Mystery Island: ಎಲ್ಲಿದೆ ಈ ಭಯಾನಕ ನಡುಗಡ್ಡೆ, Google Mapನಲ್ಲಿ ನೋಡಿದ ಜನರು ಭಯಬೀತರಾಗಿ ಹೇಳಿದ್ದೇನು ಗೊತ್ತಾ?
Google Map Trending Photo - ಗೂಗಲ್ ಮ್ಯಾಪ್ಸ್ ನಲ್ಲಿ ಇದ್ದಕ್ಕಿದ್ದಂತೆ ಪೋಸ್ಟ್ ಮಾಡಿದ ಅಪರೂಪದ ಫೋಟೋವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಬ್ಬಿಬ್ಬಾಗಿದ್ದಾರೆ. ಈ ಫೋಟೋ ಒಂದು ನಡುಗಡ್ಡೆಯ ಫೋಟೋ ಆಗಿದೆ ಎಂದು ಹೇಳಲಾಗುತ್ತಿದೆ.
Vira Photo - ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಒಂದಿಲ್ಲ ಒಂದು ಫೋಟೋ ಅಥವಾ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಇಂತಹುದೇ ಅಪರೂಪದ ಫೋಟೋ ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ (Google Map Trending Photo) ಆಗುತ್ತಿದೆ. ಅಷ್ಟೇ ಅಲ್ಲ ಅದು ಸಂಪೂರ್ಣ ಕತ್ತಲೆಯಿಂದ ಕೂಡಿರುವ ಒಂದು ವಿಚಿತ್ರವಾದ ದ್ವೀಪ (Unique Island) ಎಂದು ಹೇಳಲಾಗುತ್ತಿದೆ. ಗೂಗಲ್ ಮ್ಯಾಪ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಫೋಟೋ (Viral Photo) ಹಿಂದೆ ಯಾವುದಾದರು ರಹಸ್ಯ ಅಡಗಿದೆಯಾ? ಅಥವಾ ಇದು ಜನರನ್ನು ತಪ್ಪು ದಾರಿಗೆಳೆಯುವ ಫೋಟೋ ಆಗಿದೆಯಾ? ಇದು ತಿಳಿಯುವುದು ಸ್ವಲ್ಪ ಕಷ್ಟದ ವಿಷಯ. ಆದರೂ ಕೂಡ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಫೋಟೋ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಅಪರೂಪದ ಫೋಟೋ ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ. ಹಲವರು ಇದು ದ್ವೀಪ ಅಲ್ಲ ಎಂದೂ ಕೂಡ ವಾದಿಸುತ್ತಿದ್ದಾರೆ.
ಈ ವಿಚಿತ್ರ ಫೋಟೋ ನೋಡಿ ತಬ್ಬಿಬ್ಬಾದ ಬಳಕೆದಾರರು
ಗೂಗಲ್ ಮ್ಯಾಪ್ ಮೂಲಕ ಪ್ರಸ್ತುತ ಪಡಿಸಲಾಗಿರುವ ಈ ಫೋಟೋದಲ್ಲಿ ಒಂದು ಸಣ್ಣ ಹಾಗೂ ತ್ರಿಕೊನಾಕೃತಿ (Hollow Island) ಇದೆ ಮತ್ತು ಅದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಮುದ್ರದಲ್ಲಾಗುತ್ತಿರುವ ಏರಿಳಿತದಿಂದ ಈ ಆಕೃತಿ ನಿರ್ಮಾಣಗೊಂಡಿರುವ ಸಾಧ್ಯತೆಯನ್ನು ವರ್ತಿಸಲಾಗುತಿದೆ. ಈ ಆಕೃತಿಯ ಮಧ್ಯಭಾಗದಲ್ಲಿ ಕಾಣಿಸುತ್ತಿರುವ ಕತ್ತಲೆಯ ಪ್ರದೇಶವನ್ನು ನೋಡಿ ಬಳಕೆದಾರರು ಇದನ್ನು ನಡುಗಡ್ಡೆ ಎಂದು ಕರೆಯುತ್ತಿದ್ದಾರೆ. ಆದರೆ, ಪ್ರಸ್ತುತ ನಡುಗಡ್ಡೆ ಎಂದು ಕರೆಯಲಾಗುತ್ತಿರುವ ಈ ಅಪರೂಪದ ಫೋಟೋ ವಿಕ್ಷೀಸಿ, ಇದರ ಸರಿಯಾದ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.
ಸಾಮಾಜಿಕ ಮಾಧ್ಯಮ ಬಳಕೆದಾರರು ನೀಡಿದ ಪ್ರತಿಕ್ರಿಯೆ ಇದು
ಈ ವಿಚಿತ್ರ ಆಕೃತಿಯನ್ನು ನೋಡಿದ ಕೆಲ ಬಳಕೆದಾರರು ನಿರಾಶೆಯಿಂದ ಇದು ಯಾವ ಕಡೆಯಿಂದಲೂ ಕೂಡ ದ್ವೀಪದಂತೆ ಕಾಣುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರೆ, ಓರ್ವ ಬಳಕೆದಾರ 'ಕೆಲ ಕಾರಣಗಳಿಂದ ಈ ಫೋಟೋವನ್ನು ತಿರುಚಲಾಗಿದೆ' ಎಂದಿದ್ದಾನೆ. ಇದನ್ನು ಒಪ್ಪಿಕೊಂಡು ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಬಳಕೆದಾರ 'ಇದೊಂದು ತಿರುಚಲಾದ ಫೋಟೋ ಎಂಬುದು ನನ್ನ ಮೊದಲ ಅನಿಸಿಕೆ, ನೈಸರ್ಗಿಕವಾಗಿ ಈ ಆಕೃತಿ ಕಪ್ಪು ಅಥವಾ ದ್ವೀಪದಂತೆ ಕಾಣುತ್ತಿಲ್ಲ' ಎಂದಿದ್ದಾನೆ. ಫೋಟೋ ಕುರಿತು ತಮಾಷೆಯ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಬಳಕೆದಾರ, 'ಲೇಡಿಜ್ ಅಂಡ್ ಜೆಂಟಲ್ ಮನ್ ಇವರು ಒಂದು ಕಳೆದುಹೋಗಿರುವ ನಡುಗಡ್ಡೆಯನ್ನು ಹುಡುಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾನೆ.
ಇದನ್ನೂ ಓದಿ-Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ
ಇನ್ನೊಂದೆಡೆ ಗೂಗಲ್ ಮ್ಯಾಪ್ ಪಕ್ಷ ವಹಿಸಿಕೊಂಡು ಮಾತನಾಡಿರುವ ಓರ್ವ ಬಳಕೆದಾರ, 'ಈ ರೀತಿ ಐಲ್ಯಾಂಡ್ ಇದೆ ಎಂಬುದನ್ನು ನಂಬಲು ನನ್ನ ಬಳಿ ಕಾರಣವಿದೆ' ಎಂದಿದ್ದಾನೆ. ' goldenstar365 ಹೆಸರಿನ ಬಳಕೆದಾರನೊಬ್ಬ, ನಡುಗಡ್ಡೆಯ ನಾಲ್ಕು ಭಾಗಗಳಲ್ಲಿ ನೀಲಿ ಬಣ್ಣವನ್ನು ಬಳಸಲಾಗಿದೆ. ಹೀಗಾಗಿ ಮಹಾಸಾಗರಗಳು ಮ್ಯಾಪ್ ನಲ್ಲಿ ಒಂದೇ ರೀತಿ ಕಾಣಿಸುತ್ತವೆ ಎಂದು ಹೇಳಿದ್ದಾನೆ.
ಇದನ್ನೂ ಓದಿ-ಕಚ್ಚಾ ತೈಲ ಖರೀದಿಗಾಗಿ ಭಾರತದಿಂದ $ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ
ಮತ್ತೊಬ್ಬ ಬಳಕೆದಾರ ಇದೊಂದು ಫೇಕ್ ಫೋಟೋ ಆಗಿದ್ದು, ಫೋಟೋ ದಲ್ಲಿ ಕೃತಕವಾಗಿ ತಯಾರಿಸಲಾಗಿರುವ ಮಹಾಸಾಗರದ ಬಣ್ಣ, ಸಾಗರ ಕಡಲು ತೀರ ಹಾಗೂ ನಡುಗಡ್ಡೆಯನ್ನು ಕಾಣಬಹುದು. ಯಾವುದೇ ಐಲ್ಯಾಂಡ್ ಈ ರೀತಿ ವಿಭಿನ್ನ ಹಾಗೂ ವಿಚಿತ್ರವಾಗಿರುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದು ಹೇಳಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಗೂಗಲ್ ಈ ನಡುಗಡ್ಡೆಯ ಫೋಟೋ ಅನ್ನು ನಿರ್ಬಂಧಿಸಬೇಕು. ಏಕೆಂದರೆ, ಗೂಗಲ್ ಮ್ಯಾಪ್ ನಲ್ಲಿ ಸಂಪೂರ್ಣ ಕ್ಷೇತ್ರವನ್ನು ಬ್ಲ್ಯಾಕ್ ಔಟ್ ಮಾಡುವುದು ತುಂಬಾ ಚಿಂತಾಜನಕವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ