ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಗುಹೆ(Saudi Arabia Cave)ಯೊಂದರಲ್ಲಿ ಮೂಳೆಗಳ ರಾಶಿಯೇ ಪತ್ತೆಯಾಗಿದೆ. 1.5 ಕಿ.ಮೀ. ಉದ್ದದ ಶಿಲಾರಸದ ಕೊಳವೆಯಾದ್ಯಂತ ಹರಡಿಕೊಂಡಿರುವ ಬೃಹತ್ ಮೂಳೆಗಳ ಸಂಗ್ರಹವನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಜ್ವಾಲಾಮುಖಿಯ ಲಾವಾ ದ್ರವದಿಂದ ನಿರ್ಮಾಣವಾಗಿರುವ ಈ ಗುಹೆಯನ್ನು ಉಮ್ ಜಿರ್ಸಾನ್ ಅಂತಾ ಹೆಸರಿಸಲಾಗಿದೆ. ಮಾನವ ಸೇರಿದಂತೆ ಬೇರೆ ಬೇರೆ ಜೀವಿಗಳ ಲಕ್ಷಾಂತರ ಮೂಳೆಗಳು ಈ ಗುಹೆಯೊಳಗೆ ಪತ್ತೆಯಾಗಿವೆ.
ಬರೋಬ್ಬರಿ 7 ಸಾವಿರ ವರ್ಷಗಳ ಅವಧಿಯಲ್ಲಿ ಕತ್ತೆಕಿರುಬ(Hyenas)ಗಳು ತಿಂದುಹಾಕಿರುವ ಕಳೇಬರಗಳು ಇರಬೇಕೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ದನಗಳು, ಒಂಟೆಗಳು, ಕುದುರೆಗಳು, ಕ್ಯಾಪ್ರಿಡ್‌ಗಳು, ದಂಶಕ ಸೇರಿ ಇತರ ಹಲವು ಪ್ರಾಣಿಗಳು ಮೂಳೆಗಳ ಜೊತೆಗೆ ಮಾನವನ ತಲೆಬುರುಡೆಗಳ ಅವಶೇಷಗಳು ಸೌದಿ ಅರೇಬಿಯನ್ ಗುಹೆಯಲ್ಲಿ ಪತ್ತೆಯಾಗಿವೆಯಂತೆ. 1,917 ಮೂಳೆಗಳು ಹಾಗೂ ಹಲ್ಲುಗಳನ್ನು ರೇಡಿಯೋ ಕಾರ್ಬನ್ ವಿಶ್ಲೇಷಣೆಗೊಳಪಡಿಸಿದಾಗ ಈ ಪಳೆಯುಳಿಕೆಗಳು 439 ರಿಂದ 6,839 ವರ್ಷಗಳಷ್ಟು ಹಳೆಯದಾಗಿವೆ ಅಂತಾ ಪುರಾತತ್ವ ಶಾಸ್ತ್ರಜ್ಞರು(Archaeologists)ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜಾಗತಿಕ ಭಯೋತ್ಪಾದಕ ಬೆದರಿಕೆಯ ನಿಗ್ರಹಕ್ಕೆ ಜಗತ್ತು ಒಂದಾಗಬೇಕಾಗಿದೆ-ವಿಶ್ವಸಂಸ್ಥೆ
ಈ ರೀತಿಯ ಅನೇಕ ಸ್ಥಳಗಳು ವಿಶ್ವದಲ್ಲಿ ಇನ್ನೂ ಸಾಕಷ್ಟಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮಾಂಸಹಾರಿ ಜೀವಿಗಳು ತಮ್ಮ ಆಹಾರ ಸೇವಿಸಲು ಲಾವಾ ಗುಹೆಗಳನ್ನು ಬಳಸುತ್ತಿದ್ದವು ಅಂತಾ ಕಂಡುಕೊಳ್ಳಲಾಗಿದೆ. ಈ ಮೂಳೆಗಳ ರಾಶಿಯಿಂದ ಪುರಾತನ ಅರೇಬಿಕ್ ಇತಿಹಾಸ ಅರಿತುಕೊಳ್ಳಲು ಸಹಕಾರಿಯಾಗುತ್ತೆ ಅಂತಾ ಹೇಳಲಾಗಿದೆ. ಈ ಗುಹೆಯಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಮೂಳೆ(Bones)ಗಳ ರಾಶಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೂಳೆಗಳ ಸಂಗ್ರಹದಲ್ಲಿ ಕತ್ತೆಕಿರುಬಗಳ ಮೂಳೆಗಳು ಸೇರಿಕೊಂಡಿದ್ದು, ಅಧ್ಯಯನದಿಂದ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.
By studying the types of bone surface modifications, their frequencies, & locations, we conclude that the bones at Umm Jirsan were brought in by striped hyena.
These critters are avid collectors of bones, which they transport to dens to be consumed, fed to young, or cached. pic.twitter.com/BeaiNPWVMn
— Stewie Stewart (@StewieStewart13) July 21, 2021
ಇದನ್ನೂ ಓದಿ: ಆಫ್ಘಾನ್ ಹಿಂದು ಮತ್ತು ಸಿಖ್ ಗಳಿಗೆ ಭಾರತಕ್ಕೆ ಮರಳಲು ನೆರವು ನೀಡಲಾಗುವುದು ಎಂದ ಕೇಂದ್ರ
ಸಂಶೋಧಕರು ಕೂಡ ಅಪಾರ ಪ್ರಮಾಣದ ಮೂಳೆ ರಾಶಿ ಕಂಡು ಅದರ ಮೂಲವನ್ನು ಕಂಡುಹಿಡಿಯಲು ತಲೆಕೆಡಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದ ಪ್ರಾಚೀನ ಗುಹೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೂಳೆಗಳ ರಾಶಿ ಪತ್ತೆಯಾಗಿರುವುದು ಅನೇಕ ಯಕ್ಷಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾನವನ ತಲೆಬುರುಡೆಗಳು ಸೇರಿದಂತೆ ಅಪಾರ ಪ್ರಮಾಣದ ಪ್ರಾಣಿಗಳು ಮೂಳೆಗಳು ಗುಹೆಯಲ್ಲಿ ಕಂಡುಬಂದಿರುವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆ ಪೂರ್ಣಗೊಂಡ ಬಳಿಕವಷ್ಟೇ ಇವು ಎಷ್ಟು ವರ್ಷ ಹಿಂದಿನವು, ಯಾವ ಪ್ರಾಚೀನ ಯುಗಕ್ಕೆ ಸೇರಿದ್ದು, ಯಾವ ಯಾವ ಪ್ರಾಣಿಗಳ ಮೂಳೆಗಳು ಎನ್ನುವುದು ತಿಳಿದುಬರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ