತವವಾಗಿ ಎಮಿಲಿ ಸಾಂಪ್ರದಾಯಿಕ ಏಷ್ಯನ್ ಕುಟುಂಬದಿಂದ ಬಂದವರು. ಅಲ್ಲಿ ಆಚರಣೆಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಅವಶ್ಯಕತೆಯು ವ್ಯಕ್ತಿಯನ್ನು ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಎಮಿಲಿ ಬಹುದೊಡ್ಡ ಸಾಕ್ಷಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.