Sanjanaa Galrani: ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ? ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ

Sanjanaa Galrani: ಕಳೆದ ಮೇ 19 ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂಜನಾ, ಇದೀಗ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

Written by - Chetana Devarmani | Last Updated : Jun 26, 2022, 02:40 PM IST
  • ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂಜನಾ
  • ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ?
  • ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ
Sanjanaa Galrani: ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ? ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ  title=
ಸಂಜನಾ ಗಲ್ರಾನಿ

Sanjanaa Galrani Son Name: ನಟಿ ಸಂಜನಾ ಗಲ್ರಾನಿ ಕಳೆದ ತಿಂಗಳು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುರವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಮೊನ್ನೆಯಷ್ಟೇ ಮಗನ ನಿಕ್‌ ನೇಮ್‌ ರಿವೀಲ್‌ ಮಾಡಿದ್ದರು ಸಂಜನಾ. ಇದೀಗ ಮಗನ ಹೆಸರನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:  "ನನ್ನ ನೆಚ್ಚಿನ ನಟಿ ಅನುಷ್ಕಾ ಶರ್ಮಾ": ಆತ್ಮೀಯ ಸ್ನೇಹಿತೆಯ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

ಕಳೆದ ಮೇ 19 ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂಜನಾ, ಇದೀಗ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಂಜನಾ ಪತಿ ಅಜೀಜ್ ಪಾಷ ಮಗುವಿನ ಜೊತೆ ಇರುವುದನ್ನು ನೋಡಬಹುದು. ಇತ್ತೀಚೆಗಷ್ಟೇ ಮಗುವಿನ ನಾಮಕರಣ ನೆರವೇರಿದ್ದು, ಅಲಾರಿಕ್ ಎಂಬ ಹೆಸರನ್ನು ಇಡಲಾಗಿದೆ. 

"ಇಂದು ನಾನು ನಿಮಗೆ ನನ್ನ ಪರಿಚಯವನ್ನು ಅಧಿಕೃತವಾಗಿ ನೀಡುತ್ತಿದ್ದೇನೆ. ನನ್ನ ಹೆಸರು ಅಲಾರಿಕ್ " ಎಂದು ಸಂಜನಾ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂಜನಾ ಮಗನ ನಿಕ್ ನೇಮ್ ಪ್ರಿನ್ಸ್ ಎಂದು ತಿಳಿಸಿದ್ದರು. ಅಲ್ಲದೇ ಈ ಪುಟಾಣಿಯ ಇನ್ಸಟಾಗ್ರಾಂ ಖಾತೆಯನ್ನು ಸಹ ಆರಂಭಿಸಿದ್ದರು.

 

 

ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ ಆಕ್ಟಿವ್ ಇರುವ ಸಂಜನಾ, ಕಳೆದ ವರ್ಷ ತಾವೂ ತಾಯಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಗರ್ಭಿಣಿಯಾದ ಬಳಿಕ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೇ ಹಿಂದೂ ಹಾಗೂ ಮುಸ್ಲಿಂ ಎರಡೂ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮವನ್ನು ನಡೆಸಲಾಗಿತ್ತು.  

ಇದನ್ನೂ ಓದಿ:  Kiccha Sudeep: ಕಿಚ್ಚ ಸುದೀಪ್‌ಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಕಪಿಲ್‌ ದೇವ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News