ನವದೆಹಲಿ: How To Use Hand Sanitizer - ಕೊರೊನಾ ವೈರಸ್ (Coronavirus) ನಿಂದ ರಕ್ಷಣೆ ಪಡೆಯುವಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹ್ಯಾಂಡ್ ಸ್ಯಾನಿಟೈಜರ್ ಬಳಸಲು ಸಲಹೆ ನೀಡಲಾಗುತ್ತದೆ. ಕೈಗಳನ್ನು ಶುಚಿಗೊಳಿಸುವುದು ವೈರಸ್ ನ ಹರಡುವಿಕೆ ತಡೆಗಟ್ಟುವಲ್ಲಿ ಅತ್ಯಾವಶ್ಯಕ ಕ್ರಮವಾಗಿ ಮಾರ್ಪಟ್ಟಿದೆ.  ಹ್ಯಾಂಡ್ ಸ್ಯಾನಿಟೈಸರ್ ಬಳಕೆಯ ಕುರಿತು ಟಿಪ್ಸ್ ಹಂಚಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಅಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲು ಸಲಹೆ (Tips And Tricks For Hand Sanitizer) ನೀಡಿದೆ.


COMMERCIAL BREAK
SCROLL TO CONTINUE READING

ಅಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಪ್ರಮಾಣ ಎಷ್ಟು? (How To Use Hand Sanitizer)
ಈ ಕುರಿತು ಸಲಹೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಒಂದು ಮುಷ್ಟಿಯಷ್ಟು ಹ್ಯಾಂಡ್ ಸ್ಯಾನಿಟೈಸರ್ ಕೈಗಳ ಎಲ್ಲ ಮೇಲ್ಮೈಗೆ ಹಚ್ಚಿ ಎಂದಿದೆ. ಇದಲ್ಲದೆ ಸ್ಯಾನಿಟೈಸರ್ ತನ್ನಷ್ಟಕ್ಕೆ ತಾನೇ ಹಾರಿಹೋಗುವವರೆಗೆ ನಿಮ್ಮ ಎರಡು ಕೈಗಳನ್ನು ಉಜ್ಜಬೇಕು ಮತ್ತು ಈ ಸಂಪೂರ್ಣ ಪ್ರಕ್ರಿಯೆ ಸುಮಾರು 20-30 ಸೆಕೆಂಡ್ ಗಳ ಕಾಲ ನಡೆಯಬೇಕು.


ಅಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಸುರಕ್ಷಿತವೆ?
ಈ ಕುರಿತು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ WHO, 'ಸ್ಯಾನಿಟೈಸರ್ ನಲ್ಲಿ ಅಲ್ಕೋಹಾಲ್ ನ ಬಳಕೆ ಯಾವುದೇ ಪ್ರಾಸಂಗಿಕ ಆರೋಗ್ಯ ಸಮಸ್ಯೆ ಉಂಟು ಮಾಡುವುದಿಲ್ಲ. ಅಲ್ಕೋಹಾಲ್ ನ ಸ್ವಲ್ಪ ಪ್ರಮಾಣ ಚರ್ಮ ಹೀರಿಕೊಳ್ಳುತ್ತದೆ. ಹೆಚ್ಚಿನ ಪ್ರಾಡಕ್ಟ್ ಗಳಲ್ಲಿ ಶುಷ್ಕ ಚರ್ಮ ಸಮಸ್ಯೆ ನಿವಾರಿಸುವ ಒಳ್ಳೆಯ ಪ್ರಭಾವ ಇರುತ್ತದೆ' ಎಂದು ಹೇಳಿದೆ. 


ಎಷ್ಟು ಬಾರಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಉಚಿತ?
ಈ ಕುರಿತು ಹೇಳಿಕೆ ನೀಡುವ ತಜ್ಞರು, ಕೈಯನ್ನು ಶುಚಿಗೊಳಿಸಲು ಸಾಬೂನು ಹಾಗೂ ನೀರಿನ ಬಳಕೆಗೆ ಆದ್ಯತೆ ನೀಡಿದ್ದಾರೆ. ಆದರೆ, ಪದೇ ಪದೇ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಸುರಕ್ಷಿತವಾಗಿದ್ದರೂ ಕೂಡ ದೇಹದಲ್ಲಿ ಆಂಟಿಬಯೋಟಿಕ್ ರೋಗ ಪ್ರತಿರೋಧಕತೆ ಹೆಚ್ಚಿಸುವುದಿಲ್ಲ ಎಂದು ಹೇಳುತ್ತಾರೆ.


ಇದನ್ನೂ ಓದಿ- ಕೊರತೆಯ ನಡುವೆಯೇ ಕಾಲುವೆಯಲ್ಲಿ ಪತ್ತೆಯಾಯಿತು ಸಾವಿರಾರು Remdesivir ಇಂಜೆಕ್ಷನ್..!


ಸಾರ್ವಜನಿಕ ಸ್ಥಳಗಳಲ್ಲಿ ಇರುವ ಸ್ಯಾನಿಟೈಸರ್ ಬಾಟಲ ಬಳಕೆ ಸುರಕ್ಷಿತವೆ?
'ಒಂದು ಬಾರಿ ನೀವು ಹ್ಯಾಂಡ್ ಸ್ಯಾನಿಟೈಸರ್ ಬಳಸಿದರೆ, ಬಾಟಲ ಮೇಲಿರುವ ರೋಗಾಣುಗಳನ್ನು ಕೂಡ ಶುಚಿಗೊಳಿಸಿದಂತೆ. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸಿದರೆ, ಸಮುದಾಯದ ಸಾಮಗ್ರಿಗಳ ಮೇಲೆ ರೋಗಾಣುಗಳ ಅಪಾಯ ಕಡಿಮೆಯಾಗುತ್ತದೆ ಹಾಗೂ ಪ್ರತಿಯೊಬ್ಬ ವ್ಯಕ್ತಿ ಸುರಕ್ಷಿತವಾಗಿರಲಿದ್ದಾನೆ,


ಇದನ್ನೂ ಓದಿ- Complete Lock Down : ಮೇ 10 ರಿಂದ 25 ರವರೆಗೆ ರಾಜ್ಯದಲ್ಲಿ ಸಂಪೂರ್ಣ 'ಲಾಕ್ ಡೌನ್'!


ಪದೇ ಪದೇ ಕೈತೊಳೆಯುವುದು ಹಾಗೂ ಹ್ಯಾಂಡ್ ಗ್ಲೌಸ್ ಬಳಕೆ ಮಾಡುವುದು, ಇವೆರಡರಲ್ಲಿ ಯಾವುದು ಉತ್ತಮ?
ಗ್ಲೋಸ್ ಧರಿಸುವುದರಿಂದ ಒಂದು ಮೇಲ್ಮೈಯಿಂದ ಇನ್ನೊಂದು ಮೇಲ್ಮೈಗೆ ರೋಗಗಳ ಹಸ್ತಾಂತರಣ ಅಪಾಯ ಇರುತ್ತದೆ. ಒಂದು ವೇಳೆ ನೀವು ಗ್ಲೋಸ್ ಬಳಸುತ್ತಿದ್ದರೆ, ನಿಮ್ಮ ಕೈ ಸ್ಯಾನಿಟೈಸ್ ಮಾಡಿರುವುದನ್ನು ಸುನಿಶ್ಚಿತಗೊಳಿಸಿ. ಏಕೆಂದರೆ ' ಗ್ಲೋಸ್ ಧಾರಣೆ ಕೈಗಳ ಶುಚಿತ್ವದ ಪರ್ಯಾಯ ಅಲ್ಲ. ಆರೋಗ್ಯ ಕರ್ಮಿಗಳು ಕೆಲ ವಿಶಿಷ್ಟ ಕೆಲಸಗಳಿಗೆ ಮಾತ್ರ ಗ್ಲೋಸ್ ಬಳಸುತ್ತಾರೆ' ಎಂದು WHO ಹೇಳಿದೆ.


ಇದನ್ನೂ ಓದಿ-Corona Vaccine ಹಾಕಿಸುವ ಮುನ್ನ ಹಾಗೂ ನಂತರ ಏನು ಮಾಡ್ಬೇಕು ಮತ್ತು ಏನ್ಮಾಡಬಾರದು? ಇಲ್ಲಿವೆ ಸರ್ಕಾರದ New Guidelines


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.