Dengue ನಿಂದ ಸಿಗಲಿದೆ ಶಾಶ್ವತ ಮುಕ್ತಿ! ಸೊಳ್ಳೆಗಳೇ ನಿಮ್ಮನ್ನು ಡೆಂಗ್ಯೂನಿಂದ ರಕ್ಷಿಸಲಿವೆ
Good Mosquitos For Dengue: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಡೆಂಗ್ಯೂ ಸೋಂಕು ವೇಗವಾಗಿ ಹೆಚ್ಚುತ್ತಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಡೆಂಗ್ಯೂ ಅಪಾಯವನ್ನು ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಅಂದಾಜು 100-400 ಮಿಲಿಯನ್ ಜನರು ಈ ಸೋಂಕಿಗೆ ಒಳಗಾಗುತ್ತಿದ್ದಾರೆ.
ನವದೆಹಲಿ: Good Mosquitos For Dengue - ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ (Dengue) ಜ್ವರದಿಂದ ಜನ ಕಂಗಾಲಾಗಿದ್ದಾರೆ. ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ನಗರಗಳು ಡೆಂಗ್ಯೂ ಜ್ವರದ ಭೀತಿ ಎದುರಿಸುತ್ತಿವೆ. ಆದರೆ ಮುಂಬರುವ ದಿನಗಳಲ್ಲಿ ಡೆಂಗ್ಯೂ ಕಾಯಿಲೆ ಇತಿಹಾಸವಾಗಲಿದೆ ಎನ್ನಲಾಗುತ್ತಿದೆ. ಹೌದು,ಇಂಡೋನೇಷ್ಯಾದ (Indonesia) ವಿಜ್ಞಾನಿಗಳು (Indonesian Researchers) ಡೆಂಗ್ಯೂವನ್ನು ಎದುರಿಸಲು 'ಉತ್ತಮ' ಸೊಳ್ಳೆಗಳನ್ನು (Good Mosuito) ಅಭಿವೃದ್ಧಿಪಡಿಸಿದ್ದಾರೆ. 'ಉತ್ತಮ' ಸೊಳ್ಳೆಗಳು ಡೆಂಗ್ಯೂ ನಿರ್ಮೂಲನೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಲಿವೆ ಎಂದು ಹೇಳಲಾಗುತ್ತಿದೆ.
ಸೊಳ್ಳೆಗಳೇ ಸೊಳ್ಳೆಗಳನ್ನು ಸೋಲಿಸಲಿವೆ
ಸುದ್ದಿ ಸಂಸ್ಥೆ ರಾಯ್ಟರ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇಂಡೊನೆಷ್ಯಾದ ಸಂಶೋಧಕರು ಒಂದು ಕೀಟದ ಪ್ರಜಾತಿಯನ್ನು (Breed) ಸಂತಾನೋತ್ಪತ್ತಿ ಪ್ರಕ್ರಿಯೆಯ ಮೂಲಕ ಅಭಿವೃದ್ಧಿಗೊಳಿಸಿದ್ದು. ಇದರಲ್ಲಿರುವ ಬ್ಯಾಕ್ಟೀರಿಯಾ ಡೆಂಗ್ಯೂ ನಂತಹ ವೈರಸ್ ಅನ್ನು ತನ್ನೊಳಗೆ ಬೆಳೆಯಲು ಬಿಡುವುದಿಲ್ಲ ಎನ್ನಲಾಗಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯು ಸೊಳ್ಳೆಗಳಿಗೆ ವೊಲ್ಬಾಚಿಯಾ ಬ್ಯಾಕ್ಟೀರಿಯಾದೊಂದಿಗೆ ಚುಚ್ಚುಮದ್ದು ನೀಡುವುದರಿಂದ ಡೆಂಗ್ಯೂ ಪ್ರಕರಣಗಳು 77% ರಷ್ಟು ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು 86% ರಷ್ಟು ಕಡಿಮೆಯಾಗಿದೆ. ಅಂದರೆ ಇನ್ಮುಂದೆ ಸೊಳ್ಳೆಗಳಿಂದಲೇ (Mosquito New Breed) ಡೆಂಗ್ಯೂ ಹರಡುವ ಸೊಳ್ಳೆಗಳನ್ನು ಸೋಲಿಸಲಾಗುವುದು.
ಇದನ್ನೂ ಓದಿ-ಕೊರೊನಾ ವೈರಸ್ B.1.1.529 ರೂಪಾಂತರಿ ಬಗ್ಗೆ ನೀವು ತಿಳಿಯಬೇಕಾದ 10 ವಿಷಯಗಳು ಇಲ್ಲಿವೆ
ಸೊಳ್ಳೆಗಳ ಕಾಟದಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ
ವೊಲ್ಬಾಚಿಯಾ ಒಂದು ಸಾಮಾನ್ಯ ಬ್ಯಾಕ್ಟೀರಿಯಾವಾಗಿದ್ದು, ಕೆಲವು ಸೊಳ್ಳೆಗಳು, ನೊಣಗಳು, ಪತಂಗಗಳು, ಡ್ರ್ಯಾಗನ್‌ಫ್ಲೈಗಳು ಮತ್ತು ಚಿಟ್ಟೆಗಳು ಸೇರಿದಂತೆ 60% ಕೀಟ ಪ್ರಭೇದಗಳಲ್ಲಿ ಇದು ನೈಸರ್ಗಿಕವಾಗಿ ಕಂಡುಬರುತ್ತದೆ. ಲಾಭರಹಿತ ವಿಶ್ವ ಸೊಳ್ಳೆ ಕಾರ್ಯಕ್ರಮದ (WMP) ಪ್ರಕಾರ, ಇದು ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಗಳಲ್ಲಿ ಕಂಡುಬರುವುದಿಲ್ಲ. "ಸೈದ್ಧಾಂತಿಕವಾಗಿ ನಾವು 'ಉತ್ತಮ' ಸೊಳ್ಳೆಗಳನ್ನು ಉತ್ಪಾದಿಸುತ್ತಿದ್ದೇವೆ" ಎಂದು WMP ಸಂಶೋಧಕರಾದ ಪುರವಂತಿ ಹೇಳಿದ್ದಾರೆ. ಡೆಂಗ್ಯೂ ಹರಡುವ ಸೊಳ್ಳೆಗಳು ವೊಲ್ಬಾಚಿಯಾವನ್ನು ಹೊತ್ತೊಯ್ಯುವ ಸೊಳ್ಳೆಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ ಮತ್ತು ಹೆಚ್ಚು 'ಉತ್ತಮ' ಸೊಳ್ಳೆಗಳನ್ನು ಉತ್ಪಾದಿಸುತ್ತವೆ. ಇದಾದ ನಂತರ ಕ್ರಮೇಣ ಸೊಳ್ಳೆ ಕಚ್ಚಿದರೂ ಡೆಂಗ್ಯೂ ಹರಡದಂತಹ ಕಾಲ ಬರುತ್ತದೆ.
ಇದನ್ನೂ ಓದಿ-CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್
ಈ ವರ್ಷ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ
ಭಾರತದ ಕುರಿತು ಹೇಳುವುದಾದರೆ, ಈ ವರ್ಷ ಡೆಂಗ್ಯೂ ಭಾರಿ ವಿನಾಶವನ್ನು ಉಂಟುಮಾಡಿದೆ. ರಾಷ್ಟ್ರ ರಾಜಧಾನಿಯೊಂದರಲ್ಲೇ ಈ ಋತುವಿನಲ್ಲಿ 7,100 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಮತ್ತು ನವೆಂಬರ್ ತಿಂಗಳೊಂದರಲ್ಲಿ ಸುಮಾರು 5,600 ಪ್ರಕರಣಗಳು ವರದಿಯಾಗಿವೆ. ಸೋಮವಾರ ಬಿಡುಗಡೆಯಾದ ವರದಿಯ ಪ್ರಕಾರ, ನವೆಂಬರ್ 15 ರವರೆಗೆ ನಗರದಲ್ಲಿ 5,277 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ, ಇದು 2015 ರಿಂದ ದೆಹಲಿಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಯ ಅತಿ ಹೆಚ್ಚು ಪ್ರಕರಣವಾಗಿದೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ಸುಮಾರು 1,850 ಹೊಸ ಪ್ರಕರಣಗಳು ವರದಿಯಾಗಿವೆ. ನವೆಂಬರ್ 20 ರವರೆಗೆ ದೆಹಲಿಯಲ್ಲಿ ಒಟ್ಟು 7,128 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ವರದಿಯ ಪ್ರಕಾರ, ದೆಹಲಿಯಲ್ಲಿ 2016 ರಲ್ಲಿ 4431, 2017 ರಲ್ಲಿ 4726, 2018 ರಲ್ಲಿ 2798, 2019 ರಲ್ಲಿ 2036 ಮತ್ತು 2020 ರಲ್ಲಿ 1072 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. 2015ರಲ್ಲಿ ನಗರದಲ್ಲಿ ಡೆಂಗ್ಯೂ ಪರಿಸ್ಥಿತಿ ಭೀಕರವಾಗಿದ್ದು, ಆ ವರ್ಷ 10,600 ಪ್ರಕರಣಗಳು ವರದಿಯಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ, 'ಒಳ್ಳೆಯ' ಸೊಳ್ಳೆಗಳ ಸಂಶೋಧನೆ ಹೆಚ್ಚಿನ ಪರಿಹಾರವನ್ನು (Dengue Treatment) ನೀಡಲಿವೆ.
ಇದನ್ನೂ ಓದಿ-ಕೊರೊನಾ ವೈರಸ್ ನ ಅತ್ಯಂತ ಅಪಾಯಕಾರಿ ರೂಪಾಂತರಿ ಪತ್ತೆ, ತುರ್ತು ಸಭೆ ಕರೆದ WHO, ಭಾರತದಲ್ಲೂ ಅಲರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.