ನವದೆಹಲಿ: ಚೀನಾ(China)ದಲ್ಲಿ ನಡೆದಿರುವ ಈ ವಿಚಿತ್ರ ಘಟನೆ ಯಾವುದೇ ಹಾರರ್ ಸಿನಿಮಾದ ದೃಶ್ಯಕ್ಕಿಂತಲೂ ಕಡಿಮೆಯಿಲ್ಲ. ತಮ್ಮ ಮನೆಯ ಗೋಡೆಯ ಮೂಲೆಯೊಂದರಲ್ಲಿ ಯುವತಿಯೊಬ್ಬಳ ತಲೆ ನುಗ್ಗಿರುವ ಭಯಾನಕ ದೃಶ್ಯ(Scary Video)ವನ್ನು ಕಂಡು ಚೀನಾದ ದಂಪತಿಗಳೇ ಒಂದು ಕ್ಷಣ ಹೌಹಾರಿ ಹೋಗಿದ್ದರು. ಗಟ್ಟಿ ಗುಂಡಿಗೆ ಇರದವರು ಈ ದೃಶ್ಯವನ್ನು ನೋಡಿದ್ದರೆ ಅವರಿಗೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ ಆಗುತ್ತಿತ್ತು.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ನಡೆದಿದ್ದಾದರೂ ಏನು ಅಂತಾ ನಿಮಗೆ ಗೊತ್ತಾದರೆ ಭಯದ ಬದಲು ನಿಮ್ಮ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಅಯ್ಯೋ ಪಾಪ.. ಅನಿಸುತ್ತದೆ. ಈ ಘಟನೆ ನಡೆದಿರುವುದು ಚೀನಾದ Guizhou ಪ್ರಾಂತ್ಯದ ಪುಡಿಂಗ್ ಕೌಂಟಿ(Puding County)ಯಲ್ಲಿ. ಮೊದಲ ಮಹಡಿಯ ಲಿವಿಂಗ್ ರೂಮಿನ ಗೋಡೆಯ ಮೂಲೆಯೊಂದರಲ್ಲಿ ಯುವತಿಯೊಬ್ಬಳ ತಲೆಯು ರಂಧ್ರದಲ್ಲಿ ಸಿಕ್ಕಿಕೊಂಡುಬಿಟ್ಟಿದೆ. ಮೊದಲು ಈ ದೃಶ್ಯವನ್ನು ಕಂಡ ಮನೆಯ ದಂಪತಿ ಭಯಭೀತರಾಗಿದ್ದರು. ಬಳಿಕ ಆಕೆ ತಮ್ಮ ಮಗಳೆಂದು ಗೊತ್ತಾದ ಕೂಡಲೇ ದಂಪತಿಗೆ ತುಂಬಾ ಹೆದರಿಕೆಯಾಗಿ ತುರ್ತು ಸಿಬ್ಬಂದಿಗೆ ಕರೆ ಮಾಡಿದ್ದಾರೆ.


ಮದ್ಯ ಖರೀದಿಸಬೇಕೆಂದರೆ ನೀವು ಎರಡು ಡೋಸ್ ಕೊರೊನಾ ಲಸಿಕೆ ಪಡೆದಿರಲೇಬೇಕು..!


ಫ್ಯಾನ್ ಕೂರಿಸಲೆಂದು ಕೊರೆದ ಸುಮಾರು 8 ಇಂಚು ಅಗಲದ ರಂಧ್ರದಲ್ಲಿ ಅದ್ಹೇಗೋ ಯುವತಿ ತಲೆಕೆಳಗಾಗಿ ಸಿಕ್ಕಿಹಾಕಿಕೊಂಡಿದ್ದಾಳೆ. ಇದ್ಯಾವ ರಂಧ್ರ ಅಂತಾ ಪರಿಶೀಲಿಸಲೋ ಅಥವಾ ಕಾಲು ಜಾರಿ ಬಿದ್ದೋ ಯುವತಿ ಆ ರಂಧ್ರದಲ್ಲಿ ತಲೆಕೆಳಗಾಗಿ ಸಿಕ್ಕಿಹಾಕಿಕೊಂಡು ಒದ್ದಾಡಿದ್ದಾಳೆ. ಇದು ಒಂದು ರೀತಿ ಹಾರರ್ ಸಿನಿಮಾ(Horror Movie)ದಲ್ಲಿ ಕಂಡುಬರುವ ಭಯಾನಕ ದೆವ್ವದ ರೀತಿಯ ದೃಶ್ಯದಂತೆ ಭಾಸವಾಗುತ್ತಿತ್ತು. ಕೋಣೆಯ ಮೂಲೆಯ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡು ಒದ್ಡಾಡುತ್ತಿದ್ದ ಯುವತಿಯ ಕೂದಲು ನೇತಾಡುತ್ತಿದ್ದವು. ತಮ್ಮ ಪುತ್ರಿಯನ್ನು ಹೇಗೆ ರಕ್ಷಿಸುವುದು ಎಂಬುದು ಆ ದಂಪತಿಗೆ ತಕ್ಷಣಕ್ಕೆ ಹೊಳೆದಿಲ್ಲ. ಹೀಗಾಗಿ ಭಯದಿಂದ ತುರ್ತು ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.


ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗೋಡೆಯಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದ ಯುವತಿಯನ್ನು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ರಂಧ್ರದಲ್ಲಿ ತಲೆ ಸಿಕ್ಕಿಸಿಕೊಂಡಿದ್ದ ಯುವತಿಯ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುತ್ತಿರುವುದು ಸೆರೆಯಾಗಿದೆ. ಕಳೆಗೆ ಕೆಲವರು ಯುವತಿಯನ್ನು ಹಿಡಿದುಕೊಂಡಿದ್ದರೆ, ಮೇಲೆ ಕೆಲವರು ಆಕೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದು.


ಇದನ್ನೂ ಓದಿ: ಪ್ರತಿದಿನ ಏಳು ರೂ.ಹೂಡಿಕೆ ಮಾಡಿ ತಿಂಗಳಿಗೆ ಪಡೆಯರಿ ಮಾಸಿಕ 5000 ರೂ.ಪಿಂಚಣಿ


ಯುವತಿಯ ತಲೆಗೆ ಎಣ್ಣೆಯನ್ನು ಹಚ್ಚಿ ತುಂಬಾ ಹಗುರವಾಗಿ ಆಕೆಯನ್ನು ಮೇಲಕ್ಕೆ ಎಳೆಯುವ ಮೂಲಕ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಂಧ್ರದಿಂದ ಬಿಡಿಸಿಕೊಂಡು ಹೊರಬಂದ ಬಳಿಕ ಯುವತಿ ತನ್ನ ಮೂಗು ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ಯುವತಿಯ ತಲೆ ಸುಮಾರು 1 ಗಂಟೆಗಳ ಕಾಲ ಆ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡಿತ್ತು. 40 ನಿಮಿಷಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಆಕೆಯನ್ನು ಕಾಪಾಡಿದ್ದಾರಂತೆ. ತಮ್ಮ ಪುತ್ರಿಗೆ ಯಾವುದೇ ಗಾಯಗಳಾಗಿಲ್ಲ, ಆಕೆಯನ್ನು ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಅಂತಾ ಪೋಷಕರು ತಿಳಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.