Ukraine-Russia War Latest News: ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು 16 ತಿಂಗಳ ಕಾಲ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅತ್ಯಂತ ವಿನಾಶಕಾರಿ ಪರಮಾಣು ಶಸ್ತ್ರಾಸ್ತ್ರಗಳ ಮೊದಲ ದಾಸ್ತಾನು ಬೆಲಾರಸ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಗಮನಾರ್ಹವಾಗಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ವರ್ಷದ ಮಾರ್ಚ್‌ನಲ್ಲಿ ಬೆಲಾರಸ್‌ನಲ್ಲಿ ಯುದ್ಧತಂತ್ರದ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದಾಗಿ ಘೋಷಿಸಿದ್ದರು.


COMMERCIAL BREAK
SCROLL TO CONTINUE READING

ಉಕ್ರೇನ್‌ನಲ್ಲಿ ಅಹಿತಕರ ಘಟನೆಯ ಭಯ
'ದಿ ಹಿಲ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಷ್ಯಾದ ಅಧ್ಯಕ್ಷ ಪುಟಿನ್ ಅವರೇ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಅದರ ನಂತರ ಅವರ ಉದ್ದೇಶದ ಬಗ್ಗೆ ಪ್ರಶ್ನೆಗಳು ಉದ್ಭವಿಸಲಾರಂಭಿಸಿವೆ. ವಾಸ್ತವದಲ್ಲಿ, ಸೇಂಟ್ ಪೀಟರ್ಸ್ಬರ್ಗ್ ಇಂಟರ್ನ್ಯಾಷನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, 'ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳ ಮೊದಲ ದಾಸ್ತಾನು ಇದೀಗ  ಬೆಲಾರಸ್ ತಲುಪಿದೆ. ಈ ಬೇಸಿಗೆಯ ಅಂತ್ಯದ ವೇಳೆಗೆ ನಮ್ಮ ಉಳಿದ ಪರಮಾಣು ಶಸ್ತ್ರಾಸ್ತ್ರಗಳು ಸಹ ಅಲ್ಲಿಗೆ ತಲುಪಲಿವೆ ಎಂದಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ-Shehbaz Sharif ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆಯೇ? ಪಾಕ್ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ


ಪಾಶ್ಚಿಮಾತ್ಯ ದೇಶಗಳಿಗೆ ದಿಟ್ಟ ಎಚ್ಚರಿಕೆ
ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸ್ಥಿತಿಯ ಬಗ್ಗೆ ಮಾಡಲಾಗುತ್ತಿರುವ ಹಕ್ಕುಗಳು ಮತ್ತು ಊಹಾಪೋಹಗಳಿಗೆ ಅಂತ್ಯ ಹಾಡಿರುವ ಪುಟಿನ್, ಉಕ್ರೇನ್ ಅನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಅಮೆರಿಕ ಸೇರಿದಂತೆ ಪ್ರತಿಯೊಂದು ದೇಶಕ್ಕೂ ಎಚ್ಚರಿಕೆ ನೀಡಿದ್ದಾರೆ. ಇದೇ ವೇದಿಕೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, "ರಷ್ಯಾ ಮತ್ತು ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಆಲೋಚಿಸುವ ಎಲ್ಲರ ವಿರುದ್ಧ ಇದು ಪರಿಣಾಮಕಾರಿ ಮತ್ತು ರಕ್ಷಣಾತ್ಮಕ ಕ್ರಮವಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ-Biparjoy Update: ಪಾಕಿಸ್ತಾನದಲ್ಲಿ ಭಾರಿ ತಾಂಡವಕ್ಕೆ ಕಾರಣವಾಗುತ್ತಿದೆ ಬಿಪರ್ ಜಾಯ್, ಸೂರು ಕಳೆದುಕೊಂಡ ಸಾವಿರಾರು ಜನ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್


ಬೆಲಾರಸ್ ಹೇಳಿದ್ದೇನು
ಗಮನಾರ್ಹವಾಗಿ, ಬೆಲಾರಸ್ ಪುಟಿನ್ ರಕ್ಷಣೆಯನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಪುಟಿನ್ ಅವರ ಈ ಹೇಳಿಕೆಯು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಹೇಳಿಕೆಯನ್ನು ದೃಢಪಡಿಸುತ್ತದೆ, ಇದರಲ್ಲಿ ಬೆಲಾರಸ್ ಇದೀಗ  ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಏಕೆಂದರೆ ಅದು ರಷ್ಯಾದಿಂದ ಅಪಾಯಕಾರಿ ಬಾಂಬ್ ಮತ್ತು ಕ್ಷಿಪಣಿಗಳ ಮೊದಲ ದಾಸ್ತಾನು ಪಡೆದಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ರಷ್ಯಾ ಮತ್ತು ಬೆಲಾರಸ್‌ನ ರಾಜ್ಯ ಮಾಧ್ಯಮದೊಂದಿಗೆ ಮಾತನಾಡಿದ ನಂತರ, ಲುಕಾಶೆಂಕೊ ಫಾಕ್ಸ್ ನ್ಯೂಸ್‌ಗೆ "ತಾನು ಸ್ವೀಕರಿಸಿದ ಎಲ್ಲಾ ಮಾರಣಾಂತಿಕ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಬಾಂಬ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ" ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ