WHO ALERT : ಊಟದ ಉಪ್ಪಿಗೊಂದು ಮಿತಿ ಇರಲಿ. ಅತಿ ಆದರೆ ಬರುತ್ತೆ ಗಂಭೀರ ಕಾಯಿಲೆ ಗೊತ್ತಿರಲಿ

ಕೆಟ್ಟ  ಆಹಾರ ಪದ್ದತಿಯ ಕಾರಣ ವರ್ಷಕ್ಕೆ ಸುಮಾರು 1.10 ಕೋಟಿ ಜನ ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಿದೆ WHO. ಇದರಲ್ಲಿ 30 ಲಕ್ಷ ಜನ ಊಟದಲ್ಲಿ ಅಧಿಕ  ಉಪ್ಪು ಅಂದರೆ ಸೋಡಿಯಂ ಸೇವನೆಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.   

Written by - Ranjitha R K | Last Updated : May 7, 2021, 11:08 AM IST
  • ಉಪ್ಪು ಸೇವನೆ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ನೀತಿ ನಿಯಮ ರೂಪಿಸುವ ಅಗತ್ಯ ಇದೆ ಎಂದಿದೆ WHO
  • ಸಂಸ್ಕೃರಿತ ಆಹಾರ ಮತ್ತು ಪಾನೀಯಗಳಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡಬೇಕಾಗಿದೆ ಎನ್ನುತ್ತಿದೆ WHO
  • ಸೋಡಿಯಂ ಅಂಶ ಅಧಿಕ ಇರುವ 64 ಆಹಾರ ಮತ್ತು ಪಾನೀಯಗಳನ್ನು WHO ಗುರುತಿಸಿದೆ.
WHO ALERT :  ಊಟದ ಉಪ್ಪಿಗೊಂದು ಮಿತಿ ಇರಲಿ. ಅತಿ ಆದರೆ ಬರುತ್ತೆ ಗಂಭೀರ ಕಾಯಿಲೆ ಗೊತ್ತಿರಲಿ

ನವದೆಹಲಿ : ಊಟಕ್ಕೆ ತುಸು ಉಪ್ಪು (Salt) ಹೆಚ್ಚು ತಿನ್ನುವ ಅಭ್ಯಾಸವಿದೆಯೆ.  ಉಪ್ಪು ರುಚಿಗೆ ತಕ್ಕಷ್ಟೇ ಇರಲಿ.  ಮಿತಿ ಹೆಚ್ಚಾದರೆ ಹ್ರದ್ರೋಗ, ಸ್ಟ್ರೋಕ್ ಕಾಣಿಸಿಕೊಳ್ಳಬಹುದು ಇವನ್ನೆಲ್ಲಾ ನೋಡಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಆಹಾರದಲ್ಲಿ ಸೋಡಿಯಂ ಪ್ರಮಾಣ  ಎಷ್ಟರ ಮಟ್ಟಿಗೆ ಇದ್ದರೆ ಸೂಕ್ತ ಎಂದು ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದೆ.  ಸೋಡಿಯಂ (Sodium) ಅಂದರೆ ಸರಳವಾಗಿ ಹೇಳಬೇಕೆಂದರೆ ಅಡುಗೆ ಉಪ್ಪು. ಸೋಡಿಯಂ ಒಂದು ಖನಿಜ. ಸೋಡಿಯಂ ಕ್ಲೋರೈಡ್ ಅದರ ಕೆಮಿಕಲ್ ಹೆಸರು.  ಇದು ಶರೀರದಲ್ಲಿ ನೀರಿನ ಮಟ್ಟವನ್ನು ನಿಯಂತ್ರಿಸುತ್ತದೆ. 

ಕೆಟ್ಟ ಆಹಾರ ಕ್ರಮದ ಪರಿಣಾಮ ಏನು ಗೊತ್ತಾ..?
ಕೆಟ್ಟ  ಆಹಾರ ಪದ್ದತಿಯ ಕಾರಣ ವರ್ಷಕ್ಕೆ ಸುಮಾರು 1.10 ಕೋಟಿ ಜನ ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಿದೆ WHO. ಇದರಲ್ಲಿ 30 ಲಕ್ಷ ಜನ ಊಟದಲ್ಲಿ ಅಧಿಕ  ಉಪ್ಪು ಅಂದರೆ ಸೋಡಿಯಂ (Sodium) ಸೇವನೆಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ : Garlic Tea : ಕೊರೋನಾ ಕಾಲದಲ್ಲಿ ಸೇವಿಸಿ ಬೆಳ್ಳುಳ್ಳಿ ಚಹಾ ; ಇದರಿಂದ ಪಡೆಯಿರಿ ಅದ್ಭುತ ಪ್ರಯೋಜನ!

ವಿಶ್ವ  ಆರೋಗ್ಯ ಸಂಸ್ಥೆ ಹೇಳಿದ್ದೇನು ತಿಳಿಯಿರಿ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧಾನಮ್ ಪ್ರಕಾರ '' ಉಪ್ಪು (Salt) ಸೇವನೆ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ನೀತಿ ನಿಯಮ ರೂಪಿಸುವ ಅಗತ್ಯ  ಇದೆ. ಸಂಸ್ಕೃರಿತ ಆಹಾರ ಮತ್ತು ಪಾನೀಯಗಳಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡಬೇಕಾಗಿದೆ. " ಸೋಡಿಯಂ ಅಂಶ ಅಧಿಕ ಇರುವ 64 ಆಹಾರ ಮತ್ತು ಪಾನೀಯಗಳನ್ನು WHO ಗುರುತಿಸಿದೆ. ಆ ಆಹಾರ ಪಾನೀಯಗಳ ಬಗ್ಗೆ ನಿಗಾ ಇಡುವಂತೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಹೇಳಿದೆ. 

ಅಧಿಕ  ಉಪ್ಪು ಸೇವನೆ ಮಾಡಿದರೆ ಏನಾಗುತ್ತದೆ. 
ಅಧಿಕ  ಉಪ್ಪು ಸೇವನೆ ಅಂದರೆ ಇನ್ನೊಂದು ಅರ್ಥದಲ್ಲಿ ಅಧಿಕ ಸೋಡಿಯಂ ಸೇವನೆ. ಅಧಿಕ ಸೋಡಿಯಂ ಸೇವನೆ ನಿಮ್ಮ ಆರೋಗ್ಯವನ್ನು (Health) ಖಂಡಿತಾ ಬಿಗಡಾಯಿಸಿ ಬಿಡುತ್ತದೆ. 
1. ಸೋಡಿಯಂ ಜಾಸ್ತಿಯಾದರೆ ಹ್ರದ್ರೋಗ (Heart disease) ಕಾಣಿಸಿಕೊಳ್ಳಬಹುದು
2. ಬೊಜ್ಜು ಕಾಣಿಸಿಕೊಳ್ಳುತ್ತದೆ.
3. ಕಿಡ್ನಿ (kidney) ಸಂಬಂಧಿ ಕಾಯಿಲೆಗಳು ಬರುತ್ತವೆ
4. ಗ್ಯಾಸ್ಟ್ರಿಕ್ ಕ್ಯಾನ್ಸರ್ ಉಂಟಾಗಬಹುದು.

ಇದನ್ನೂ ಓದಿ : ಅತ್ಯುತ್ತಮ ನ್ಯಾಚುರಲ್ ಇಮ್ಯೂನಿಟಿ ಬೂಸ್ಟರ್ ಈ ಸೋಯಾಬೀನ್..!

ಸರಿ ಹಾಗಾದರೆ, ದಿನಕ್ಕೆ ಎಷ್ಟು ಸೋಡಿಯಂ ತಿನ್ನಬೇಕು.
ಸೋಡಿಯಂ ಅಥವಾ ಉಪ್ಪು ನಮ್ಮೆಲ್ಲಾ ಆಹಾರದಲ್ಲಿ ಇದ್ದೇ ಇರುತ್ತದೆ.  ಆದರೆ ಯಾವುದಕ್ಕೂ ಒಂದು ಮಿತಿ ಅಂತ ಇರುತ್ತದೆ. ಮಿತಿಯೊಳಗಿದ್ದರೆ ಯಾವುದೂ ಅಪಾಯ ಅಲ್ಲ.  ದಿನವೊಂದಕ್ಕೆ ನಮ್ಮ ದೇಹಕ್ಕ 5 ಗ್ರಾಂ ಗಿಂತ ಕಡಿಮೆ ಸೋಡಿಯಂ ಸಿಕ್ಕಿದರೆ ಸಾಕು. 2 ಗ್ರಾಂಗೆ ಸೀಮಿತ ಗೊಳಿಸಿದರೆ ಇನ್ನೂ ಉತ್ತಮ. 5 ಗ್ರಾಂ ದಾಟಿದರೆ ಅಪಾಯಕ್ಕೆ ಆಹ್ವಾನ. ಊಟ ತಿಂಡಿಯಲ್ಲಿ ಮಾತ್ರ  ಉಪ್ಪನ್ನು ಸೀಮಿತ ಮಾಡಲು ಹೋಗಬೇಡಿ. ನೀವು ತಿನ್ನುವ ಚಿಪ್ಸ್ (Chips) , ಕುರುಕಲು, ಬೇಕರಿ ಫುಡ್ಸ್, ಸಂಸ್ಕರಿತ ಆಹಾರಗಳಲ್ಲಿ (processed food) ಉಪ್ಪಿನ ಪ್ರಮಾಣ ತುಸು ಹೆಚ್ಚೆ ಇರುತ್ತದೆ. ಹಾಗಾಗಿ, ಜಂಕ್ ಫುಡ್ ಗಳಲ್ಲಿ ಉಪ್ಪಿನ ಪ್ರಮಾಣ ಎಷ್ಟಿದೆ ತಿಳಿಯಿರಿ. ಅಥವಾ ಜಂಕ್ ಫುಡ್ ತಿನ್ನುವುದನ್ನೇ ಬಿಟ್ಟು ಬಿಡಿ. ಅಥವಾ ಕಡಿಮೆ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News