ಭಾರತೀಯರಿಗೆ ಗುಡ್ ನ್ಯೂಸ್: H-1B Visa ಕುರಿತಂತೆ ಟ್ರಂಪ್ ನಿರ್ಧಾರ ರದ್ದುಪಡಿಸಿದ US ನ್ಯಾಯಾಲಯ
ಡೊನಾಲ್ಡ್ ಟ್ರಂಪ್ ಅವರು ಎಚ್ -1 ಬಿ ವೀಸಾಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಯುಎಸ್ ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದಾಗಿ ಭಾರತೀಯ ವೃತ್ತಿಪರರು ಬಹಳ ನಿರಾಳರಾಗಿದ್ದಾರೆ.
ನವದೆಹಲಿ: ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತದ ಟೆಕ್ ವೃತ್ತಿಪರರಿಗೆ ಪರಿಹಾರ ಸುದ್ದಿ ಇದೆ. ಅಕ್ಟೋಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾ (H-1B Visa)ಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಯುಎಸ್ ನ್ಯಾಯಾಲಯ ರದ್ದುಗೊಳಿಸಿದೆ. ಇದರೊಂದಿಗೆ ಭಾರತೀಯ ನುರಿತ ಕುಶಲಕರ್ಮಿಗಳು ಅಥವಾ ವೃತ್ತಿಪರರು ಈಗ ಮೊದಲಿನಂತೆ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ಯುಎಸ್ (US) ಜಿಲ್ಲಾ ನ್ಯಾಯಾಧೀಶ ಜೆಫ್ರಿ ಎಸ್. ವೈಟ್ ಅವರು ಅಧ್ಯಕ್ಷರು ಎಚ್ -1 ಬಿ ವೀಸಾಗೆ ಸಂಬಂಧಿಸಿದ ಬದಲಾವಣೆಗಳನ್ನು ತರಾತುರಿಯಲ್ಲಿ ಪರಿಚಯಿಸಿದ್ದಾರೆ ಮತ್ತು ಸಾಮಾನ್ಯ ಪಾರದರ್ಶಕತೆ ಕಟ್ಟುಪಾಡುಗಳಿಗೆ ಬದ್ಧರಾಗಿರಲಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಲಯ ಏನು ಹೇಳಿದೆ ?
ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶ ಜೆಫ್ರಿ ವೈಟ್ ಅವರು ಎಚ್ -1 ಬಿ ವೀಸಾಗಳ ಮೇಲಿನ ಡೊನಾಲ್ಡ್ ಟ್ರಂಪ್ (Donald Trump) ಆದೇಶವನ್ನು ರದ್ದುಪಡಿಸುತ್ತಾ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಾಗ ಪಾರದರ್ಶಕತೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅನುಸರಿಸಲಿಲ್ಲ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಹಲವು ನಾಗರೀಕರು ಉದ್ಯೋಗ ಕಳೆದುಕೊಂಡಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸರ್ಕಾರದ ವಾದ ಸಂಪೂರ್ಣವಾಗಿ ತಪ್ಪಾಗಿದೆ. ಕೋವಿಡ್ -19 (Covid 19) ಯಾರೊಬ್ಬರ ನಿಯಂತ್ರಣದಲ್ಲಿರದ ಸಾಂಕ್ರಾಮಿಕ ರೋಗ, ಆದರೆ ಮೊದಲೇ ಮುನ್ನೆಚ್ಚಿಕಾ ಕ್ರಮ ಕೈಗೊಳ್ಳುವ ಮೂಲಕ ಈ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಬಹುದಿತ್ತು ಎಂದು ನ್ಯಾಯಮೂರ್ತಿ ಜೆಫರಿ ಅಭಿಪ್ರಾಯಪಟ್ಟಿದ್ದಾರೆ.
ಕರೋನಾದಿಂದಾಗಿ ಅನೇಕ ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವುದರಿಂದ, ಹೊರದೇಶದವರಿಗೆ ಉದ್ಯೋಗಗಳನ್ನು ನೀಡುವುದನ್ನು ತಡೆಯುವ ಮೂಲಕ ಸ್ಥಳೀಯ ಜನರಿಗೆ ಆ ಉದ್ಯೋಗಗಳನ್ನು ನೀಡಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತವು ಈ ನಿರ್ಧಾರ ಕೈಗೊಂಡಿತು. ಈ ಉದ್ದೇಶದಿಂದ ವಿದೇಶಿ ವೃತ್ತಿಪರರನ್ನು ನೇಮಕ ಮಾಡುವ ಕಂಪನಿಗಳಿಗೆ ಅನೇಕ ರೀತಿಯ ನಿರ್ಬಂಧಗಳನ್ನು ವಿಧಿಸಲಾಯಿತು. ಹೊಸ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ಮೂರನೇ ಒಂದು ಭಾಗದಷ್ಟು ಅರ್ಜಿದಾರರಿಗೆ ಎಚ್ -1 ಬಿ ವೀಸಾ ಪಡೆಯಲು ಸಾಧ್ಯವಾಗಲಿಲ್ಲ.
ಎಷ್ಟೋ ಜನರ ಮೇಲೆ ಪರಿಣಾಮ:
ಹೊರಗಿನಿಂದ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ ಅಮೆರಿಕ ಸರ್ಕಾರವು 85 ಸಾವಿರ ಎಚ್ -1 ಬಿ (H-1B) ವೀಸಾಗಳನ್ನು ನೀಡುತ್ತದೆ. ಇದು ಅತಿ ಹೆಚ್ಚು ಐಟಿ ವೃತ್ತಿಪರರನ್ನು ಹೊಂದಿದೆ. ಯುಎಸ್ನಲ್ಲಿ ಪ್ರಸ್ತುತ ಸುಮಾರು 6 ಲಕ್ಷ ಎಚ್ -1 ಬಿ ವೀಸಾ ಹೊಂದಿರುವವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತ ಮೂಲದವರು. ಚೀನಾವು ಎರಡನೇ ಸ್ಥಾನದಲ್ಲಿದೆ.