CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್

CBSE Term 1 Exam: CBSE ಮಂಡಳಿಯ 10ನೇ  ಮತ್ತು 12ನೇ ತರಗತಿಗಳ ಪರೀಕ್ಷೆಗಳ ಅವಧಿ 1 ಪ್ರಾಯೋಗಿಕ ಪರೀಕ್ಷೆಯಲ್ಲಿ, ಸ್ಥಳೀಯ ಶಿಕ್ಷಕರು ಮಾತ್ರ ಪರಿವೀಕ್ಷಕರಾಗಿರಲಿದ್ದಾರೆ. ಇದಕ್ಕಾಗಿ ಹೊರಗಿನಿಂದ ಪರಿವೀಕ್ಷಕರನ್ನು ಕರೆಸಲಾಗುವುದಿಲ್ಲ.

Written by - Nitin Tabib | Last Updated : Nov 26, 2021, 05:21 PM IST
  • CBSE ಮಂಡಳಿಯ ಅವಧಿ 1ರ ಪ್ರಾಯೋಗಿಕ ಪರೀಕ್ಷೆ ಕುರಿತು ಮಹತ್ವದ ಅಪ್ಡೇಟ್
  • ಪರೀಕ್ಷೆಗಳಿಗೆ ಸ್ಥಳೀಯ ಶಿಕ್ಷಕರೇ ಎಕ್ಸಾಮಿನರ್ ಆಗಿ ಬರಲಿದ್ದಾರೆ.
  • ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ 30 ರಿಂದ ಡಿಸೆಂಬರ್ 23ರವರೆಗೆ ನಡೆಯಲಿವೆ.
CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್ title=

CBSE Term 1 Exam: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ ಮೈನರ್ ಪೇಪರ್‌ಗಳು ಅಂದರೆ CBSE 10 ನೇ ಮತ್ತು 12 ನೇ ತರಗತಿಯ ಅವಧಿ 1 ಪರೀಕ್ಷೆಗಳು (CBSE Class 10th and 12th Term 1 Exam) ನಡೆಯುತ್ತಿವೆ. ಇದೇ ವೇಳೆ ಕೆಲವೇ ದಿನಗಳಲ್ಲಿ ಪ್ರಮುಖ ವಿಷಯಗಳ ಪರೀಕ್ಷೆಗಳು ಕೂಡ ಆರಂಭಗೊಳ್ಳಲಿವೆ.  ಇದರೊಂದಿಗೆ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗುವುದು. ಈ ಕುರಿತು ಸಿಬಿಎಸ್‌ಇ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಸ್ಥಳೀಯ ಶಿಕ್ಷಕರು ಪರೀಕ್ಷಕರಾಗಿರುತ್ತಾರೆ
CBSE 10ನೇ ಮತ್ತು 12ನೇ ತರಗತಿಗಳ ಅವಧಿ 1ರ  ಪ್ರಾಯೋಗಿಕ ಪರೀಕ್ಷೆಯಲ್ಲಿ, ಸ್ಥಳೀಯ ಶಿಕ್ಷಕರು ಮಾತ್ರ ಪರೀಕ್ಷೆಗೆ ಪರಿವೀಕ್ಷಕರಾಗಲಿದ್ದಾರೆ. ಇದಕ್ಕಾಗಿ ಹೊರಗಿನಿಂದ ಪರಿವೀಕ್ಷಕರನ್ನು ಕರೆಯುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ ಎಲ್ಲಾ ಶಾಲೆಗಳು ಡಿಸೆಂಬರ್ 23 ರೊಳಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬೇಕು ಎಂದೂ ಕೂಡ ಸೂಚಿಸಲಾಗಿದೆ.

ನವೆಂಬರ್ 30 ರಿಂದ ಪ್ರಾಯೋಗಿಕ ಪರೀಕ್ಷೆ
ಸೆಂಟ್ರಲ್ ಕೌನ್ಸಿಲ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10ನೇ ಮತ್ತು 12 ನೇ ತರಗತಿಯ ಪರೀಕ್ಷೆಗಳ ಅವಧಿ 1 ಪ್ರಾಯೋಗಿಕ ಪರೀಕ್ಷೆಯನ್ನು  (CBSE Class 10th and 12th Term 1 Practical Exam) ನವೆಂಬರ್ 30 ರಿಂದ ನಡೆಸಲು ಸೂಚಿಸಿದೆ. ಇದನ್ನು ಶಾಲೆಯ ಶಿಕ್ಷಕರೇ ಆಯೋಜಿಸಲಿದ್ದಾರೆ. ಮೊದಲ ಬಾರಿಗೆ, ಹೆಚ್ಚಿನ ಶಾಲೆಗಳಲ್ಲಿ ಬೋರ್ಡ್ ವಿದ್ಯಾರ್ಥಿಗಳಿಗೆ ಹೋಮ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ, ಅಲ್ಲಿ ಪರೀಕ್ಷೆಯು ಕರೋನಾ ಮಾರ್ಗಸೂಚಿಗಳ ಅಡಿಯಲ್ಲಿ ನಡೆಯಲಿದೆ.

ಪರೀಕ್ಷೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ
- ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು.
- ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಪರಿವೀಕ್ಷಕರು ಕೂಡ ಮಾಸ್ಕ್ ಧರಿಸಬೇಕು.
- 100 ಮಕ್ಕಳು ಕುಳಿತುಕೊಳ್ಳಬಹುದಾದ ಸ್ಥಳದಲ್ಲಿ ಗರಿಷ್ಠ 22 ಮಕ್ಕಳು ಇರುತ್ತಾರೆ.
- 45 ಮಕ್ಕಳ ಆಸನ ಸಾಮರ್ಥ್ಯದ ತರಗತಿಯಲ್ಲಿ 12 ಮಕ್ಕಳು ಮಾತ್ರ ಕುಳಿತುಕೊಳ್ಳುತ್ತಾರೆ.

ಇದನ್ನೂ ಓದಿ-ಕೊರೊನಾ ವೈರಸ್ B.1.1.529 ರೂಪಾಂತರಿ ಬಗ್ಗೆ ನೀವು ತಿಳಿಯಬೇಕಾದ 10 ವಿಷಯಗಳು ಇಲ್ಲಿವೆ

ಪೇಪರ್ ಒಂದೂವರೆ ಗಂಟೆ ಅವಧಿಯದ್ದಾಗಿರುತ್ತದೆ
ಈ ಬಾರಿಯ ಟರ್ಮ್-1 ಪರೀಕ್ಷೆಯನ್ನು 90 ನಿಮಿಷಗಳ ಕಾಲ ನಡೆಸಲಾಗುವುದು ಇದು MCQ (Multiple Choice Questions) ಆಧಾರಿತವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಉತ್ತರವನ್ನು OMR ಸೀಟಿನಲ್ಲಿ ಭರ್ತಿ ಮಾಡಬೇಕು. ನ್ನೊಂದೆದೆ ಟರ್ಮ್-2 ರ ಪರೀಕ್ಷೆಯು 2 ಗಂಟೆಗಳದ್ದಾಗಿರುತ್ತದೆ. ಈ ಪರೀಕ್ಷೆಲ್ಲಿ ವಿವರಣಾತ್ಮಕ ಪ್ರಶ್ನೆಗಳಿರುತ್ತವೆ. 2ನೇ ಅವಧಿಯ ಪ್ರಶ್ನೆಪತ್ರಿಕೆ ಬೇರೆ ಬೇರೆ ರೂಪದಲ್ಲಿರುತ್ತದೆ. ಆದರೆ, ಟರ್ಮ್-2 ರಲ್ಲಿ ಕೆಲವು ಸಣ್ಣ ಮತ್ತು ದೀರ್ಘ ಉತ್ತರಗಳ ಪ್ರಶ್ನೆಗಳಿರಬಹುದು. ಈ ಸಮಯದಲ್ಲಿ, ದೇಶದಲ್ಲಿ ಕರೋನಾ ಪರಿಸ್ಥಿತಿ ಹದಗೆಟ್ಟರೆ, ಈ ವಿಧಾನವನ್ನು ಬದಲಾಯಿಸಬಹುದು.

ಇದನ್ನೂ ಓದಿ-"ರೈತರ ಬೇಡಿಕೆ ಈಡೇರುವರೆಗೆ ಚಳುವಳಿ ಮುಂದುವರೆಯಲಿದೆ"

ಮುಖ್ಯ ವಿಷಯಗಳ ಪರೀಕ್ಷೆಯಾವಾಗ ಪ್ರಾರಂಭ
CBSE ಯ 10ನೇ  ಮತ್ತು 12 ನೇ ತರಗತಿಗಳ ಅವಧಿ 1 ಬೋರ್ಡ್ ಪರೀಕ್ಷೆಗಳು ಈಗಾಗಲೇ ಆರಂಭಗೊಂಡಿವೆ. 10 ನೇ ತರಗತಿ ಪರೀಕ್ಷೆಗಳು ನವೆಂಬರ್ 17 ರಿಂದ ಪ್ರಾರಂಭವಾಗಿದ್ದರೆ, 12 ನೇ ತರಗತಿ ಪರೀಕ್ಷೆಗಳು ನವೆಂಬರ್ 16 ರಿಂದ (CBSE Class 10 And 12 Term-1 Exam) ಪ್ರಾರಂಭವಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳ ಮುಖ್ಯ ವಿಷಯಗಳ ಪರೀಕ್ಷೆಗಳು ನವೆಂಬರ್ 30 ರಿಂದ ಡಿಸೆಂಬರ್ 11, 2021 ರವರೆಗೆ ನಡೆಯಲಿದ್ದು, 12 ನೇ ತರಗತಿಯ ವಿದ್ಯಾರ್ಥಿಗಳ ಮುಖ್ಯ ವಿಷಯಗಳ ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿವೆ. ಇದರ ಜೊತೆಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್ 30 ರಿಂದ ಡಿಸೆಂಬರ್ 23 ರವರೆಗೆ ನಡೆಸಲಾಗುವುದು.

ಇದನ್ನೂ ಓದಿ-ಪೆಟ್ರೋಲ್ ದರ ಏರಿಕೆ ಚಿಂತೆ ಬಿಟ್ಟು ಬಿಡಿ, ಇಲ್ಲಿವೆ ಪವರ್ಪುಲ್ ಮೈಲೇಜ್ ನೀಡುವ ಅಗ್ಗದ ಬೈಕ್ ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News