ಹಾಂಗ್ ಕಾಂಗ್ : ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ (Coronavirus) ಪ್ರಕರಣದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್, ಭಾರತದಿಂದ ಬರುವ ಮತ್ತು  ಹಾಂಕಾಂಗ್ ನಿಂದ  ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ. ಮಂಗಳವಾರ (ಏಪ್ರಿಲ್ 20) ರಿಂದ ಮೇ 3 ರವರೆಗೆ ಭಾರತದಿಂದ ಮತ್ತು ಭಾರತ ಬರುವ ಲ್ಲಾ ವಿಮಾನಗಳ (Flight) ಹಾರಾಟವನ್ನು ರದ್ದುಗೊಳಿಸಿದೆ. ವಿಸ್ಟಾರಾ ಏರ್‌ಲೈನ್ಸ್ ವಿಮಾನದಲ್ಲಿದ್ದ 50 ಪ್ರಯಾಣಿಕರಲ್ಲಿ ಕರೋನಾ ವೈರಸ್‌ (COVID-19) ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳಿಗೂ ನಿಷೇಧ : 
ಭಾರತವನ್ನು ಹೊರತುಪಡಿಸಿ, ಹಾಂಗ್ ಕಾಂಗ್ (Hong Kong) ಸರ್ಕಾರವು ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳ ಮೇಲೆ ಕೂಡಾ ಏಪ್ರಿಲ್ 20 ರಿಂದ ಮೇ 3 ರವರೆಗೆ ನಿಷೇಧ ಹೇರಿದೆ. ಪಾಕಿಸ್ತಾನ (Pakistan) ಮತ್ತು ಫಿಲಿಪೈನ್ಸ್‌ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹಾಂಗ್ ಕಾಂಗ್ ಈ ಕ್ರಮ ಕೈಗೊಂಡಿದೆ.


ಇದನ್ನೂ ಓದಿ : Mask: ಬಟ್ಟೆ / N95 ಮಾಸ್ಕ್ ಇವುಗಳಲ್ಲಿ ಯಾವುದು ಕರೋನಾದಿಂದ ರಕ್ಷಿಸುತ್ತೆ? ಇಲ್ಲಿದೆ ತಜ್ಞರ ಅಭಿಪ್ರಾಯ


ಏಪ್ರಿಲ್ 20 ರಂದು ಮಧ್ಯಾಹ್ನ 12 ರಿಂದ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ : 
"ಭಾರತ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಿಂದ ಬರುವ ವಿಮಾನಗಳ (Flight) ಹಾರಾಟವನ್ನು ರದ್ದುಗೊಳಿಸಲು ಆದೇಶಿಸಲಾಗಿದೆ" ಎಂದು ಹಾಂಗ್ ಕಾಂಗ್ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ 20 ರಂದು ಮಧ್ಯಾಹ್ನ 12 ರಿಂದ 14 ದಿನಗಳವರೆಗೆ, ಈ ದೇಶಗಳ ಎಲ್ಲಾ ವಿಮಾನಗಳ ಹಾರಾಟವನ್ನು ಹಾಂಗ್ ಕಾಂಗ್‌ ತಡೆಹಿಡಿದಿದೆ. 


ಹಾಂಗ್ ಕಾಂಗ್‌ಗೆ ಹೋಗುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಅಗತ್ಯ : 
ನಿಯಮಗಳ ಪ್ರಕಾರ, ಹಾಂಗ್ ಕಾಂಗ್ ಗೆ ಪ್ರಯಾಣ ಬೆಳೆಸುವವರು ಪ್ರಯಾಣಕ್ಕೂ  72 ಗಂಟೆಗಳ ಮೊದಲು  ಆರ್ ಟಿ-ಪಿಸಿಆರ್ (RT-PCR) ಪರೀಕ್ಷೆ ಮಾಡಿ, ಕೋವಿಡ್ -19  ನೆಗೆಟಿವ್ ವರದಿಯನ್ನು ಪಡೆಯುವುದು ಕಡ್ಡಾಯವಾಗಿದೆ. 


ಇದನ್ನೂ ಓದಿ : Pakistan: ಹಣದುಬ್ಬರದಿಂದ ಪಾಕಿಸ್ತಾನದಲ್ಲಿ 1 ಕೆಜಿ ಸಕ್ಕರೆ ಬೆಲೆ ₹ 100..!


 ಮುಂಬೈ-ಹಾಂಗ್ ಕಾಂಗ್ ವಿಮಾನ ಹಾರಾಟ ರದ್ದು : 
ಮುಂಬೈ (Mumbai) ಮತ್ತು ಹಾಂಗ್ ಕಾಂಗ್ ನಡುವಿನ ಎಲ್ಲಾ ವಿಸ್ಟಾರಾ ಏರ್ಲೈನ್ಸ್ ವಿಮಾನಗಳನ್ನು ಮೇ 2 ರವರೆಗೆ ರದ್ದುಗೊಳಿಸುವುದಾಗಿ,  ಹಾಂಗ್ ಕಾಂಗ್ ಸರ್ಕಾರ ಭಾನುವಾರವೇ ಪ್ರಕಟಿಸಿದೆ. ವಿಸ್ಟಾರಾದ ಮುಂಬೈ-ಹಾಂಗ್ ಕಾಂಗ್ ವಿಮಾನದಿಂದ ಆಗಮಿಸಿದ ಮೂವರು ಭಾನುವಾರ ಕರೋನಾ ವೈರಸ್ (Coronavirus) ಸೋಂಕಿಗೆ ಒಳಗಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.