Vikrant Rona: ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್? ಕಿಚ್ಚನ ಲೆಕ್ಕಾಚಾರವೇನು!

Vikrant Rona: ಗುರುವಾರ ಮುಂಬೈನಲ್ಲಿ ನಡೆದ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ, ಸುದೀಪ್ ಅವರನ್ನು ಯಶ್ ಅಭಿನಯದ ಕೆಜಿಎಫ್: ಚಾಪ್ಟರ್‌ 2 ರಂತೆ ಅವರ ಚಿತ್ರವೂ ಸಹ "1000 ಕೋಟಿ-ಕ್ಲಬ್ ಫಿಲ್ಮ್" ಆಗಲಿದೆಯೇ ಎಂದು ಪ್ರಶ್ನೆ ಕೇಳಲಾಯಿತು.

Written by - Chetana Devarmani | Last Updated : Jun 26, 2022, 04:30 PM IST
  • ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ
  • ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್?
  • ಸಖತ್‌ ಸದ್ದು ಮಾಡುತ್ತಿರುವ ವಿಕ್ರಾಂತ್​ ರೋಣ ಟ್ರೈಲರ್
Vikrant Rona: ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್? ಕಿಚ್ಚನ ಲೆಕ್ಕಾಚಾರವೇನು!  title=
ವಿಕ್ರಾಂತ್ ರೋಣ

Vikrant Rona: ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅನುಪ್ ಭಂಡಾರಿ ಸೇರಿದಂತೆ ವಿಕ್ರಾಂತ್ ರೋಣ ತಂಡವು ಮುಂಬೈನಲ್ಲಿ ಗುರುವಾರ ಹಿಂದಿ ಆವೃತ್ತಿಯ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಮತ್ತು ಜಾಕ್ವೆಲಿನ್ ಇಬ್ಬರೂ ತಾರೆಯರು ಹಾಡಿನ ಹುಕ್ ಸ್ಟೆಪ್ಸ್ ಹಾಕಿದ್ದು, ನೆರೆದವರ ಕಣ್ಣಿಗೆ ಹಬ್ಬದಂತಿತ್ತು. 

ಇದನ್ನೂ ಓದಿ:  Sanjanaa Galrani: ಸಂಜನಾ ಗಲ್ರಾನಿ ಮಗನ ಹೆಸರೇನು ಗೊತ್ತಾ? ಇಲ್ಲಿದೆ ಮಗುವಿನ ಮುದ್ದಾದ ವಿಡಿಯೋ

ಗುರುವಾರ ಮುಂಬೈನಲ್ಲಿ ನಡೆದ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ, ಸುದೀಪ್ ಅವರನ್ನು ಯಶ್ ಅಭಿನಯದ ಕೆಜಿಎಫ್: ಚಾಪ್ಟರ್‌ 2 ರಂತೆ ಅವರ ಚಿತ್ರವೂ ಸಹ "1000 ಕೋಟಿ-ಕ್ಲಬ್ ಫಿಲ್ಮ್" ಆಗಲಿದೆಯೇ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಸ್ಮಾರ್ಟ್‌ ಆಗಿ ಉತ್ತರಿಸಿದ ಕಿಚ್ಚ ಸುದೀಪ್‌, "1 ಲಕ್ಷ ರೂಪಾಯಿಯ ಕಾರನ್ನು ಚಲಾಯಿಸುವ ವ್ಯಕ್ತಿ ಸಂತೋಷವಾಗಿರುವುದನ್ನು ನಾನು ನೋಡಿದ್ದೇನೆ. ಅದೇ ರೀತಿ ಸಾಮಾನ್ಯ ಕಾರು ಹೊಂದಿರುವವರು ಸಂತೋಷವಾಗಿರುವುದನ್ನು ನಾನು ನೋಡಿದ್ದೇನೆ. 1000 ಕೋಟಿ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸುತ್ತದೆ ಎಂದರೆ ಬಹುಶಃ ನಾನು 2000 ಕೋಟಿ ರೂ. ಗಳಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಹಿಂದಿಯಲ್ಲಿ ಟ್ರೈಲರ್ ಬಿಡುಗಡೆ ಮಾಡಿದರೆ, ಧನುಷ್ ತಮಿಳಿನಲ್ಲಿ, ದುಲ್ಕರ್ ಸಲ್ಮಾನ್ ಮಲಯಾಳಂ, ರಾಮ್ ಚರಣ್ ತೆಲುಗಿನಲ್ಲಿ ಮತ್ತು ಕಿಚ್ಚ ಸುದೀಪ್ ಕನ್ನಡದಲ್ಲಿ ಬಿಡುಗಡೆ ಮಾಡಿದರು.

ವಿಕ್ರಾಂತ್​ ರೋಣ ಟ್ರೈಲರ್ ರಿಲೀಸ್ ಆಗಿ ಸಖತ್‌ ಸದ್ದು ಮಾಡುತ್ತಿದೆ. ಪರಭಾಷೆಯಲ್ಲಿ ದೊಡ್ಡದೊಡ್ಡ ಸ್ಟಾರ್​ಗಳು ಚಿತ್ರವನ್ನು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಿ ವಿಕ್ರಾಂತ್​ ರೋಣ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಕಾತುರ ಕೊಂಚ ಹೆಚ್ಚಾಗಿಯೇ ಇದೆ. 

ಇದನ್ನೂ ಓದಿ:  "ನನ್ನ ನೆಚ್ಚಿನ ನಟಿ ಅನುಷ್ಕಾ ಶರ್ಮಾ": ಆತ್ಮೀಯ ಸ್ನೇಹಿತೆಯ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

ಸಲ್ಮಾನ್ ಖಾನ್ ಫಿಲಂಸ್, ಝೀ ಸ್ಟುಡಿಯೋಸ್ ಮತ್ತು ಉತ್ತರ ಭಾರತದಲ್ಲಿ ಕಿಚ್ಚ ಕ್ರಿಯೇಶನ್ಸ್ ಪ್ರಸ್ತುತಪಡಿಸಿದ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅಭಿನಯದ ವಿಕ್ರಾಂತ್ ರೋಣ ಜುಲೈ 28 ರಂದು ವಿಶ್ವದಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಜಾಕ್‌ ಮಂಜು ನಿರ್ಮಾಣ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News