ಸನ್ನಿ ಲಿಯೋನ್ ಅಭಿನಯದ 'ರಾಗಿನಿ MMS ರಿಟರ್ನ್ಸ್-2' ಟ್ರೇಲರ್ ಬಿಡುಗಡೆ

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಟ್ರೇಲರ್ ಬಿಡುಗಡೆಗೊಳಿಸಿದ್ದ ಸನ್ನಿ ಲಿಯೋನ್, 'ರಾಗಿನಿ MMS ರಿಟರ್ನ್ಸ್ ಸೀಸನ್-2 ನಲ್ಲಿ ಡಬ್ಬಲ್ ಮಜಾ ಹಾಗೂ ಡಬ್ಬಲ್ ಶಿಕ್ಷೆ ಸಿಗಲಿದೆ" ಎಂದು ಬರೆದುಕೊಂಡಿದ್ದಾಳೆ.

Last Updated : Dec 13, 2019, 05:33 PM IST
ಸನ್ನಿ ಲಿಯೋನ್ ಅಭಿನಯದ 'ರಾಗಿನಿ MMS ರಿಟರ್ನ್ಸ್-2' ಟ್ರೇಲರ್ ಬಿಡುಗಡೆ title=

ನವದೆಹಲಿ: ಖ್ಯಾತ ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ಅವರ ವೆಬ್ ಸೀರೀಸ್ 'ರಾಗಿನಿ MMS ರಿಟರ್ನ್ಸ್-2'ನ ಟ್ರೈಲರ್  ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಲವ್, ರೋಮಾನ್ಸ್, ಭೀತಿ ಎಲ್ಲವು ಇದೆ. ಬಿಡುಗಡೆಯಾದ ಟ್ರೈಲರ್ ನಲ್ಲಿ ಸನ್ನಿ ಹೊರತುಪಡಿಸಿ ಆರತಿ ಖೆತ್ರಪಾಲ್ , ಋಷಿಕ ನಾಗ್, ಆಧ್ಯಾ ಗುಪ್ತಾ, ವಿಕ್ರಂ ಸಿಂಗ್ ರಾಥೋಡ್, ವರುಣ್ ಸೂದ್ ಹಾಗೂ ದಿವ್ಯಾ ಅಗರವಾಲ್ ಸಮೇತ ಹಲವು ಕಲಾವಿದರು ಕಂಡುಬಂದಿದ್ದಾರೆ.

ಟ್ರೈಲರ್ ಆರಂಭದಲ್ಲಿ ಸನ್ನಿ ಲಿಯೋನ್ ಮಾತನಾಡುವುದನ್ನು ತೋರಿಸಲಾಗಿದ್ದು, ನಾನು ವಿಕ್ಟೋರಿಯಾ ವಿಲ್ಲಾದ ಎಲ್ಲ ರಹಸ್ಯಗಳನ್ನು ಅರಿತಿದ್ದೇನೆ ಎನ್ನುತ್ತಾಳೆ. ಬಳಿಕ ಕೆಲ ಸ್ನೇಹಿತರು ಆ ವಿಲ್ಲಾದಲ್ಲಿ ಬಂದು ನೆಲೆಸುವುದನ್ನು ತೋರಿಸಲಾಗಿದೆ. ಬಳಿಕ ಭೀತಿಯ ಆಟ ಆರಂಭಗೊಳ್ಳಲಿದ್ದು, ಅದು ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಈ ವಿಲ್ಲಾದಲ್ಲಿ ಆಗಲೇ ನೆಲೆಸಿರುವ ಭೂತ ತನ್ನ ಅಸಲಿ ಬಣ್ಣ ತೋರಿಸಲು ಪ್ರಾರಂಭಿಸುತ್ತದೆ. ಈ ಟ್ರೈಲರ್ ನಲ್ಲಿ ಕೆಲ ಬೋಲ್ಡ್ ದೃಶ್ಯಗಳನ್ನು ಸಹ ತೋರಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಈ ವೆಬ್ ಸೀರೀಸ್ ನ ಪೋಸ್ಟರ್ ಅನ್ನು ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹರಿಬಿಟ್ಟ ಸನ್ನಿ ಲಿಯೋನ್ 'ರಾಗಿನಿ MMS ರಿಟರ್ನ್ಸ್ ಸೀಸನ್-2  ನಲ್ಲಿ ಡಬ್ಬಲ್ ಮಜಾ ಹಾಗೂ ಡಬ್ಬಲ್ ಶಿಕ್ಷೆ ಸಿಗಲಿದೆ' ಎಂದು ಬರೆದುಕೊಂಡಿದ್ದರು. ದಿವ್ಯಾ ಅಗರವಾಲ್ ಹಾಗೂ ವರುಣ್ ಸೂದ್ ಜೊತೆ ಸೇರಿಕೊಂಡು 'ಹಲೋ ಜೀ' ಶೀರ್ಷಿಕೆಯ ಹಾಡನ್ನೂ ಕೂಡ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಹಾಡಿಗೆ ಅಡಿಬರಹ ಬರೆದಿದ್ದ ಸನ್ನಿ 'ಹಲೋ ಜೀ ಈ ಚಳಿಗಾಲದಲ್ಲಿ ನಿಮಗೆ ಶಕೆಯಾಗಲಿದ್ದು, ನಿಮ್ಮ ಶರೀರದ ಬಿಸಿ ಹೆಚ್ಚಾಗಿರುವುದನ್ನು ನೀವು ಅನುಭವಿಸಲಿದ್ದಿರಿ. ಏಕೆಂದರೆ ನಾನು ಬೆಳ್ಳಿ ಪರದೆಗೆ ಬೆಂಕಿ ಇಡಲು ಹೊರಟಿದ್ದೇನೆ' ಎಂದಿದ್ದಳು.

ಬಿಗ್ ಬಾಸ್ ಮೂಲಕ ಭಾರತದಲ್ಲಿ ಮನೆಮಾತಾಗಿರುವ ಈ ಮೋಹಕ ಬೆಡಗಿ ಸನ್ನಿ ಲಿಯೋನ್  ಬಳಿಕ ಮಹೇಶ್ ಭಟ್ ನಿರ್ದೇಶನದ 'ಜಿಸ್ಮ್-2' ಮೂಲಕ ಅಭಿಮಾನಿಗಳ ಕನಸಿಗೆ ಕಿಚ್ಚು ಎರಚಿದ್ದಾಳೆ. ನಂತರ 'ಹೆಟ್ ಸ್ಟೋರಿ-2 ', 'ಏಕ ಪಹೇಲಿ ಲೀಲಾ'ಗಳಂತಹ ಚಿತ್ರಗಳಲ್ಲಿ ಅವಳು ಅಭಿನಯಿಸಿದ್ದಾಳೆ.

Trending News