Female TikTok Star: ಗಾಳಿಯಲ್ಲಿ ತೂರಾಡಿದರು.. ಬಟ್ಟೆ ಹರಿದುಹಾಕಿದರು.. ಮೊಬೈಲ್ ಕದ್ದರು..!
ಟಿಕ್‌ಟಾಕ್ ನಲ್ಲಿ ವಿಡಿಯೋ ಮಾಡುತ್ತಾ ಖ್ಯಾತಿ ಗಳಿಸಿದ್ದ ಯುವತಿ ಮತ್ತು ಆಕೆಯ ಸಹಚರರ ಮೇಲೆ ನೂರಾರು ವ್ಯಕ್ತಿಗಳು ದೌರ್ಜನ್ಯವೆಸಗಿದ್ದಾರೆ.
ಲಾಹೋರ್: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳಾ ಟಿಕ್‌ಟಾಕ್ ಸ್ಟಾರ್(Female TikTok Star) ಮೇಲೆ ನೂರಾರು ಜನರು ಸೇರಿಕೊಂಡು ದೌರ್ಜನ್ಯವೆಸಗಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾ(Social Media)ವಿಡಿಯೋ ಸಖತ್ ವೈರಲ್ ಆಗಿದೆ.
ಟಿಕ್‌ಟಾಕ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಖ್ಯಾತಿ ಗಳಿಸಿದ್ದ ಯುವತಿ ಮತ್ತು ಆಕೆಯ ಸಹಚರರ ಮೇಲೆ ನೂರಾರು ಅಪರಿಚಿತ ವ್ಯಕ್ತಿಗಳು ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಲಾಹೋರ್ ಪೊಲೀಸರು(Lahore Police) ದೂರು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ(Pakistan Independence Day) ದಿನದಂದೇ ಲಾಹೋರ್‌ನ ಗ್ರೇಟರ್ ಇಕ್ಬಾಲ್ ಪಾರ್ಕ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್
ಮಹಿಳಾ ಟಿಕ್‌ಟಾಕ್ ಸ್ಟಾರ್(Female TikToker)ನೀಡಿದ ದೂರಿನ ಮೇರೆಗೆ ದಾಖಲಾದ ಎಫ್‌ಐಆರ್‌ನಲ್ಲಿ ದೌರ್ಜನ್ಯ ಎಸಗಿದ ವ್ಯಕ್ತಿಗಳ ಕೃತ್ಯವನ್ನು ಉಲ್ಲೇಖಿಸಲಾಗಿದೆ. ‘ಸ್ವಾತಂತ್ರ್ಯ ದಿನದಂದು ಮಿನಾರ್-ಇ-ಪಾಕಿಸ್ತಾನದ ಬಳಿ ಸುಮಾರು 300 ರಿಂದ 400 ಜನ ವ್ಯಕ್ತಿಗಳು ನಮ್ಮ ಮೇಲೆ ಏಕಾಏಕಿ ದಾಳಿ ಮಾಡಿದರು. ಟಿಕ್‌ಟಾಕ್ ಮಾಡುತ್ತಿಯಾ ಅಂತಾ ಹೇಳಿ ಹಲವರು ನನ್ನನ್ನು ಗಾಳಿಯಲ್ಲಿ ತೂರಾಡಿದರು. ಮೇಲಕ್ಕೆ ಎಸೆಯುತ್ತಾ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಬಟ್ಟೆಯನ್ನು ಹರಿದುಹಾಕಿದರು. ಕೊನೆಗೆ ನನ್ನ ಮೊಬೈಲ್ ಅನ್ನು ಕೂಡ ಕಸಿದುಕೊಂಡಿದ್ದಾರೆ. ಸಾಲದ್ದಕ್ಕೆ ನನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಮಜಾ ತೆಗೆದುಕೊಂಡಿದ್ದಾರೆ ಅಂತಾ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.
ಯುವತಿ ಮತ್ತು ಆಕೆಯ ಸಹಚರರು ಗುಂಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಉದ್ಯಾನದ ಭದ್ರತಾ ಸಿಬ್ಬಂದಿ ಮಿನಾರ್-ಇ-ಪಾಕಿಸ್ತಾನ(Minar-e-Pakistan)ದ ಸುತ್ತಲಿನ ಆವರಣದ ಗೇಟ್ ತೆರೆಯುವ ಮೂಲಕ ದೌರ್ಜನ್ಯಕ್ಕೆ ಸಿಲುಕಿದವರ ಸಹಾಯಕ್ಕೆ ಪ್ರಯತ್ನಿಸಿದರು. ಆದರೆ ಜನಸಂದಣಿ ಹೆಚ್ಚಾಗಿದ್ದರಿಂದ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವರು ನನ್ನನ್ನು ತಳ್ಳುತ್ತಿದ್ದರೆ, ಮತ್ತೆ ಕೆಲವರು ನನ್ನನ್ನು ಎಳೆಯುತ್ತಿದ್ದರು. ನನ್ನ ಬಟ್ಟೆ ಹರಿದು ಹಾಕುವಾಗ ಕೆಲವರು ನನಗೆ ಸಹಾಯ ಮಾಡಲು ಮುಂದಾದರು. ಹೆಚ್ಚಿನ ಜನರು ಇದ್ದಿದ್ದರಿಂದ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: Viral News: ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ ಪತ್ತೆ..!
ನನ್ನ ಬಳಿ ಇದ್ದ ಉಂಗುರ ಮತ್ತು ಕಿವಿಯೋಲೆಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ನಮ್ಮ ಮೊಬೈಲ್ ಫೋನ್ ಗಳನ್ನು ಕಸಿದುಕೊಂಡಿದ್ದಾರೆ ಅಂತಾ ಯುವತಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ಮಹಿಳಾ ಟಿಕ್‌ಟಾಕರ್ ಮೇಲೆ ದೌರ್ಜನ್ಯವೆಸಗಿರುವ ಅಪರಿಚ ವ್ಯಕ್ತಿಗಳ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಆಘಾತಕಾರಿ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟಿಜನ್ ಗಳು ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ