Weird News: Glue ಬಳಸಿ Girl Friend ಕಣ್ಣನ್ನೇ ಅಂಟಿಸಿದ Boy Friend, ಕಾರಣ ಬೆಚ್ಚಿಬೀಳಿಸುವಂತಿದೆ

Weird News: ಬ್ರೆಜಿಲ್ ನಲ್ಲಿ (Brazil) ಗೆಳೆಯನೊಬ್ಬ (Boyfriend-Girlfriend)  ತನ್ನ ಗೆಳತಿಯ ಕಣ್ಣಿಗೆ ಅಂಟು ಹಾಕಿ ಅವಳ ಒಂದು ಕಣ್ಣನ್ನು ಮುಚ್ಚಿದ ಘಟನೆ ಸಂಭವಿಸಿದ್ದು, ಘಟನೆಯ ನಂತರ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

Written by - Nitin Tabib | Last Updated : Sep 26, 2021, 12:06 PM IST
  • ಗರ್ಲ್ ಫ್ರೆಂಡ್ ಕಣ್ಣಿನಲ್ಲಿ ಐ-ಡ್ರಾಪ್ ಬದಲು ಗ್ಲೂ ಹಾಕಿದ ಬಾಯ್ ಫ್ರೆಂಡ್,
  • ಗರ್ಲ್ ಫ್ರೆಂಡ್ ಗ್ಳುಕೊಮಾ ಕಾಯಿಲೆಯಿಂದ ಬಳಲುತ್ತಿದ್ದಾಳೆ.
  • ಗ್ಲೂ ತೆಗೆದು ಕಣ್ಣನ್ನು ಸ್ವಚ್ಛಗೊಳಿಸದ ವೈದ್ಯರು.
Weird News: Glue ಬಳಸಿ Girl Friend ಕಣ್ಣನ್ನೇ ಅಂಟಿಸಿದ Boy Friend, ಕಾರಣ ಬೆಚ್ಚಿಬೀಳಿಸುವಂತಿದೆ  title=
Boyfriend Glued Girlfriend Eye(File Photo)

Weird News:ವಿವಿಧ ವಸ್ತುಗಳನ್ನು ಅಂಟಿಸಲು ಬಳಸುವ ಅಂಟನ್ನು ವ್ಯಕ್ತಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಕಣ್ಣಿಗೆ  (Boyfriend Glued Girlfriend Eye) ಹಾಕಿದ್ದಾನೆ. ಮಹಿಳೆ ತೀವ್ರ ನೋವಿನಿಂದ ಬಳಲುತ್ತಿದ್ದಾಳೆ ಮತ್ತು ಎಲ್ಲಾ ರೀತಿಯ ಚಿಕಿತ್ಸೆಗಳ ನಂತರವೂ ಆಕೆಯ ಕಣ್ಣು ಮೊದಲಿನಂತೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಈ ಪ್ರಕರಣವು (Weird News) ಬ್ರೆಜಿಲ್‌ನ ಕ್ಯಾಚಿಯೊರೊ ಡಿ ಇಟಾಪೆಮಿರಿಮ್ ನಗರದಿಂದ ವರದಿಯಾಗಿದೆ.

ಐ-ಡ್ರಾಪ್ ನೊಂದಿಗೆ ಅಂಟನ್ನು ಇಡಲಾಗಿತ್ತು
55 ವರ್ಷದ ರೆಜಿನಾ ಅರ್ನಾಮಾ ಗ್ಲುಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದಕ್ಕಾಗಿ ಆಕೆ ಪ್ರತಿನಿತ್ಯ ಕಣ್ಣಿನ ಐ-ಡ್ರಾಪ್ ಗಳನ್ನು  ಹಾಕಬೇಕು. ಅವಳು ತನ್ನ ಐ-ಡ್ರಾಪ್ ಬಾಟಲಿಯನ್ನು  ಮನೆಯ ಫ್ರಿಜ್‌ನಲ್ಲಿ (Eye Drops In Fridge) ಸಂಗ್ರಹಿಸುತ್ತಾಳೆ. 'ದಿ ಸನ್' ನ ವರದಿಯ ಪ್ರಕಾರ, ಆಕೆಯ ಗೆಳೆಯ ಕೂಡ ರೆಜಿನಾ ಕಣ್ಣಿನ ಹನಿಗಳನ್ನು ಇಟ್ಟಿದ್ದ ಫ್ರಿಜ್ ನಲ್ಲಿ (Glue In Fridge) ಗ್ಲು ಇಟ್ಟುಕೊಂಡಿದ್ದ. ರೆಜಿನಾಗೆ ತನ್ನ ಕಣ್ಣಿನಲ್ಲಿ ತೊಂದರೆ ಉಂಟಾದಾಗ, ಅವಳು ತನ್ನ ಗೆಳೆಯನಿಂದ ಸಹಾಯ ಕೇಳಿದ್ದಾಳೆ. ಆತ ಫ್ರಿಜ್ ನಲ್ಲಿ ಇಟ್ಟಿರುವ ಅಂಟು ಮತ್ತು ಕಣ್ಣಿನ ಹನಿಗಳ ಪ್ಲಾಸ್ಟಿಕ್ ಕಂಟೇನರ್ ಒಂದೇ ರೀತಿ ಇದ್ದ ಕಾರಣ  ರೆಜಿನಾ ಐ-ಡ್ರಾಪ್ ಹಾಕುವ ಬದಲು ಅಂಟಿನ ಹನಿಗಳನ್ನು ಹಾಕಿದ್ದಾನೆ. 

ಇದನ್ನೂ ಓದಿ-ಭಾರತದಲ್ಲಿ ಲಸಿಕೆಯನ್ನು ತಯಾರಿಸಲು ಜಾಗತಿಕ ಉತ್ಪಾದಕರಿಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ

ನೋವಿನಿಂದ ನರಳಾಡಿದ ರೆಜಿನಾ
ವಿಷಕಾರಿ ಕೆಮಿಕಲ್ ಗ್ಲೂ ಹಾಕಿದ ಕಾರಣ ರೆಜಿನಾ ನೋವಿನಿಂದ ನರಳಾಡಲು ಆರಂಭಿಸಿದ್ದಾಳೆ. ಆಕೆಯ ಕಣ್ಣು ರೆಪ್ಪೆಗಳು ಒಂದಕ್ಕೊಂದು ಅಂಟಿಕೊಂಡ ಬಳಿಕ ಬಾಯ್ ಫ್ರೆಂಡ್ ಗೆ ತನ್ನ ತಪ್ಪಿನ ಅರಿವಾಗಿದೆ. ಇಲ್ಲಿ ದುರ್ದೈವ ಎಂದರೆ, ಗ್ಲೂ ಹಾಗೂ ಐ-ಡ್ರಾಪ್ ಕಂಟೆನರ್ ಗಳು ಒಂದೇ ರೀತಿಯದ್ದಾಗಿರುವುದರ ಜೊತೆಗೆ ಅವುಗಳ ಹೆಸರಿನಲ್ಲಿಯೂ ಕೂಡ ಸಾಮ್ಯತೆ ಇತ್ತು. ಎರಡೂ ಕಂಟೇನರ್ ಗಳ ಮೇಲಿನ ಹೆಸರು 'C' ಅಕ್ಷರದಿಂದ ಆರಂಭಗೊಳ್ಳುತ್ತಿತ್ತು. ಘಟನೆಯ ವೇಳೆ ಬಾಯ್ ಫ್ರೆಂಡ್ ತನ್ನ ಕನ್ನಡಕ ಧರಿಸಿರಲಿಲ್ಲ. ಘಟನೆಯ ಬಗ್ಗೆ ಹೇಳಿರುವ ರೆಜಿನಾ, 'ಗ್ಲೂ ಕಣ್ಣಿಗೆ ಹೋಗುತ್ತಿದ್ದಂತೆ ವಿಪರೀತ ಉರಿ ಆರಂಭವಾಯಿತು. ನನ್ನ ಕಣ್ಣು ಒಡೆದು ಹೋಗಿದೆ ಏನೋ ಎಂಬಂತೆ ಭಾಸವಾಗಿತು' ಎಂದು ಹೇಳಿದ್ದಾಳೆ. ಬಳಿಕ ತಕ್ಷಣ ರೆಜಿನಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಹಾಗೂ ಆಕೆಗೆ ಚಿಕಿತ್ಸೆ ನೀಡಲಾಯಿತು. ರಾತ್ರಿ ಇಡೀ ಕಣ್ಣಿನಿಂದ ನೀರು ಬರುತ್ತಿತ್ತು ಎಂದು ರೆಜಿನಾ ಹೇಳಿದ್ದಾಳೆ.

ಇದನ್ನೂ ಓದಿ-Viral News: ಜೀವಂತ ಹಾವನ್ನೇ ನುಂಗಿದ ಭೂಪ, ಮುಂದೇನಾಯ್ತು ನೋಡಿ..!

ಈ ಕುರಿತು ಹೇಳಿಕೆ ನೀಡಿರುವ ಚಿಕಿತ್ಸೆ ನೀಡಿದ ವೈದ್ಯ ಲಿಯಾನ್ ಟಿಟೊ, 'ಕೆಮಿಕಲ್ ನಿಂದ ಕೂಡಿದ ಅಥವಾ ಅಲ್ಕೋಹಾಲ್ ನಿಂದ ಕೂಡಿದ ಯಾವುದಾದರೊಂದು ಗ್ಲೂ ಕಣ್ಣಿಗೆ ಬಿದ್ದರೆ, ಕಣ್ಣಿನ ಕಾರ್ನಿಯಾ ಹಾಗೂ ಕಂಜಕ್ಟಿವಾ ಅನ್ನು ವಿಪರೀತ ಹಾನಿಗೊಲಿಸುತ್ತವೆ. ಕಣ್ಣಿನಲ್ಲಿ ಅಂಟಿಕೊಂಡ ಗ್ಲೂ , ಕ್ರಸ್ಟ್ ರೀತಿಯಲ್ಲಿ ತಯಾರಾಗಿ ದೊಡ್ಡ ಗಾಯ ಮಾಡುತ್ತದೆ. ಆದರೆ, ಸದ್ಯ ರೆಜಿನಾ ಕಣ್ಣಿನಿಂದ ಗ್ಲೂ ಅನ್ನು ತೆಗೆದು ಆಕೆಯ ಕಣ್ಣನ್ನು ತೆರೆಯಲಾಗಿದೆ. ಆದರೆ, ಅದು ಕಣ್ಣಿಗೆ ಎಷ್ಟೊಂದು ಘಾಸಿಗೊಳಿಸಿದೆ ಮತ್ತು ಅದು ಎಷ್ಟೊಂದು ಸಮಯದವರೆಗೆ ಇರಲಿದೆ ಎಂಬುದು ತಿಳಿಯಬೇಕಾಗಿದೆ.

ಇದನ್ನೂ ಓದಿ-Coronavirusನ ಅತ್ಯಂತ ಅಪಾಯಕಾರಿ ರೂಪಾಂತರಿ R.1 ಪತ್ತೆ, ಎಚ್ಚರಿಕೆ ನೀಡಿದ ತಜ್ಞರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News