ಸಿನಿಮಾ ಶೈಲಿಯಲ್ಲಿ ಮಾಫಿಯಾ ಕಿಂಗ್ ಜೈಲಿನಿಂದ ಪರಾರಿ..! ಹೇಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ

Prisoner Escape : ಆತ ಮಾಫಿಯಾ ಸಾಮ್ರಾಜ್ಯದ ರಾಜ. ವರ್ಷಗಳ ಕಾರ್ಯಾಚರಣೆಗಳ ನಂತರ ಅಂತಿಮವಾಗಿ ಜೈಲು ಸೇರಿದ್ದ. ಆದರೆ ಇದೀಗ ಹೆಚ್ಚಿನ ಭದ್ರತೆಯ ನಡುವೆಯೂ ಆತ ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..

Written by - Krishna N K | Last Updated : Feb 4, 2024, 04:41 PM IST
  • ಕಳ್ಳನನೊಬ್ಬ ಕಠಿಣ ಭದ್ರತೆಯ ನಡುವೆಯೂ ಜೈಲಿನಿಂದ ಪರಾರಿಯಾಗಿದ್ದಾನೆ.
  • ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಮೋಸ್ಟ್ ವಾಂಟೆಡ್' ಕಳ್ಳ ಅಂತ ಕುಖ್ಯಾತಿ ಗಳಿಸಿದ್ದ ಆರೋಪಿ.
  • ಆರೋಪಿ ಪರಾರಿಯಾದ ರೀತಿ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ..
ಸಿನಿಮಾ ಶೈಲಿಯಲ್ಲಿ ಮಾಫಿಯಾ ಕಿಂಗ್ ಜೈಲಿನಿಂದ ಪರಾರಿ..! ಹೇಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ title=

Mafia leader escape : ಪೊಲೀಸರು ಅದೇಷ್ಟೋ ಜಾಣತನ ಪ್ರದರ್ಶನ ಮಾಡಿದ್ರೂ ಸಹ ಕೆಲವೊಮ್ಮೆ ಕಳ್ಳರು ಅವರ ಕಣ್ಣಿಗೆ ಮಣ್ಣೆರಚಿ ಪರಾಗಿಬಿಡುತ್ತಾರೆ. ಅದರಂತೆ ಸಧ್ಯ ಮೊಸ್ಟ್‌ ವಾಂಟೆಡ್‌ ಕಳ್ಳನನೊಬ್ಬ ಕಠಿಣ ಭದ್ರತೆಯ ನಡುವೆಯೂ ಜೈಲಿನಿಂದ ಪರಾರಿಯಾಗಿರುವ ಘಟನೆ ನಡೆದಿದ್ದು, ಆರೋಪಿ ಪರಾರಿಯಾದ ರೀತಿ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ..

ಆತ ಮಾಫಿಯಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಮೋಸ್ಟ್ ವಾಂಟೆಡ್' ಕಳ್ಳ ಅಂತ ಕುಖ್ಯಾತಿ ಗಳಿಸಿದ್ದ. ಕಳ್ಳತನ, ದರೋಡೆಯಂತಹ ಹಲವಾರು ಅಪರಾಧಗಳನ್ನು ಮಾಡುತ್ತಾ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ಆಳುತ್ತಿದ್ದ ಈತನನ್ನು ಕೊನೆಗೂ ಪೊಲೀಸರು ಬಂಧಿಸಿ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆ ವಿಧಿಸಿ. ಅವನನ್ನು ಜೈಲಿಗೆ ಕರೆದೊಯ್ಯಲಾಗಿತ್ತು.

ಇದನ್ನೂ ಓದಿ: ದೇಶಗಳಲ್ಲಿ ಒಂದು ರೂಪಾಯಿಯೂ ತೆರಿಗೆ ಪಾವತಿಸುವಂತಿಲ್ಲ ! ದುಡಿದ ಹಣವೆಲ್ಲಾ ನಿಮ್ಮದೇ

ಇಟಲಿಯ ಫಾಗಿಯಾ ಮೂಲದ ಮಾರ್ಕೊ ರಾಡುನೊ (40) ಸಧ್ಯ ಜೈಲಿನಿಂದ ಪರಾರಿಯಾಗಿರುವ ಆರೋಪಿ. ಫಾಗಿಯಾ ದೇಶದ ಐದನೇ ಅತಿದೊಡ್ಡ ಮಾಫಿಯಾ ಗ್ಯಾಂಗ್ ಅನ್ನು ಹೊಂದಿದ್ದ. ಅನೇಕ ಅಪರಾಧಗಳು ಮತ್ತು ದುಷ್ಕೃತ್ಯಗಳನ್ನು ಎಸಗಿದ್ದ ಈತ ದೇಶಕ್ಕೆ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ. ಪೊಲೀಸರು ಆತನನ್ನು ಹಿಡಿಯಲು ಹರಸಾಹಸ ಪಡುತ್ತಿದ್ದರೂ ಸಿಕ್ಕಿ ಬೀಳುತ್ತಿರಲಿಲ್ಲ. ಫ್ರಾನ್ಸ್‌ನ ಪರ್ಯಾಯ ದ್ವೀಪ ಪ್ರದೇಶವಾದ ಆಲೆರಿಯಾದಲ್ಲಿ ವಿಶೇಷ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿದಾಗ ರಾಡುನೊ ಸಿಕ್ಕಿಬಿದ್ದಿದ್ದ. ರೆಸ್ಟೊರೆಂಟ್‌ನಲ್ಲಿ ಯುವತಿಯೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ರಾಡ್ಯುನೊನನ್ನು ಬಂಧಿಸಲಾಗಿತ್ತು. 

ನಂತರ, ವಿಚಾರಣೆ ನಡೆಸಿ ನ್ಯಾಯಾಲಯವು ರಾಡ್ಯುನೊಗೆ 24 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ಮಾರ್ಕೊ ರಾಡುನೊ ಅವರನ್ನು ಸಾರ್ಡಿನಿಯಾ ಪ್ರದೇಶದ ಜೈಲಿನಲ್ಲಿ ಬಂಧಿಸಲಾಯಿತು. ಶಿಕ್ಷೆ ಅನುಭವಿಸುತ್ತಿದ್ದ ರಾಡ್ಯುನೊ ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೈಲಿನಿಂದ ಪರಾರಿಯಾಗಿದ್ದ. ಈ ಹೈ ಸೆಕ್ಯೂರಿಟಿ ಜೈಲಿನಿಂದ ಆತ ಪರಾರಿಯಾಗಿದ್ದು ನೋಡಿ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ. ಆತ ಹೇಗೆ ತಪ್ಪಿಸಿಕೊಂಡ ಎನ್ನುವ ಪ್ರಶ್ನೆಯೇ ಪೊಲೀಸರಿಗೆ ಸವಾಲ್‌ ಆಗಿತ್ತು.

ಇದನ್ನೂ ಓದಿ:ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ 14 ವರ್ಷಗಳ ಜೈಲು ಶಿಕ್ಷೆ

ಈ ಕ್ರಮದಲ್ಲಿ ಜೈಲಿನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನೋಡಿದ್ದಾರೆ. ರಾಡ್ಯೂನೋ ಪರಾರಿಯಾದ ದೃಶ್ಯಗಳು ಕಂಡು ಬಂದವು. ಆರೋಪಿ ಹೇಗೆ ತಪ್ಪಿಸಿಕೊಂಡರು ಎಂಬುದನ್ನು ನೋಡಿ ಪೊಲೀಸರು ಆಶ್ಚರ್ಯಚಕಿತಾಗಿದ್ದಾರೆ. ರಾಡ್ಯುನೊ ಜೈಲಿನ ಗೋಡೆಗಳನ್ನು ಹಾರಿ ಬಹಳ ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ. 

ಆತನ ಜೈಲಿನಲ್ಲಿ ಖೈದಿಗಳು ಬಳಸುತ್ತಿದ್ದ ಹೊದಿಕೆಗಳು ಮತ್ತು ಬೆಡ್ ಶೀಟ್‌ಗಳ ಸಹಾಯದಿಂದ ದೊಡ್ಡ ಹಗ್ಗವನ್ನು ಮಾಡಿ ಕಂಪೌಂಡ್‌ ಹಾರಿದ್ದಾನೆ. ಈ ದೃಶ್ಯ ಕಂಡ ಪೊಲೀಸರು ಆಶ್ಚರ್ಯ ಚಕಿತರಾಗಿದ್ದಾರೆ. ಸಧ್ಯ ಪರಾರಿಯಾಗಿರುವ ರಾಡ್ಯುನೊಗಾಗಿ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಇದರ ಮಧ್ಯ ಆತ್‌ ತಪ್ಪಿಸಿಕೊಳ್ಳಲು ಸಹ ಕೈದಿಗಳು ಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ. ಸಧ್ಯ ಆರೋಪಿ ಪರಾರಿಯಾಗಿರುವ ವಿಡಿಯೋ ವೈರಲ್‌ ಆಗಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News