ವಾಷಿಂಗ್ಟನ್: ಮೋದಿ ಸರ್ಕಾರ (Modi Govt) ಕೊರೊನಾವನ್ನು ನಿಯಂತ್ರಿಸಿದ ರೀತಿಗೆ ಅಮೆರಿಕದ ಮಾಧ್ಯಮಗಳು ಕೂಡ ಅಭಿಮಾನಿಗಳಾಗಿ ಮಾರ್ಪಟ್ಟಿವೆ. ಭಾರತದಲ್ಲಿ ವೇಗವಾಗಿ 100 ಕೋಟಿ ಕರೋನಾ ಲಸಿಕೆ ಡೋಸ್‌ಗಳು ಸೇರಿದಂತೆ ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವ ಪರಿಣಾಮವನ್ನು ನಿಯಂತ್ರಿಸಲು ಮೋದಿ ಸರ್ಕಾರ ಕೈಗೊಂಡ ನೀತಿಗಳನ್ನು 'ನ್ಯೂಯಾರ್ಕ್ ಟೈಮ್ಸ್' ಶ್ಲಾಘಿಸಿದೆ. ಆದರೆ, ಕಳೆದ ಕೆಲವು ದಿನಗಳಿಂದ ದಿನನಿತ್ಯದ ಲಸಿಕೆ ಕಡಿಮೆಯಾಗುತ್ತಿರುವ ಬಗ್ಗೆ ಮಾಧ್ಯಮ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಭಾರತೀಯ ನಾಯಕರಿಗೆ ಮೆಚ್ಚುಗೆ:
ಭಾರತದಲ್ಲಿ ಕರೋನಾ (Coronavirus) ಸಾಂಕ್ರಾಮಿಕದ ಬಿಕ್ಕಟ್ಟು ಈಗ ಕಡಿಮೆಯಾಗುತ್ತಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ಬರೆದಿದೆ. 7 ತಿಂಗಳ ಹಿಂದೆ, ದಿನಕ್ಕೆ ಸಾವಿರಾರು ಜನರು ಸಾಯುತ್ತಿದ್ದರು, ಅದು ದಿನಕ್ಕೆ 500 ಕ್ಕಿಂತ ಕಡಿಮೆಯಾಗಿದೆ. ಇದು ಖಂಡಿತವಾಗಿಯೂ ಸರ್ಕಾರದ ಪ್ರಯತ್ನಗಳ ಯಶಸ್ಸನ್ನು ತೋರಿಸುತ್ತದೆ. ಚುಚ್ಚುಮದ್ದಿನ ನೀತಿಗಳನ್ನು ಸುಧಾರಿಸಿದ್ದಕ್ಕಾಗಿ ಪತ್ರಿಕೆಯು ಭಾರತೀಯ ನಾಯಕರನ್ನು ಶ್ಲಾಘಿಸಿದೆ.


ಇದನ್ನೂ ಓದಿ- PM Narendra Modi: ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ


ರಾಜಕೀಯ ಲಾಭ ಪಡೆಯುತ್ತಾರೆ:
NYT ತನ್ನ ವರದಿಯಲ್ಲಿ ಮೋದಿ ಸರ್ಕಾರವು (Modi Govt) 100 ಕೋಟಿ ಲಸಿಕೆಗಳ ಗುರಿಯನ್ನು ತಲುಪಿದೆ ಎಂದು ಹೇಳಿದೆ. ಈ ಯಶಸ್ಸನ್ನು ಸಾರ್ವಜನಿಕರಿಗೆ ಸಾಬೀತುಪಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದರಿಂದ ಮುಂದೆ ಮೋದಿ ಸರಕಾರ ರಾಜಕೀಯ ಲಾಭ ಪಡೆಯಬಹುದು. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜನವರಿಯಲ್ಲಿ ಭಾರತಕ್ಕಾಗಿ 100 ಮಿಲಿಯನ್ ಡೋಸ್ ಕೋವ್‌ಶೀಲ್ಡ್ ಅನ್ನು ಮೀಸಲಿಟ್ಟಿದೆ, ಆದರೆ ಸರ್ಕಾರವು ಆ ತಿಂಗಳು 11 ಮಿಲಿಯನ್ ಡೋಸ್‌ಗಳನ್ನು ಮಾತ್ರ ಖರೀದಿಸಿದೆ ಎಂದು ವರದಿ ಹೇಳಿದೆ.


ಭಾರತವು 100 ಕೋಟಿ ಲಸಿಕೆಗಳ (Corona Vaccine) ಗುರಿಯನ್ನು ಸಾಧಿಸಿದೆ, ಅದು ಅಸಾಧ್ಯವೆಂದು ತೋರುತ್ತಿದೆ ಎಂದು ಅಮೆರಿಕದ ಪತ್ರಿಕೆ ಮೋದಿ ಸರ್ಕಾರವನ್ನು ಶ್ಲಾಘಿಸಿ ಬರೆದಿದೆ. ಕರೋನಾ ವೈರಸ್‌ನಿಂದಾಗಿ ಸುಮಾರು ಒಂದೂವರೆ ವರ್ಷ ಮುಚ್ಚಲ್ಪತ್ತಿದ್ದ ಶಾಲೆಗಳು ಈಗ ಮತ್ತೆ ತೆರೆಯುತ್ತಿವೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಮೋದಿ ಸರ್ಕಾರವು ಮನೆ ಮನೆಗೆ ಲಸಿಕೆ ಹಾಕುವ ಯೋಜನೆಯನ್ನು ಹೊಂದಿದೆ, ಅದು ಪ್ರಯೋಜನವನ್ನು ನೀಡುತ್ತದೆ ಎಂದು NYT ಹೇಳಿದೆ. ಇತ್ತೀಚಿನವರೆಗೂ, ದೈನಂದಿನ ಸೋಂಕು 42,000 ಆಗಿತ್ತು, ಈಗ ಅದು ದಿನಕ್ಕೆ ಸುಮಾರು 12,000 ಆಗಿದೆ.  


ಇದನ್ನೂ ಓದಿ- Bangladesh: ಬಾಂಗ್ಲಾದೇಶದ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿಗೆ 11 ವರ್ಷಗಳ ಶಿಕ್ಷೆ


ಅದಾಗ್ಯೂ, ಭಾರತದಲ್ಲಿ ವ್ಯಾಕ್ಸಿನೇಷನ್ ನಿಧಾನಗೊಂಡಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ಕಳವಳ ವ್ಯಕ್ತಪಡಿಸಿದೆ. ಹಬ್ಬ ಹರಿದಿನಗಳಿರುವ ಕಾರಣ ಮಾರುಕಟ್ಟೆಗಳಲ್ಲಿ ಜನರ ಓಡಾಟವಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಸೋಂಕು ಕಡಿಮೆಯಾದಾಗ ಜನರು ನಿರ್ಲಕ್ಷ್ಯ ವಹಿಸಿದ್ದಾರೆ. ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದಾರೆ. ಇದರಿಂದ ಮತ್ತೆ ಕರೋನಾವೈರಸ್ ಹರಡುವ ಅಪಾಯ ಹೆಚ್ಚಾಗಬಹುದು ಎಂದು ಅದು ವರದಿ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ