ಜಮೀನಿನಲ್ಲಿ ಎಲೆಕೋಸು ಕೀಳುವ ಕೆಲಸಕ್ಕೆ ಬರೋಬ್ಬರಿ 63 ಲಕ್ಷ ರೂ. ಸಂಬಳ..!
ಜಮೀನಿನಲ್ಲಿ ಬೆಳೆದಿರುವ ತರಕಾರಿಗಳನ್ನು ಕೀಳುವ ಈ ಕೆಲಸವನ್ನು ಟಿಎಚ್ ಕ್ಲೆಮೆಂಟ್ಸ್ ಮತ್ತು ಸನ್ ಲಿಮಿಟೆಡ್(TH Clements and Son Ltd.) ನೀಡುತ್ತಿದೆ.
ನವದೆಹಲಿ: ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಹಣ ಗಳಿಸಲು ಬಯಸುತ್ತಾರೆ. ಅನೇಕ ಬಾರಿ ಬಹುತೇಕರು ತಾವು ಮಾಡುವ ವೃತ್ತಿಗೆ ಗುಡ್ ಬೈ ಹೇಳಿ, ಹೆಚ್ಚು ಸಂಬಳ ಸಿಗುವ ಕೆಲಸಗಳನ್ನು ಮಾಡುತ್ತಾರೆ. ಆದರೆ ಕೇವಲ ತರಕಾರಿ ಕೀಳಲು ನಿಮಗೆ ವಾರ್ಷಿಕವಾಗಿ 63 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರೆ ನೀವು ಏನು ಮಾಡುತ್ತೀರಿ? ಯಾರೇ ಆಗಲಿ ಈ ಭರ್ಜರಿ ಆಫರ್ ಅನ್ನು ತಿರಸ್ಕರಿಸುವುದಿಲ್ಲ. ನನಗೂ ಈ ಕೆಲಸ ಕೊಡಿ ಅಂತಾ ದುಂಬಾಲು ಬೀಳುತ್ತಾರೆ. ಇಂತಹ ಒಂದು ಉದ್ಯೋಗವನ್ನು ಇಂಗ್ಲೆಂಡ್ ನ ಕೃಷಿ ಕಂಪನಿ(UK Farming Company)ಯೊಂದು ನೀಡುತ್ತಿದೆ. ಇದಕ್ಕಾಗಿ ಕಂಪನಿ ಆನ್‌ಲೈನ್ ಜಾಹೀರಾತು ಕೂಡ ನೀಡಿದೆ.
ವರದಿಗಳ ಪ್ರಕಾರ ತರಕಾರಿಗಳನ್ನು ಕೀಳುವ ಈ ಕೆಲಸವನ್ನು ಟಿಎಚ್ ಕ್ಲೆಮೆಂಟ್ಸ್ ಮತ್ತು ಸನ್ ಲಿಮಿಟೆಡ್(TH Clements and Son Ltd.) ನೀಡುತ್ತಿದೆ. ಇದಕ್ಕಾಗಿ ಕಂಪನಿಯು ಆನ್‌ಲೈನ್ ಜಾಹೀರಾತನ್ನು ನೀಡಿದೆ. ಈ ಜಾಹೀರಾತಿನಲ್ಲಿ, ವರ್ಷವಿಡೀ ಜಮೀನಿನಲ್ಲಿ ಬೆಳೆದಿರುವ ಎಲೆಕೋಸು ಮತ್ತು ಕೋಸುಗಡ್ಡೆ ಕೀಳುವ ಕೆಲಸಕ್ಕೆ 30 ಯೂರೋಗಳು ಅಂದರೆ ಪ್ರತಿ ಗಂಟೆಗೆ 3000 ರೂ.ಗಿಂತ ಹೆಚ್ಚು ಹಣ ನೀಡುತ್ತೇವೆ ಎಂದು ತಿಳಿಸಲಾಗಿದೆ. ಇದರ ಪ್ರಕಾರ 1 ವರ್ಷ ಈ ಕೆಲಸ ಮಾಡಿದರೆ 62,400 ಯುರೋಗಳು ಅಂದರೆ 63,11,641 ರೂ. ಸಿಗುತ್ತದೆ. ಎಲೆಕೋಸು ಕೀಳುವ ಈ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು. ಈ ಕೆಲಸಕ್ಕೆ ದೈಹಿಕವಾಗಿ ಸದೃಢವಾಗಿರುವುದು ಅವಶ್ಯಕ. ಏಕೆಂದರೆ ಈ ಕೆಲಸವನ್ನು ವರ್ಷವಿಡೀ ಮಾಡಬೇಕಾಗುತ್ತದೆ.
ಇದನ್ನೂ ಓದಿ: Viral News: ಮಗುವಿಗೆ ಜನ್ಮ ನೀಡುವಾಗ ಮಹಿಳೆಗೆ ಏನಾಯ್ತು?; ನೆರೆದಿದ್ದವರು ಕಿರುಚಲು ಶುರು ಮಾಡಿದರು!
ಫೀಲ್ಡ್ ಆಪರೇಟಿವ್‌ಗಳನ್ನು ಹುಡುಕುತ್ತಿದ್ದೇವೆ
ಈ ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ 2 ಜಾಹೀರಾತು(Online Advertisement)ಗಳನ್ನು ಪ್ರಕಟಿಸಲಾಗಿದೆ. ಕಂಪನಿಯು ಎಲೆಕೋಸು ಕೀಳಲು ಕ್ಷೇತ್ರ ನಿರ್ವಾಹಕರನ್ನು ಹುಡುಕುತ್ತಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಈ ಕೆಲಸದಿಂದ ನೀವು ಸುಲಭವಾಗಿ ಪ್ರತಿ ಗಂಟೆಗೆ 3000 ರೂ. ಗಳಿಸಬಹುದು. ನೀವು ಇನ್ನು ಹೆಚ್ಚು ಗಳಿಸಲು ಬಯಸಿದರೆ ಅದು ನಿಮಗೆ ಬಿಟ್ಟದ್ದು. ನೀವು ಎಷ್ಟು ಹೆಚ್ಚು ಕೆಲಸ ಮಾಡುತ್ತೀರೋ ಅಷ್ಟು ನೀವು ಹೆಚ್ಚು ಹಣ ಗಳಿಸುತ್ತೀರಿ.
ಕಾರ್ಮಿಕರ ಕೊರತೆಯಿಂದ ಆಫರ್ ನೀಡಿದ ಕಂಪನಿ
ಪ್ರಸ್ತುತ ಇಂಗ್ಲೆಂಡಿನ(England) ಹೊಲಗಳಲ್ಲಿ ಕೆಲಸ ಮಾಡವ ಕೆಲಸಗಾರರು ಮತ್ತು ಕಾರ್ಮಿಕರ ಕೊರತೆಯಿದೆ. ಈ ಕಾರಣದಿಂದ ಋತುಮಾನದ ಕೃಷಿ ಕಾರ್ಮಿಕರ ಯೋಜನೆಯಡಿ ಅಲ್ಲಿನ ಸರ್ಕಾರವು ಕಾರ್ಮಿಕರಿಗೆ ಅಲ್ಲಿಗೆ ಹೋಗಿ 6 ತಿಂಗಳು ಕೆಲಸ ಮಾಡಲು ಅವಕಾಶವನ್ನು ನೀಡುತ್ತಿದೆ. ಕೃಷಿ ಮಾತ್ರವಲ್ಲ ಇತರ ಹಲವು ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಅದಕ್ಕಾಗಿಯೇ ಈ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ಕೆಲಸಗಾರರಿಗೆ ಭಾರೀ ಬೇಡಿಕೆ ಇದೆ. ಇದಕ್ಕಾಗಿ ಕಂಪನಿಗಳು ದೊಡ್ಡ ಸಂಬಳವನ್ನು ನೀಡಲು ಸಿದ್ಧವಾಗಿವೆ. ಇದರಿಂದ ಯುಕೆಯಲ್ಲಿನ ಕಾರ್ಮಿಕರು ತಮ್ಮ ಸಂಬಳದ ಶೇ.75ರಷ್ಟು ಹೆಚ್ಚು ಪಾಲು ಪಡೆಯಲು ಸಾಧ್ಯವಾಗಿದೆ.
ಇದನ್ನೂ ಓದಿ: Weird News: Glue ಬಳಸಿ Girl Friend ಕಣ್ಣನ್ನೇ ಅಂಟಿಸಿದ Boy Friend, ಕಾರಣ ಬೆಚ್ಚಿಬೀಳಿಸುವಂತಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.