Girl Kissed Snake Video: ಈ ಭೂಮಿಯ ಮೇಲೆ ಕಂಡು ಬರುವ ಅತ್ಯಂತ ಅಪಾಯಕಾರಿ ಜೀವಗಳಲ್ಲಿ ಹಾವು ಕೂಡ ಒಂದು. ಹಾವು ಕಂಡರೆ ಸಾಕು ಅತಿರಥ-ಮಹಾರಥರಲ್ಲಿ ನಡುಕ ಹುಟ್ಟುತ್ತದೆ. ಹಾವು ಯಾವಾಗ ಯಾರ ಮೇಲೆ ದಾಳಿ ಇಡುತ್ತದೆ ಎಂಬುದನ್ನು ಹೇಳಲಾಗದು. ಕೆಲವೊಂದು ಹಾವುಗಳು ಎಷ್ಟೊಂದು ವಿಷಕಾರಿಯಾಗಿರುತ್ತವೆ ಎಂದರೆ, ಯಾವುದೇ ಓರ್ವ ಮನುಷ್ಯನಿಗೆ ಅವು ಕಚ್ಚಿದರೆ, ಆ ಮನುಷ್ಯನ ಜೀವನ ಯಾತ್ರೆಯೇ ಮುಗಿದ್ಹೋಗುತ್ತದೆ. ಇದರ ಹೊರತಾಗಿಯೂ ಕೂಡ ಕೆಲ ಜನರು ಹಾವಿಗೆ ಕಿಂಚಿತ್ತು ಹೆದರುವುದಿಲ್ಲ.
ಹಾವಿನ ಜೊತೆಗೆ ಸರಸವಾಡುತ್ತಿರುವ ಯುವತಿ
ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ (Vira Video) ಯುವತಿಯೋರ್ವಳು ಹಾವಿನ ಜೊತೆಗೆ ಆಟವಾಡುತ್ತಿದ್ದಾಳೆ. ಈ ವಿಡಿಯೋದಲ್ಲಿ ಯುವತಿಯೋರ್ವಳು ವಿಶಾಲ ಕಾಯದ ಹಾವಿಗೆ ಕಿಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ನೋಡಲು ಇದು ತುಂಬಾ ಭಯಾನಕವಾಗಿದೆ. ಆದರೆ, ಯುವತಿ ಮಾತ್ರ ತುಂಬಾ ಸಲೀಸಾಗಿ ಹಾವಿಗೆ ಮುತ್ತಿಕ್ಕುತ್ತಿದ್ದಾಳೆ. ವಿಡಿಯೋ ಬಹಿರಂಗಗೊಳ್ಳುತ್ತಲೇ, ಸಾಮಾಜಿಕ ಮಾಧ್ಯಮ ಬಳಕೆದಾರರ ಮೈಮೇಲಿನ ರೋಮಗಳು ಎದ್ದು ನಿಂತಿವೆ.
ಇದನ್ನೂ ಓದಿ-Viral Video: ಎತ್ತರದ ಗುಡ್ಡದಿಂದ ಸೈಕಲ್ ಸಮೇತ ಜಿಗಿದ ಬಾಲಕಿ! ಆಮೇಲೇನಾಯ್ತು..?
ಕಪ್ಪು ಬಣ್ಣದ ವಿಶಾಲಕಾಯ ಹಾವೊಂದು ಅಡವಿಯಲ್ಲಿ ತನ್ನ ಹೆಡೆಬಿಚ್ಚಿ ಕುಳಿತುಕೊಂಡಿದೆ. ಈ ಸಂದರ್ಭದಲ್ಲಿ ಯುವತಿಯೋರ್ವಳು ಹಾವಿನ ಬಳಿ ಬರುತ್ತಾಳೆ. ಎಲ್ಲಕ್ಕಿಂತ ಮೊದಲು ಯುವತಿ ಹಾವಿನ ಬಳಿಗೆ ಬಂದು ತನ್ನ ಕೈಯಿಂದ ಹಾವನ್ನು ಸವರುತ್ತಾಳೆ. ಬಳಿಕ ಆಕೆ ತನ್ನ ತುಟಿಗಳನ್ನು ಮುಂದಕ್ಕೆ ಮಾಡಿ ಹಾವನ್ನು ಮುತ್ತಿಕ್ಕಲು ಆರಂಭಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಕೇವಲ ಒಂದು ಬಾರಿ ಅಲ್ಲ, ಎರಡು ಬಾರಿ ಯುವತಿ ಹಾವನ್ನು ಚುಂಬಿಸುತ್ತಾಳೆ.
ಇದನ್ನೂ ಓದಿ-Viral Vido : ಅಬ್ಬಬ್ಬಾ..! ಎಮ್ಮೆಗೆ ಹೆದರಿ ಓಡಿ ಹೋದ ಸಿಂಹಗಳ ಹಿಂಡು
ಹಾವಿನಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ
ಇದರಲ್ಲಿ ಎಲ್ಲಕ್ಕಿಂತ ಬೆಚ್ಚಿಬೀಳಿಸುವ ಸಂಗತಿ ಎಂದರೆ. ಯುವತಿ ತನ್ನನ್ನು ಚುಂಬಿಸುತ್ತಿದ್ದರೂ ಕೂಡ ಹಾವು ಯಾವುದೇ ರೀತಿಯ ರಿಯಾಕ್ಷನ್ ನೀಡುತ್ತಿಲ್ಲ. rasal_viper ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋ 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ವಿಡಿಯೋ ಅನ್ನು ನೋಡಿದ ಜನರು ತರಹೇವಾರಿ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.