ಇಸ್ಲಾಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಮೊದಲ ಹಿಂದೂ ದೇವಾಲಯ (Hindu Temple) ನಿರ್ಮಾಣಕ್ಕೆ ದಾರಿ ಸುಗಮವಾಗಿದೆ. ವ್ಯಾಪಕ ಟೀಕೆಗಳ ನಂತರ, ಇಮ್ರಾನ್ ಖಾನ್ ಸರ್ಕಾರವು (Imran Khan government) ದೇವಾಲಯಕ್ಕೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆದಿರುವ ಅಧಿಸೂಚನೆಯನ್ನು ಹಿಂಪಡೆದಿದೆ. ಈ ಹಿಂದೆ ಮೂಲಭೂತವಾದಿಗಳ ಎದುರು ಮಂಡಿಯೂರಿದ್ದ ಖಾನ್ ಸರ್ಕಾರ ದೇವಸ್ಥಾನಕ್ಕೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆದಿತ್ತು.
ಫೆಬ್ರವರಿಯಲ್ಲಿ ಭೂಮಿ ಹಂಚಿಕೆಯನ್ನು ರದ್ದುಗೊಳಿಸಿತ್ತು :
ಇಸ್ಲಾಮಾಬಾದ್ನ H-9/2 ರಲ್ಲಿ ನಾಲ್ಕು ಕನಾಲ್ (0.5 ಎಕರೆ) ಭೂಮಿಯನ್ನು ಮೊದಲ ಹಿಂದೂ ದೇವಾಲಯ (Hindu Temple), ಸ್ಮಶಾನ ಮತ್ತು ಸಮುದಾಯ ಕೇಂದ್ರದ ನಿರ್ಮಾಣಕ್ಕಾಗಿ 2016 ರಲ್ಲಿ ಮಂಜೂರು ಮಾಡಲಾಗಿತ್ತು. ನಂತರ, ಅಲ್ಪಸಂಖ್ಯಾತ ವಿರೋಧಿ ನೀತಿಯಿಂದಾಗಿ ಇದನ್ನು ಮುಂದೂಡುತ್ತಲೇ ಬರಲಾಯಿತು.
ಇದನ್ನೂ ಓದಿ : PM Narendra Modi: ಟ್ವಿಟರ್ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ
"ಸಿಡಿಎ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ" :
ವಿವಿಧ ಕಚೇರಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಭೂಮಿಯಲ್ಲಿ ಎಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿಲ್ಲ ಅದನ್ನು ವಾಪಸ್ ಪಡೆಯುವಂತೆ ಆದೇಶಿಸಲಾಗಿತ್ತು. ಸರ್ಕಾರಿ ಆದೇಶವನ್ನು ಸಿಡಿಎ (CDA) ತಪ್ಪಾಗಿ ಅರ್ಥೈಸಿಕೊಂಡಿತ್ತು ಎಂದು, ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
2016ರಲ್ಲಿ ಸಿಕ್ಕಿತ್ತು ಭೂಮಿ :
ಕಳೆದ ವರ್ಷ ಜುಲೈನಲ್ಲಿ, ಸರ್ಕಾರದ ನಿಧಿಯಿಂದ ಹಿಂದೂ ದೇವಾಲಯವನ್ನು ನಿರ್ಮಿಸುವ ಸರ್ಕಾರದ ಕ್ರಮವನ್ನು ಇಸ್ಲಾಮಿಸ್ಟ್ ಗುಂಪುಗಳು ಟೀಕಿಸಿಟ್ಟು. ಇದಾದ ನಂತರ CDA ಹಿಂದೂ ದೇವಾಲಯ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಸ್ಲಾಮಾಬಾದ್ನಲ್ಲಿ (Islamabad) ಒಂದೇ ಒಂದು ಹಿಂದೂ ದೇವಾಲಯ ಅಥವಾ ಹಿಂದೂಗಳಿಗೆ ಯಾವುದೇ ಸ್ಮಶಾನ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ . ಹಿಂದೂ ಸಮುದಾಯದ ಸತತ ಪ್ರಯತ್ನ ಮತ್ತು ಪಾಕಿಸ್ತಾನದ (Pakistan) ಮಾನವ ಹಕ್ಕುಗಳ ಆಯೋಗದ ಸೂಚನೆಯಾ ಮೇರೆಗೆ ಸಿಡಿಎ 2016 ರಲ್ಲಿ ಹಿಂದೂ ಸಮುದಾಯಕ್ಕೆ ನಾಲ್ಕು ಕನಾಲ್ ಭೂಮಿಯನ್ನು ಮಂಜೂರು ಮಾಡಿತ್ತು.
ಇದನ್ನೂ ಓದಿ : Bangladesh: ಬಾಂಗ್ಲಾದೇಶದ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿಗೆ 11 ವರ್ಷಗಳ ಶಿಕ್ಷೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.