ನವದೆಹಲಿ: ಮಗುವಿನ ಜನನದ ನಿರೀಕ್ಷೆಯೊಂದಿಗೆ ಗರ್ಭಿಣಿಯೊಬ್ಬರು ಆಪರೇಷನ್ ಕೊಠಡಿಗೆ ಪ್ರವೇಶಿಸಿ 2 ಮಕ್ಕಳೊಂದಿಗೆ ಹೊರಬಂದರೆ ಹೇಗಿರುತ್ತದೆಂದು ಊಹಿಸಿ? ಅದೇ ರೀತಿಯ ಅನುಭವ ಅಮೆರಿಕದ ವಿಸ್ಕಾನ್ಸಿನ್(Wisconsin) ಮಹಿಳೆಗೆ ಆಗಿದೆ. 30 ವರ್ಷದ ಲಿಂಡ್ಸೆ ಅಲ್ಟಿಸ್(Lindsay Altis) ಮೊದಲು ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದಾದ ಕೆಲವೇ ಸಮಯದಲ್ಲಿಯೇ ಅವರಿಗೆ ಏನೋ ಒಂದು ರೀತಿಯ ಅನುಭವವಾಗತೊಡಗಿದೆ. ಆಕೆ ಇದ್ದಕ್ಕಿದ್ದಂತೆ ಸಂತೋಷದಿಂದ ಕಿರುಚಾಡಿಬಿಟ್ಟಿದ್ದಾಳೆ. ಇದನ್ನು ಕಂಡ ಆಕೆಯ ಪತಿ ಒಂದು ಕ್ಷಣ ತನ್ನ ಪತ್ನಿಗೆ ಏನಾಯ್ತು ಅಂತಾ ಆಘಾತಕ್ಕೊಳಗಾಗಿದ್ದರು. ಆಪರೇಷನ್ ಥಿಯೇಟರ್ ಒಳಗಿದ್ದ ಎಲ್ಲರೂ ಒಂದೇ ಸಮನೆ ಕಿರುಚಾಡಿದ್ದಾರೆ. ಅಷ್ಟಕ್ಕೂ ಏನಾಯ್ತು ಅಂತೀರಾ..?
ಇದನ್ನೂ ಓದಿ: ಬ್ಯಾಂಕ್ ತುರ್ತು ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ : ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್ ರಜೆ!
1 ಮಗುವಿನ ಬದಲು 2 ಮಗುವಿಗೆ ಜನ್ಮ ನೀಡಿದ ಮಹಿಳೆ
ಮೊದಲ ಹೆಣ್ಣು ಮಗು(Girld Child) ಜನಿಸಿದಾಗ ಲಿಂಡ್ಸೆ ತನ್ನ ಮಗಳು ತುಂಬಾ ಚಿಕ್ಕವಳಿದ್ದಾಳೆ ಅಂತಾ ಭಾವಿಸಿದ್ದರು. ಆದರೆ 2ನೇ ಮಗುವಿಗೆ ಜನ್ಮ ನೀಡುವಾಗ ಅವರ ತೂಕದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿತ್ತು. ಕೇವಲ ಮೊದಲ ಮಗುವಿನ ಬಗ್ಗೆ ಮಾತ್ರ ನಿರೀಕ್ಷೆ ಹೊಂದಿದ್ದ ಅವರಿಗೆ 2ನೇ ಮಗುವಿನ ಅನಿರೀಕ್ಷಿತ ಆಗಮನ ಅಚ್ಚರಿ ಮತ್ತು ಗಾಬರಿ ಹುಟ್ಟಿಸಿತ್ತು. ಈ ಬಗ್ಗೆ ಮಾತನಾಡಿರುವ ಲಿಂಡ್ಸೆ, ‘ನಾನು ನರ್ಸ್ ಬೇರೆ ಏನಾದರೂ ನೋಡಿದ್ದಾರೆಯೇ ಎಂದು ಯೋಚಿಸುತ್ತಿದ್ದೆ. ಅವರು ಅದನ್ನು ನೀರಿನ ಚೀಲ ಎಂದು ಭಾವಿಸಿದ್ದರು. ಆದರೆ ನಾನು ವಿಭಿನ್ನವಾಗಿ ಯೋಚಿಸಿದ್ದೆ. ನನಗೆ ಯಾವುದೇ ಸಮಯದಲ್ಲಿ ಇನ್ನೊಬ್ಬ ಮಗಳು ಹುಟ್ಟುತ್ತಾಳೆ ಅಂತಾ ಅಂದುಕೊಂಡಿರಲಿಲ್ಲ. ನನ್ನ ಕೈಗೆ 2ನೇ ಮಗು ಬಂದ ತಕ್ಷಣ ನಾನು ಸಂತೋಷದಿಂದ ಅಳುತ್ತಿದ್ದೆ ಮತ್ತು 10 ನಿಮಿಷಗಳ ಕಾಲ ಕಿರುಚುತ್ತಲೇ ಇದ್ದೆ. ನಾನು ಅವಳಿಗಳಿಗೆ ಜನ್ಮ ನೀಡುತ್ತೇನೆಂಬ ಕಲ್ಪನೆ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಅವಳಿ ಹೆಣ್ಣುಮಕ್ಕಳು ಹುಟ್ಟಿದ ಖುಷಿಯಲ್ಲಿ ನನ್ನ ಸಹೋದರಿ ಫೋಟೋ ತೆಗೆಯುತ್ತಿದ್ದಳು’ ಅಂತಾ ಖುಷಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?
ಅಲ್ಟ್ರಾಸೌಂಡ್(Ultrasound scans)ನಲ್ಲಿ ಕೂಡ ಕಾಣಿಸಿರಲಿಲ್ಲ
ಲಿಂಡ್ಸೆ ಹೇಳಿರುವ ಪ್ರಕಾರ, ‘ಕೆಲವು ತಿಂಗಳುಗಳವರೆಗೆ ಎಲ್ಲವೂ ಚೆನ್ನಾಗಿ ನಡೆಯಿತು ಮತ್ತು ಅಲ್ಟ್ರಾಸೌಂಡ್(Ultrasound) ಮಾಡಿಸಿಕೊಳ್ಳುವ ಅವಶ್ಯಕತೆ ನನಗೆ ಇರಲಿಲ್ಲ. ಆದರೆ ನಾನು ಅಲ್ಟ್ರಾಸೌಂಡ್ ಮಾಡಿಸಿಕೊಂಡಾಗಲೂ ಅವಳಿಗಳು ಅದರಲ್ಲಿ ಗೋಚರಿಸಿರಲಿಲ್ಲ. ಬಹುಶಃ ಅದನ್ನು ಚೆನ್ನಾಗಿ ಮಾಡಿರಲಿಲ್ಲ ಅಂತಾ ಕಾಣಿಸುತ್ತದೆ. ನಾನು ಹೆರಿಗೆಗೆ ಹೋದಾಗಲೂ ವೈದ್ಯರು ಒಂದೇ ಒಂದು ಮಗುವಿನ ಹೃದಯ ಬಡಿತವನ್ನು ಪತ್ತೆ ಹಚ್ಚಿದ್ದರು. ಆದರೆ ನನಗೆ ಅಚ್ಚರಿ ರೀತಿಯಲ್ಲಿ ಅವಳಿ ಮಕ್ಕಳು ಹುಟ್ಟಿರುವುದು ಖುಷಿ ತಂದಿದೆ’ ಅಂತಾ ಹೇಳಿದ್ದಾರೆ.
ಅಂದಹಾಗೆ ಲಿಂಡ್ಸೆ ಈ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಕಳೆದ ವರ್ಷ. ಈಗ ಅವರು ಮಕ್ಕಳು ಜನಿಸಿದ್ದ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಸಿಕ್ಕ ಈ ವಿಶೇಷ ಊಡುಗೊರೆಯಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದು ಲಿಂಡ್ಸೆ ದಂಪತಿ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.