ಐದು ತಿಂಗಳುಗಳ ನಂತರ H-1B ವೀಸಾಗಳ ಪ್ರೀಮಿಯಂ ಪ್ರಕ್ರಿಯೆಯನ್ನು ಪುನರಾರಂಭಿಸಿದ ಅಮೇರಿಕಾ
H-1B ವೀಸಾಗಳ ಪ್ರೀಮಿಯಂ ಪ್ರಕ್ರಿಯೆಯನ್ನು ಅಮಾನತುಗೊಳಿಸಿದ ಐದು ತಿಂಗಳುಗಳ ನಂತರ ಅಮೇರಿಕಾವು ಈ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದೆ.
ವಾಷಿಂಗ್ಟನ್: H-1B ವೀಸಾ ಅರ್ಜಿಗಳಿಗಾಗಿ ಪ್ರೀಮಿಯಂ ಸಂಸ್ಕರಣೆಯನ್ನು US ನಾಗರಿಕತ್ವ ಮತ್ತು ವಲಸೆ ಸೇವೆಗಳು (USCIS) ನಿನ್ನೆ ಮತ್ತೆ ಪ್ರಾರಂಭಿಸಿದೆ. ಕೆಲಸದ ವೀಸಾಗಳಿಗೆ ಬೇಡಿಕೆ ಅಧಿಕವಾಗಿದ್ದರಿಂದ ಕಳೆದ ಐದು ತಿಂಗಳಿನಿಂದ ಯುಎಸ್ ವೃತ್ತಿಪರರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ವೃತ್ತಿಪರ ವೀಸಾ ಭಾರತೀಯರಿಗೆ ಬಹಳ ಜನಪ್ರಿಯವಾಗಿತ್ತು.
ಹೆಚ್-1ಬಿ ವೀಸಾ ಎನ್ನುವುದು ವಿದೇಶಿ ನೌಕರಿಗೆ ಸೈನಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ನೇಮಿಸಿಕೊಳ್ಳಲು ಅನುಮತಿಸುವ ವಲಸೆರಹಿತ ವೀಸಾ. ತಂತ್ರಜ್ಞಾನ ಕಂಪನಿಗಳು ತನಗೆ ಅಗತ್ಯವಿರುವ ನೌಕರರನ್ನು ನೇಮಿಸಿಕೊಳ್ಳಲು ಇದನ್ನು ಅವಲಂಬಿಸಿವೆ.
2018ನೇ ಆರ್ಥಿಕ ವರ್ಷದಲ್ಲಿ 65,000 ವೀಸಾಗಳನ್ನು ನೀಡುವ ಗುರಿಯನ್ನು ನಿಗದಿಪಡಿಸಲಾಗಿದೆ. ವಾರ್ಷಿಕ 20,000 ಹೆಚ್ಚುವರಿ ಅರ್ಜಿಗಳಿಗೆ ಪ್ರೀಮಿಯಂ ಸಂಸ್ಕರಣೆಯನ್ನು ಪುನರಾರಂಭಿಸಲಾಗಿದೆ. ಇದು ಯು.ಎಸ್. ಉನ್ನತ ಶಿಕ್ಷಣ ಪದವಿಯೊಂದಿಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಮೀಸಲಿಡಲಾಗಿದೆ.
ಒಬ್ಬ ಅರ್ಜಿದಾರನು ಏಜೆನ್ಸಿಯ ಪ್ರೀಮಿಯಂ ಸಂಸ್ಕರಣ ಸೇವೆಯನ್ನು ವಿನಂತಿಸಿದಾಗ, USCIS 15 ದಿನಗಳಲ್ಲಿ ವೀಸಾ ಪ್ರೀಮಿಯಂ ಪ್ರಕ್ರಿಯೆಯನ್ನು ಖಾತರಿ ಪಡಿಸಬೇಕು. "15 ದಿನಗಳಲ್ಲಿ ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ, ಅರ್ಜಿದಾರನ ಪ್ರೀಮಿಯಂ ಪ್ರಕ್ರಿಯೆ ಸೇವಾ ಶುಲ್ಕವನ್ನು ಸಂಸ್ಥೆ ಮರುಪಾವತಿಸುತ್ತದೆ ಮತ್ತು ಅರ್ಜಿಯ ತ್ವರಿತ ಪ್ರಕ್ರಿಯೆ ಮುಂದುವರಿಯುತ್ತದೆ" ಎಂದು USCIS ತಿಳಿಸಿದೆ.