Viral Video: ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಬಾಯ್ ಫ್ರೆಂಡ್ ಗೆ ಕಿಸ್ ಮಾಡಲು ಮುಂದಾದ ಯುವತಿ
Girlfriend Kiss Video: ಪಂದ್ಯವೊಂದನ್ನು ವೀಕ್ಷಿಸಲು ಗೆಳತಿ ತನ್ನ ಗೆಳೆಯನೊಂದಿಗೆ ಕ್ರೀಡಾಂಗಣಕ್ಕೆ ತೆರಳಿದ್ದಳು. ಆದರೆ, ಆಕಸ್ಮಿಕವಾಗಿ ಗೆಳೆಯನಿಗೆ ಏನು ತೋಚುತ್ತದೆಯೋ ತಿಳಿಯುವುದಿಲ್ಲ ಮತ್ತು ಆತ ತನ್ನ ಗೆಳತಿಗೆ ಕಿಸ್ ಕೊಡುವಂತೆ ಆಗ್ರಹಿಸುತ್ತಾನೆ. ಗೆಳೆಯನ ಮನವಿಯನ್ನು ತಿರಸ್ಕರಿಸಲಾಗದ ಗೆಳತಿ .....!
Girlfriend Kiss Boyfriend: ಐಪಿಎಲ್ 2022 ರ 10 ನೇ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿ ಏನೋ ಸಂಭವಿಸಿತ್ತು ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿ ಪ್ರೇಕ್ಷಕರ ನಡುವೆ ಕುಳಿತಿದ್ದ ಜೋಡಿಯು ಚುಂಬಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಆದರೆ ಇದೀಗ ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ಆದರೆ, ಈ ವೀಡಿಯೋ ಐಪಿಎಲ್ ಪಂದ್ಯದ ಸಮಯದ ವಿಡಿಯೋ ಅಲ್ಲ, ಬೇರೊಂದು ಪಂದ್ಯದ ವಿಡಿಯೋ ಆಗಿದೆ.
ಪ್ರೇಮಿ ಹಾಗೂ ಆತನ ಗೆಳತಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು (Girlfriend Boyfriend Kiss Video)
ಪಂದ್ಯವನ್ನು ಆನಂದಿಸಲು ಒಬ್ಬ ಯುವಕ ಮತ್ತು ಯುವತಿ ಕ್ರೀಡಾಂಗಣಕ್ಕೆ ಆಗಮಿಸಿದ್ದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಇವರ ನಡೆಗಳನ್ನು ನೋಡಿದರೆ ಇಬ್ಬರೂ ಪ್ರೇಮಿಗಳೇ ಎಂಬಂತೆ ಭಾಸವಾಗುತ್ತದೆ. ಸ್ಟೇಡಿಯಂನಲ್ಲಿ ಮ್ಯಾಚ್ ನೋಡುವಾಗ ಇಬ್ಬರೂ ಸಾಕಷ್ಟು ಎಂಜಾಯ್ ಮಾಡುವುದನ್ನು ನೀವು ಕಾಣಬಹುದು. ಏತನ್ಮಧ್ಯೆ, ಪ್ರೇಮಿಗೆ ಏನು ಮಾಡಬೇಕು ಎಂಬುದು ತೋಚುವುದಿಲ್ಲ ಮತ್ತು ಆತ ತನ್ನ ಗೆಳತಿಯೊಂದಿಗೆ ತಮಾಷೆ ಮಾಡಲು ಯೋಚಿಸುತ್ತಾನೆ. ಇದಾದ ನಂತರ ಏನಾಗುತ್ತದೆ ಎಂಬುದನ್ನು ವಿಡಿಯೋದಲ್ಲಿ ನೋಡಿದ್ರೆ ನಿಮ್ಮಿಂದಲೂ ಕೂಡ ನಗು ತಡೆಯೋಕೆ ಆಗುವುದಿಲ್ಲ.
ಇದನ್ನೂ ಓದಿ-Girl Kiss To Snake Video: ಹಿಸ್..ಹಿಸ್ ಎನ್ನುತ್ತಿದ್ದ ನಾಗರಾಜನಿಗೆ ಕಿಸ್ ಕೊಟ್ಟ ಯುವತಿ, ಮುಂದೇನಾಯ್ತು?
ವೀಡಿಯೊ ಎಷ್ಟು ತಮಾಷೆಯಾಗಿದೆ ಎಂದರೆ ಕ್ಷಣಾರ್ಧದಲ್ಲಿ ಅದನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ. ಪಂದ್ಯದ ವೇಳೆ ಸ್ಟೇಡಿಯಂ ತುಂಬಿ ತುಳುಕುತ್ತಿದ್ದು, ಬಹಳಷ್ಟು ಪ್ರೇಕ್ಷಕರು ಪಂದ್ಯವನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೀವು ಕಾಣಬಹುದು. ಇಲ್ಲಿ ಪ್ರೇಮಿ-ಗೆಳತಿ ಕೂಡ ಪಂದ್ಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಆಗ ಪ್ರಿಯಕರನಿಗೆ ತನ್ನ ಗೆಳತಿಯೊಂದಿಗೆ ಚೇಷ್ಟೆ ಮಾಡಬೇಕೆಂಬ ಬಯಕೆಯಾಗಿದೆ. ಇದಾದ ಬಳಿಕ ತುಂಬಿದ ಸ್ಟೇಡಿಯಂನಲ್ಲಿ ಗೆಳತಿಗೆ ಕಿಸ್ ಕೊಡುವಂತೆ ಆತ ಬೇಡಿಕೆ ಇಡುತ್ತಾನೆ. ವಿಡಿಯೋ ನೋಡಿ -
ಇದನ್ನೂ ಓದಿ-Viral News: ರಾತ್ರಿ ಮಲಗಿದ್ದ ಈ ಬಾಲಕಿ 9 ವರ್ಷ ಏಳಲಿಲ್ಲ, ಎದ್ದಾಗ ತಾಯಿ ಸಾವನ್ನಪ್ಪಿದ್ದರು!
ಪ್ರೇಮಿಯ ಮಾತಿಗೆ ಮರುಳಾದ ಪ್ರೇಯಸಿ (Girlfriend Kiss Boyfriend Video Viral)
ಪ್ರಿಯಕರನ ಬೇಡಿಕೆಯನ್ನು ನಿರಾಕರಿಸಲಾಗದೆ ಗೆಳತಿ ಆತನ ಮಾತಿಗೆ ಮರುಲಾಗಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಇದರ ನಂತರ, ಅವಳು ಕಿಸ್ ಮಾಡಲು ಮುಂದಾದ ತಕ್ಷಣ. ಪ್ರೇಮಿ ತನ್ನ ಮುಖವನ್ನು ಹಿಂದಕ್ಕೆ ತಿರುಗಿಸುತ್ತಾನೆ. ಇದರಿಂದ ಗೆಳತಿ ಎಲ್ಲರ ಮುಂದೆ ನಗೆಪಾಟಲಿಗೀಡಾಗುತ್ತಾಳೆ. ಈ ವೇಳೆ ಕ್ಯಾಮೆರಾಮನ್ ಇಡೀ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಅತ್ಯಂತ ತಮಾಷೆಯ ಸಂಗತಿಯಾಗಿದೆ. ಇದೀಗ ಈ ದೃಶ್ಯ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. giedde ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.