ನವದೆಹಲಿ: ನೀವು ಜಗತ್ತಿನಲ್ಲಿನ ಅನೇಕ ವಿಚಿತ್ರ ಸಂಗತಿಗಳ ಬಗ್ಗೆ ಕೇಳಿರಬಹುದು, ಆದರೆ ಇಂದು ನಾವು ಹೇಳಲಿರುವ ಹುಡಗಿ ಬಗ್ಗೆ ತಿಳಿದುಕೊಂಡರೆ ನಿಮಗೆ ದಿಗ್ಭ್ರಮೆಯಾಗುತ್ತದೆ. ಸುಮಾರು 150 ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ಒಬ್ಬ ಹುಡುಗಿ(Sleeping Girl) ಜನಿಸಿದ್ದರು. ಆಕೆ ತನ್ನ ನಿದ್ರೆಯ ಕಾರಣ ಪ್ರಪಂಚದಾದ್ಯಂತದ ಜನರಿಗೆ ಶಾಕ್ ನೀಡಿದ್ದಳು. ಈ ಹುಡುಗಿ ಬರೋಬ್ಬರಿ 9 ವರ್ಷಗಳವರೆಗೆ ನಿದ್ದೆಯಿಂದ ಏಳಲಾರದ ಸ್ಥಿತಿಯಲ್ಲಿದ್ದಳು.
ವರದಿಯ ಪ್ರಕಾರ 1859ರ ಮೇ 15ರಂದು ಎಲೆನ್ ಸ್ಯಾಡ್ಲರ್(Ellen Sadler) ಎಂಬ ಹುಡುಗಿ ಇಂಗ್ಲೆಂಡ್‌ನಲ್ಲಿ ಜನಿಸಿದಳು. ಈಕೆಗೆ ಒಟ್ಟು 12 ಒಡಹುಟ್ಟಿದವರಿದ್ದರು. ಹುಡುಗಿಯ ಕುಟುಂಬವು ಟರ್ವಿಲ್ಲೆ ಎಂಬ ಹಳ್ಳಿಯಲ್ಲಿ ವಾಸಿಸುತ್ತಿತ್ತು. ಈ ಗ್ರಾಮವು ಆಕ್ಸ್‌ಫರ್ಡ್ ಮತ್ತು ಬಕಿಂಗ್‌ಹ್ಯಾಮ್‌ಶೈರ್ ನಡುವೆ ಇದೆ. ಈ ಹುಡುಗಿ ಹುಟ್ಟುವ ಸಮಯದಲ್ಲಿ ಎಲ್ಲವೂ ಸರಿಯಾಗಿತ್ತು, ಆದರೆ ಹುಡುಗಿಗೆ 12 ವರ್ಷ ತುಂಬಿದಾಗ ಒಂದು ರಾತ್ರಿ ಅವಳು ವಿಚಿತ್ರ ಕಾಯಿಲೆಗೆ ಒಳಗಾಗಿದ್ದಳು. ಇದನ್ನು ಕಂಡು ಪ್ರಪಂಚದಾದ್ಯಂತ ಇರುವ ವೈದ್ಯರೇ ಅಚ್ಚರಿಪಟ್ಟಿದ್ದರು.
ಇದನ್ನೂ ಓದಿ: NASA: ಭೂಮಿಯಿಂದ ಅತಿಹೆಚ್ಚು ದೂರದಲ್ಲಿರುವ ನಕ್ಷತ್ರ ಕಂಡುಹಿಡಿದ ಅಮೆರಿಕ..!
ಮಲಗಿ 9 ವರ್ಷಗಳಾದರೂ ಬಾಲಕಿ ಏಳಲಿಲ್ಲ!
ಹುಡುಗಿಯ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದರು. ಇದಾದ ನಂತರ ಅವರ ತಾಯಿ 2ನೇ ಮದುವೆಯಾದರು. 1871ರ ಮಾರ್ಚ್ 29ರಂದು ಎಲೆನ್(British Sleeping Girl) ಎಂದಿನಂತೆ ತನ್ನ ಒಡಹುಟ್ಟಿದವರ ಜೊತೆ ಮಲಗಲು ಹೋದಳು. ಇದಾದ ನಂತರ ಮರುದಿನ ಬೆಳಗ್ಗೆ ಬಂದಾಗ ಮನೆಯವರೆಲ್ಲ ಎದ್ದರೂ ಎಲೆನ್ ಮಾತ್ರ ನಿದ್ದೆಯಿಂದ ಏಳಲಿಲ್ಲ. ಬಳಿಕ ಮನೆಯವರೆಲ್ಲ ಸೇರಿ ಆಕೆಯನ್ನು ಎಬ್ಬಿಸಲು ಎಷ್ಟೇ ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಆಕೆಯ ಮೈಮೇಲೆ ನೀರು ಸುರಿದರೂ ಆಕೆಗೆ ಎಚ್ಚರವಾಗಲಿಲ್ಲ.
ಬಳಿಕ ಕುಟುಂಬಸ್ಥರು ಆಕೆ(British Girl) ಮೃತಪಟ್ಟಿದ್ದಾಳೆಂದು ಭಾವಿಸಿದ್ದರು. ಆಕೆಯ ನಾಡಿಮಿಡಿತ ಗಮನಿಸಿ ತಕ್ಷಣವೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ವೈದ್ಯರು ಬಾಲಕಿಯ ಆರೋಗ್ಯವನ್ನು ಪರೀಕ್ಷಿಸಿದಾಗ ಆಕೆ ಹೈಬರ್ನೇಶನ್ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ. ಸಾಕಷ್ಟು ಪ್ರಯತ್ನ ಮಾಡಿದರೂ ವೈದ್ಯರಿಗೆ ಏನೂ ಮಾಡಲಾಗಲಿಲ್ಲ. ಬಾಲಕಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾಳೆಂದು ವೈದ್ಯರಿಗೆ ತಿಳಿಯಲಿಲ್ಲ. ಆಕೆಗೆ ಬಂದಿರುವ ಕಾಯಿಲೆಯ ಬಗ್ಗೆ ಬ್ರಿಟನ್‌ನಾದ್ಯಂತ ವ್ಯಾಪಕ ಚರ್ಚೆಯಾಯಿತು. ಆಕೆಯನ್ನು ನೋಡಲು ದೇಶ-ವಿದೇಶದಿಂದ ಜನರು ಬರುತ್ತಿದ್ದರು.
ಇದನ್ನೂ ಓದಿ: ಸ್ನೇಹಪರವಲ್ಲದ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧ: ಸುಗ್ರೀವಾಜ್ಞೆಗೆ ಸಹಿ ರಷ್ಯಾ ಅಧ್ಯಕ್ಷ
ಪವಾಡ ನೋಡಲು ತಾಯಿಯೇ ಇರಲಿಲ್ಲ!
ಕೋಮಾ ಸ್ಥಿತಿಯಲ್ಲಿದ್ದ ಮಗುವನ್ನು ಬದುಕಿಸಲು ತಾಯಿ ಗಂಜಿ, ಹಾಲು ಮುಂತಾದ ವಸ್ತುಗಳನ್ನು ನೀಡುತ್ತಿದ್ದರು. ಹೀಗೆ 9 ವರ್ಷಗಳು ಕಳೆದರೂ ಹುಡುಗಿ(Girl Sleep For 9 Years)ಗೆ ಪ್ರಜ್ಞೆ ಬಂದಿರಲಿಲ್ಲ. ಒಂದು ದಿನ ಹುಡುಗಿಯ ತಾಯಿ ಹೃದಯಾಘಾತದಿಂದ ನಿಧನರಾದರು. ತಾಯಿಯ ಮರಣದ 5 ತಿಂಗಳ ನಂತರ ಒಂದು ದಿನ ಪವಾಡ ಸಂಭವಿಸಿತು. ಹುಡುಗಿಗೆ 9 ವರ್ಷಗಳ ನಂತರ ಎಚ್ಚರವಾಯಿತು. ಅವಳು ಮಲಗಿದ್ದಾಗ ಆಕೆಗೆ 12 ವರ್ಷ ವಯಸ್ಸಾಗಿತ್ತು, ಆಕೆಗೆ ಎಚ್ಚರವಾದಾಗ 21 ವರ್ಷವಾಗಿತ್ತು. ಆದರೆ ಹುಡುಗಿ ಅನೇಕ ವರ್ಷಗಳ ಬಳಿಕ ಎಚ್ಚರವಾದಾಗ ಆಕೆಯ ತಾಯಿ ಮೃತಪಟ್ಟಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.