General Knowledge: ಒಂದು ಕಡೆ ಬೆಳಕಿದ್ದರೆ ಇನ್ನೊಂದು ಕಡೆ ಕತ್ತಲೆ ಎಂಬುದು ಸಾರ್ವತ್ರಿಕ ನಿಯಮ. ಇಂದಿಗೂ ಜಗತ್ತಿನಲ್ಲಿ ಸಾಕಷ್ಟು ದೇಶಗಳಲ್ಲಿ ತಿನ್ನಲು ಸಾಕಷ್ಟು ಆಹಾರವಿಲ್ಲ. ಆ ದೇಶಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಜನರ ಮೂಲಭೂತ ಅಗತ್ಯಗಳಲ್ಲದೇ ಅನಕ್ಷರತೆ, ಬಡತನ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿವೆ. ಇದೀಗ ನಾವು ವಿಶ್ವದ ಬಡ ದೇಶಗಳ ಬಗ್ಗೆ ತಿಳಿಯೋಣ..


COMMERCIAL BREAK
SCROLL TO CONTINUE READING

ದಕ್ಷಿಣ ಸುಡಾನ್: ಆಫ್ರಿಕಾದ ದಕ್ಷಿಣ ಸುಡಾನ್ ದೇಶವು ವಿಶ್ವದ ಅತ್ಯಂತ ಬಡ ದೇಶವಾಗಿದೆ. ದಕ್ಷಿಣ ಸುಡಾನ್‌ನಲ್ಲಿ 11 ಮಿಲಿಯನ್ ಜನರು ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ. ಜುಬಾ ದಕ್ಷಿಣ ಸುಡಾನ್‌ನ ರಾಜಧಾನಿ. 2011 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಹೇರಳವಾದ ತೈಲ ಸಂಪನ್ಮೂಲಗಳ ಹೊರತಾಗಿಯೂ, ದಕ್ಷಿಣ ಸುಡಾನ್ ತನ್ನ ಆರ್ಥಿಕತೆಯನ್ನು ಇನ್ನೂ ಬಲಪಡಿಸಿಕೊಂಡಿಲ್ಲ. 


ಇದನ್ನೂ ಓದಿ-Pakistan Police Station Attack: ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ, 10 ಪೊಲೀಸರು ಹುತಾತ್ಮ, 6 ಮಂದಿಗೆ ಗಾಯ


ಬುರುಂಡಿ: ಬುರುಂಡಿ ವಿಶ್ವದ ಎರಡನೇ ಬಡ ರಾಷ್ಟ್ರವಾಗಿದೆ. ದೇಶವು ದೀರ್ಘಕಾಲದವರೆಗೆ ಅಂತರ್ಯುದ್ಧವನ್ನು ಎದುರಿಸುತ್ತಿದ್ದು.. ಇಲ್ಲಿನ ಶೇ.80 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಬುರುಂಡಿಯು ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ವಿಷಯಗಳಿಗಾಗಿ ಇನ್ನೂ ಹೆಣಗಾಡಬೇಕಾಗಿದೆ.


ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ವಿಶ್ವದ ಮೂರನೇ ಬಡ ರಾಷ್ಟ್ರವಾಗಿದೆ. ಆದರೆ ಚಿನ್ನ, ತೈಲ, ಯುರೇನಿಯಂ ಮತ್ತು ವಜ್ರಗಳಂತಹ ಅನೇಕ ಅಮೂಲ್ಯ ರತ್ನಗಳನ್ನು ಹೊಂದಿದ್ದರೂ, ಈ ದೇಶವು ಬಡತನದಲ್ಲಿ ಮುಳುಗಿದೆ. ಈ ದೇಶದ ಒಟ್ಟು ಜನಸಂಖ್ಯೆ 55 ಲಕ್ಷ.


ಇದನ್ನೂ ಓದಿ-ಸಿನಿಮಾ ಶೈಲಿಯಲ್ಲಿ ಮಾಫಿಯಾ ಕಿಂಗ್ ಜೈಲಿನಿಂದ ಪರಾರಿ..! ಹೇಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ


ಸೊಮಾಲಿಯಾ: ಸೊಮಾಲಿಯಾ ವಿಶ್ವದ ನಾಲ್ಕನೇ ಬಡ ದೇಶವಾಗಿದೆ. ದೇಶಾದ್ಯಂತ ಅಸ್ಥಿರತೆ, ಮಿಲಿಟರಿ ದಬ್ಬಾಳಿಕೆ ಮತ್ತು ಕಡಲ್ಗಳ್ಳತನದಿಂದ ದೇಶವು ಪೀಡಿತವಾಗಿದೆ. ಸೊಮಾಲಿಯಾ 1960 ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆದರೆ ಇನ್ನೂ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಈ ದೇಶದ ಒಟ್ಟು ಜನಸಂಖ್ಯೆ 1 ಕೋಟಿ 26 ಲಕ್ಷ.


ಕಾಂಗೋ: ಕಾಂಗೋ ವಿಶ್ವದ ಐದನೇ ಬಡ ರಾಷ್ಟ್ರವಾಗಿದೆ. ಸರ್ವಾಧಿಕಾರ, ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರವು ಕಾಂಗೋದಲ್ಲಿ ಪರಿಸ್ಥಿತಿಯನ್ನು ಹದಗೆಡಿಸಿವೆ. ಕಾಂಗೋಲೀಸ್ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ದಿನಕ್ಕೆ ಎರಡು ಡಾಲರ್‌ಗಳನ್ನು (166 INR) ಪಡೆಯಲು ಸಾಧ್ಯವಿಲ್ಲ..
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.