ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಶುಕ್ರವಾರ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಅನ್ನು ಮಧ್ಯಾಹ್ನ 3 ಗಂಟೆಯವರೆಗೆ ಸ್ಥಗಿತಗೊಳಿಸಿದೆ. ಕಾರಣ ಫ್ರಾನ್ಸ್ ವಿರೋಧಿ ಪ್ರತಿಭಟನೆಯ ಬಗ್ಗೆ ಪಾಕಿಸ್ತಾನದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಂತರಿಕ ಸಚಿವಾಲಯದ ಪ್ರಕಾರ, ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (Pakistan Telecommunication Authority) ತನ್ನ ಸೂಚನೆಯ ಮೇರೆಗೆ ಈ ನಿರ್ಧಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Coronavirus Spreading Through Air: ಗಾಳಿಯ ಮೂಲಕ ಹರಡುತ್ತಿದೆಯೇ ಕರೋನಾ, ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
ಪತ್ರದಲ್ಲಿ, ಆಂತರಿಕ ಸಚಿವಾಲಯವು ಪಿಟಿಎಗೆ ಟ್ವಿಟರ್, ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಟೆಲಿಗ್ರಾಮ್(witter, Facebook, YouTube, WhatsApp, Telegram) ಅನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ 'ಸಂಪೂರ್ಣವಾಗಿ ಬಂದ್ ಮಾಡಿ' ಎಂದು ವಿನಂತಿಸಿದೆ.
ಇದನ್ನೂ ಓದಿ : Nirav Modi Extradition To India: ನಿರವ್ ಮೋದಿ ಭಾರತ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ UK ಗೃಹ ಸಚಿವೆ
"ಮೇಲೆ ಉಲ್ಲೇಖಿಸಿದ ವಿಷಯದ ಹಾಗೆ ದೇಶಾದ್ಯಂತ 2021 ಏಪ್ರಿಲ್ 16 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಸಾಮಾಜಿಕ ಮಾಧ್ಯಮ(Social Media) ಪ್ಲಾಟ್ಫಾರ್ಮ್ಗಳಿಗೆ ಸಂಪೂರ್ಣವಾಗಿ ಬಂದ್ ಮಾಡಿ ಎಂದು ನನಗೆ ನಿರ್ದೇಶಿಸಲಾಗಿದೆ" ಎಂದು ಸಚಿವಾಲಯದ ವಿಭಾಗ ಅಧಿಕಾರಿ ಅಬ್ದುಲ್ ರಜಾಕ್ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಂಸತ್ತಿನ Zoom ಮೀಟಿಂಗ್ ನಲ್ಲಿ ಬೆತ್ತಲೆ ಪ್ರತ್ಯಕ್ಷನಾದ ಕೆನಡಾ ಸಂಸದ...!
ಸಚಿವಾಲಯಕ್ಕೆ ಬಂದ್ ಮಾಹಿತಿಯಡಿಯಲ್ಲಿ ವಿಷಯದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.