ನವದೆಹಲಿ: ಉಕ್ರೇನ್ ಜೊತೆಗಿನ ರಷ್ಯಾದ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈಗ ಜಿ7 ರಾಷ್ಟ್ರಗಳು ರಷ್ಯಾದ ಚಿನ್ನದ ಆಮದಿನ ಮೇಲೆ ನಿಷೇಧ ಹೇರಿವೆ.


COMMERCIAL BREAK
SCROLL TO CONTINUE READING

ಬ್ರಿಟನ್, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಕೆನಡಾದ ಈ ಕ್ರಮವು ಮಾಸ್ಕೋದ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸುವ ಪ್ರಯತ್ನಗಳ ಭಾಗವಾಗಿದೆ.ಉಕ್ರೇನ್ ಮೇಲೆ ರಷ್ಯಾದ ಅಧ್ಯಕ್ಷ್ಯ ವಾಡ್ಲಿಮೀರ್ ಪುಟಿನ್ ವಿಶೇಷ ಕಾರ್ಯಾಚರಣೆಯನ್ನು ಘೋಷಿಸಿರುವ ಬೆನ್ನಲ್ಲೇ ಈಗ ಪಾಶ್ಚ್ಯಾತ್ಯ ರಾಷ್ಟ್ರಗಳ ನಿರ್ಬಂಧ ಬಂದಿದೆ.


ಇದನ್ನೂ ಓದಿ: Naga Chaitanya ಹಾಗೂ ಶೋಭಿತ ಧೂಳಿಪಾಲ ಅಫೈರ್ ಕುರಿತು ಮೌನ ಮುರಿದ ಸಮಂತಾ ಹೇಳಿದ್ದೇನು?


ಈಗ ಈ ಕುರಿತಾಗಿ ಹೇಳಿಕೆ ನೀಡಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ "ನಾವು ಇಂದು ಘೋಷಿಸಿದ ಕ್ರಮಗಳು ರಷ್ಯಾದ ಮೇಲೆ ನೇರವಾಗಿ ಹೊಡೆಯುತ್ತವೆ ಮತ್ತು ಪುಟಿನ್ ಅವರ ಯುದ್ಧ ಯಂತ್ರದ ಹೃದಯಭಾಗದಲ್ಲಿ ಹೊಡೆಯುತ್ತವೆ" ಎಂದು ಅವರು ತಿಳಿಸಿದ್ದಾರೆ.


ಇನ್ನೊಂದೆಡೆಗೆ ಅಮೆರಿಕಾದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ "ಇದು ಪ್ರಮುಖ ರಫ್ತು, ಜಾಗತಿಕ ಹಣಕಾಸು ವ್ಯವಸ್ಥೆಯೊಂದಿಗೆ ವಹಿವಾಟು ನಡೆಸುವ ಸಾಮರ್ಥ್ಯದ ದೃಷ್ಟಿಯಿಂದ ರಷ್ಯಾಕ್ಕೆ ಆದಾಯದ ಪ್ರಮುಖ ಮೂಲವಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Vikrant Rona: ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್? ಕಿಚ್ಚನ ಲೆಕ್ಕಾಚಾರವೇನು!


ಕಳೆದ ವರ್ಷ ರಷ್ಯಾದ ಚಿನ್ನದ ರಫ್ತು 12.6 ಶತಕೋಟಿ ಪೌಂಡ್ ($15.45 ಶತಕೋಟಿ) ಮೌಲ್ಯದ್ದಾಗಿತ್ತು ಮತ್ತು ಶ್ರೀಮಂತ ರಷ್ಯನ್ನರು ಪಾಶ್ಚಿಮಾತ್ಯ ನಿರ್ಬಂಧಗಳ ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ಬೆಳ್ಳಿಯನ್ನು ಖರೀದಿಸುತ್ತಿದ್ದಾರೆ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ.ಚಿನ್ನದ ಆಮದು ನಿಷೇಧದ ಜೊತೆಗೆ, G7 ನಾಯಕರು ರಷ್ಯಾದ ತೈಲ ಆಮದುಗಳ ಮೇಲಿನ ಸಂಭವನೀಯ ಬೆಲೆ ಮಿತಿಯ ಬಗ್ಗೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂದು ಜರ್ಮನ್ ಸರ್ಕಾರದ ಮೂಲಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.