ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜನರು ಸಧ್ಯ ಹಣದುಬ್ಬರದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಹಿಟ್ಟು, ತರಕಾರಿ, ಮೊಟ್ಟೆ ಮತ್ತು ಮಾಂಸ, ಸಕ್ಕರೆ ಬೆಲೆಗಳು ವಿಪರೀತ ಏರಿಕೆಯಾಗಿವೆ. ನೆರೆಯ ದೇಶ ಪಾಕ್ ನಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ 100 ರೂ. ಆಗಿದೆ. ಸಬ್ಸಿಡಿ ದರದಲ್ಲಿ ಸಕ್ಕರೆಯನ್ನು ತೆಗೆದುಕೊಳ್ಳಲು ಜನರು ರಂಜಾನ್ ತಿಂಗಳಲ್ಲಿ ಪ್ರತಿದಿನ ಜನರು ಸರ್ತಿ ಸಾಲಿನಲ್ಲಿ ಘಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಈ ಕಾರಣದಿಂದಾಗಿ ಇಮ್ರಾನ್ ಖಾನ್ ಸರ್ಕಾರ ಈಗ ಪ್ರತಿಪಕ್ಷಗಳಿಗೆ ಆಹಾರವಾಗಿದೆ.
ನಕಲಿ ಸರ್ಕಾರದ ನಿಜವಾದ ಮುಖ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಉಪಾಧ್ಯಕ್ಷ ಮರಿಯಮ್ ನವಾಜ್ ಷರೀಫ್(Maryam Nawaz Sharif) ಇಮ್ರಾನ್ ಖಾನ್ ಸರ್ಕಾರವನ್ನು ಕೆಣಕಿದ್ದಾರೆ. ಟ್ವಿಟ್ಟರ್ ನಲ್ಲಿ ಸಕ್ಕರೆಗಾಗಿ ಜನರು ಸಾಲುಗಳಲ್ಲಿ ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿ, 'ಜನರು ಸಕ್ಕರೆ ಖರೀದಿಸಲು ಸಾಲುಗಳಲ್ಲಿ ನಿಂತಿದ್ದಾರೆ. ಖರೀದಿಸಿದ ನಂತರ, ಪ್ರತಿಯೊಬ್ಬ ವ್ಯಕ್ತಿಯ ಹೆಬ್ಬೆರಳಿನ ಮೇಲೆ ಗುರುತು ಹಾಕಲಾಗುತ್ತದೆ. ನಕಲಿ ಸರ್ಕಾರದ ನಿಜವಾದ ಮುಖವನ್ನು ಈ ಚಿತ್ರದಲ್ಲಿ ಕಾಣಬಹುದು' ಎಂದು ಬರೆದುಕೊಂಡಿದ್ದಾರೆ.
People queued up to buy sugar. An indelible ink mark on the thumb of every buyer is being put after the purchase. The true face of jaali government can be seen in this picture. pic.twitter.com/VjGk2PGMtE
— Maryam Nawaz Sharif (@MaryamNSharif) April 17, 2021
ಇದನ್ನೂ ಓದಿ: ನಾಯಿಗೂ ಆಫಿಸರ್ ಯೋಗ, ಭರ್ಜರಿ ಪ್ಯಾಕೇಜ್..! ಕೆಲಸ ನೀಡೋ ಕಂಪನಿ ಯಾವುದು ಗೊತ್ತಾ.?
ಈ ಬಗ್ಗೆ ಇಮ್ರಾನ್ ನಿರ್ಧಾರವೇನು? ಪಾಕ್ ಪ್ರಧಾನಿ ಇಮ್ರಾನ್ ಖಾನ್(Imran Khan) ತಮ್ಮ ನಿರ್ಧಾರವನ್ನು ಯುಟೂರ್ನ್ ತೆಗೆದುಕೊಂಡಿದ್ದಾರೆ ಎಂಬ ವರದಿಗಳಿವೆ, ಇದರಲ್ಲಿ ಭಾರತದಿಂದ ಸಕ್ಕರೆಯನ್ನು ಅಗ್ಗದ ಬೆಲೆಗೆ ಖರೀದಿಸುವ ಬಗ್ಗೆ ಚರ್ಚೆ ನಡೆಯಿತು. ಕಳೆದ ವಾರ, ಉಭಯ ದೇಶಗಳ ನಡುವಿನ ವ್ಯಾಪಾರ ಶುರುವಾಗುವ ನಿರೀಕ್ಷೆಯಿತ್ತು. ಆದರೆ, ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಪಾಕಿಸ್ತಾನ ಇಸಿಸಿಯ ನಿರ್ಧಾರವನ್ನು ಪಾಕಿಸ್ತಾನ ಕ್ಯಾಬಿನೆಟ್ ನಿಲ್ಲಿಸಿತು.
ಇದನ್ನೂ ಓದಿ: Coronavirus Airborne: ಗಾಳಿಯಿಂದ ಹರಡುವ ಕೊರೊನಾಗೆ ಭಯಪಡಬೇಡಿ, ವೈದ್ಯರ ಈ ರಾಮಬಾಣ ಉಪಾಯ ಅನುಸರಿಸಿ
ನಮ್ಮ ಪಾಲುದಾರ ಸುದ್ದಿ ಸಂಸ್ಥೆಯಾದ ಜೀ ಬಿಸಿನೆಸ್‌ನ ವರದಿಯ ಪ್ರಕಾರ, ಭಾರತ-ಪಾಕಿಸ್ತಾನವು ಸಕ್ಕರೆ(Sugar) ಕೊರತೆಯನ್ನು ಸುಲಭವಾಗಿ ಪೂರೈಸಬಹುದು ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಸಂಘ (ಎಐಎಸ್‌ಟಿಎ) ಅಧ್ಯಕ್ಷ ಪ್ರಫುಲ್ಲಾ ವಿಥಲಾನಿ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಪುನರಾರಂಭದಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ. ದಿನ ಬಳಕೆಯ ಅಗತ್ಯ ವಸ್ತುಗಳನ್ನು ರಾಜಕೀಯದಿಂದ ದೂರವಿಡಬೇಕು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ದೇಶದಲ್ಲಿ ಎಲ್ಲಾ ಸೋಶಿಯಲ್ ಮೀಡಿಯಾಗಳು ಬಂದ್!
ಪಾಕ್ ಗೆ ಭಾರತದಿಂದ 4 ದಿನಗಳಲ್ಲಿ ಸಿಗುತ್ತೆ ಸಕ್ಕರೆ: ಭಾರತವು ಪಾಕಿಸ್ತಾನ(India-Pakistan)ಕ್ಕೆ ಪ್ರತಿ ಟನ್ ಸಕ್ಕರೆ ಬೆಲೆ 398 ಡಾಲರ್ ದರದಲ್ಲಿ (ಸರಕು ಸಾಗಣೆ ಸೇರಿದಂತೆ) ಪಂಜಾಬ್ ಮೂಲಕ ರಸ್ತೆ ಮೂಲಕ ಸಾಗಿಸಬಹುದು ಎಂದು ಹೇಳಿದರು. ಸಮುದ್ರ ಮಾರ್ಗದಲ್ಲಿ ಇತರ ದೇಶಗಳಿಂದ ಬರುವ ಸಕ್ಕರೆಗಿಂತ ಈ ದರ ಪ್ರತಿ ಟನ್‌ಗೆ $ 25 ಅಗ್ಗವಾಗಿದೆ. ಬ್ರೆಜಿಲ್‌ನಿಂದ ಪಾಕಿಸ್ತಾನಕ್ಕೆ ಸಕ್ಕರೆ ತಲುಪಿಸಲು 45-60 ದಿನಗಳು ಬೇಕಾದರೆ, 4 ದಿನಗಳಲ್ಲಿ ಸಕ್ಕರೆಯನ್ನು ಭಾರತದಿಂದ ಅಲ್ಲಿಗೆ ಸಾಗಿಸಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: Coronavirus Spreading Through Air: ಗಾಳಿಯ ಮೂಲಕ ಹರಡುತ್ತಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.