PM Narendra Modi: ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ

PM Narendra Modi: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ಯಾವ ನಾಯಕನೂ ಕೂಡ ಮೋದಿಯವರಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ.  ಟ್ವಿಟರ್‌ನಲ್ಲಿ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಇದಲ್ಲದೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Written by - Yashaswini V | Last Updated : Nov 10, 2021, 08:25 AM IST
  • ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ ಮೊದಲ ಸ್ಥಾನದಲ್ಲಿದ್ದಾರೆ
  • ಸಚಿನ್ ತೆಂಡೂಲ್ಕರ್ 35ನೇ ಸ್ಥಾನದಲ್ಲಿದ್ದಾರೆ
  • ಈ ಪಟ್ಟಿಯಲ್ಲಿ ಸಚಿನ್ ಹಲವು ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ್ದಾರೆ
PM Narendra Modi: ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ title=
Narendra Modi- second Most Influential Person on Twitter

PM Narendra Modi: ಟ್ವಿಟರ್‌ನಲ್ಲಿ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi)  ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ (Taylor Swift) ಮೊದಲ ಸ್ಥಾನ ಪಡೆದಿದ್ದಾರೆ. ಗ್ರಾಹಕ ಗುಪ್ತಚರ ಸಂಸ್ಥೆ ಬ್ರಾಂಡ್ ವಾಚ್ ವಾರ್ಷಿಕ ಸಂಶೋಧನೆಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ, ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಪ್ರಸ್ತುತಪಡಿಸಲಾಗಿದೆ. ಅದೇನೆಂದರೆ,  ಈ ಸೋಶಿಯಲ್ ಮೀಡಿಯಾದಲ್ಲಿ ಯಾವ ನಾಯಕನೂ ಕೂಡ ಮೋದಿಯವರಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. 

ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಹೆಸರೂ ಸೇರಿದೆ:
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್  (Sachin Tendulkar)  ಹೆಸರೂ ಸೇರಿದೆ. ಕುತೂಹಲಕಾರಿಯಾಗಿ, ಸಚಿನ್ ಅಮೆರಿಕದ ನಟ ಡ್ವೇನ್ ಜಾನ್ಸನ್, ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಯುಎಸ್ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ. 

ಇದನ್ನೂ ಓದಿ- ಬರಿಗಾಲಲ್ಲೇ ಬಂದು ಪದ್ಮಶ್ರೀ ಸ್ವೀಕರಿಸಿದ ಕರ್ನಾಟಕದ ಹೆಮ್ಮೆ ತುಳಸಿ ಗೌಡ

ಸಚಿನ್ ಅವರು ದುರ್ಬಲ ವರ್ಗಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಇದಲ್ಲದೆ, ಅವರ ಅಸೋಸಿಯೇಟ್ ಬ್ರ್ಯಾಂಡ್‌ನ ಸಂಬಂಧಿತ ಪ್ರಭಾವಿ ಪ್ರಚಾರದಿಂದಾಗಿ ಅವರ ಅಭಿಮಾನಿಗಳ ಅನುಸರಣೆ ಅಪಾರವಾಗಿ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಅವರು ಈ ಪಟ್ಟಿಯಲ್ಲಿ 35 ನೇ ಸ್ಥಾನದಲ್ಲಿದ್ದಾರೆ.

ತೆಂಡೂಲ್ಕರ್ ಯುನಿಸೆಫ್ ಜೊತೆ ಸಂಬಂಧ ಹೊಂದಿದ್ದಾರೆ:
ಟೀಂ ಇಂಡಿಯಾದ ಮಾಜಿ ನಾಯಕ, ರಾಜ್ಯಸಭಾ ಸಂಸದರಾಗಿರುವ ಸಚಿನ್, ಒಂದು ದಶಕಕ್ಕೂ ಹೆಚ್ಚು ಕಾಲ UNICEF ನೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 2013 ರಲ್ಲಿ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ನೇಮಕಗೊಂಡರು. ಸಚಿನ್ ತೆಂಡೂಲ್ಕರ್ ಅವರು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ಅನೇಕ ಉಪಕ್ರಮಗಳನ್ನು ಬೆಂಬಲಿಸಿದ್ದಾರೆ. ಇನ್ನು ಕ್ರಿಕೆಟ್ ಬಗ್ಗೆ ಹೇಳುವುದಾದರೆ ಸಚಿನ್ ಇಂತಹ ಹಲವು ದಾಖಲೆಗಳನ್ನು ಮಾಡಿದ್ದು, ಅವುಗಳನ್ನು ಅಷ್ಟು ಸುಲಭವಾಗಿ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.

ಇದನ್ನೂ ಓದಿ- BJP National Executive Meeting : ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ‘ವಿಜಯ ಮಂತ್ರ’ ಪಠಿಸಲಿದ್ದಾರೆ ಪ್ರಧಾನಿ ಮೋದಿ

ಪ್ರಿಯಾಂಕಾ ಪತಿಗೂ ಸಿಕ್ಕಿದೆಸ್ಥಾನ :
ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಾಸ್, ನಿಕಿ ಮಿನಾಜ್, ಬೆಯೋನ್ಸ್, ಲೂಯಿಸ್ ಟಾಮ್ಲಿನ್ಸನ್, ಬ್ರೂನೋ ಮಾರ್ಸ್, ಲಿಯಾಮ್ ಪೇನ್ ಮತ್ತು ಟಕಫುಮಿ ಹೋರಿ ಕೂಡ ಈ 'ಬ್ರಾಂಡ್‌ವಾಚ್' ಪಟ್ಟಿಯಲ್ಲಿ ಸೇರಿದ್ದಾರೆ. ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ 61 ಪ್ರತಿಶತ ಪುರುಷರು ಮತ್ತು 39 ಪ್ರತಿಶತ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿರುವ 67 ಪ್ರತಿಶತ ಜನರು ಅಮೆರಿಕದಿಂದ, 13 ಪ್ರತಿಶತ ಬ್ರೆಜಿಲ್‌ನಿಂದ ಬಂದವರು ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News