ನವದೆಹಲಿ : ಭಾರತದಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳು ಕಡಿಮೆಯಾಗುತ್ತಿದ್ದರೆ, ನೆರೆಯ ರಾಷ್ಟ್ರವಾದ ಚೀನಾದಲ್ಲಿ ವೈರಸ್ ತಾಂಡವವಾಡುತ್ತಿದೆ. ಈ ದಿನಗಳಲ್ಲಿ ಓಮಿಕ್ರಾನ್ ರೂಪಾಂತರವು (Omicron new varient)ಚೀನಾವನ್ನು ಅತಿ ಹೆಚ್ಚು ಕಾಡಿದೆ.  ಚೀನಾದಲ್ಲಿ 13,000 ಕ್ಕೂ ಹೆಚ್ಚು ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ವರದಿಯಾಗಿವೆ. ಚೀನಾದ ಮಾಧ್ಯಮದ ಪ್ರಕಾರ, ಈ ಪ್ರಕರಣಗಳು ಓಮಿಕ್ರಾನ್ ರೂಪಾಂತರದ ಸಬ್ ವೆರಿಯೇಂಟ್ ಆಗಿವೆ. 


COMMERCIAL BREAK
SCROLL TO CONTINUE READING

ಬೇರೆ ಯಾವುದೇ ರೂಪಾಂತರದೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ :
ಗ್ಲೋಬಲ್ ಟೈಮ್ಸ್ ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ಶಾಂಘೈನಿಂದ 70 ಕಿಮೀ ದೂರದಲ್ಲಿರುವ ನಗರದಲ್ಲಿ ಈ ಹೊಸ ರೂಪಾಂತರದ ಲಕ್ಷಣಗಳು ಕಂಡುಬಂದಿವೆ. ಈ ಹೊಸ ರೂಪಾಂತರವು ಓಮಿಕ್ರಾನ್ ರೂಪಾಂತರದ (omicron varient) BA.1.1 ಸಬ್ ವೆರಿಯೇಂಟ್ ನಿಂದ ವಿಕಸನಗೊಂಡಂತೆ ಕಂಡುಬರುತ್ತದೆ. ಈ ಹೊಸ ರೂಪಾಂತರವು ಕರೋನಾದ ಇತರ ರೂಪಾಂತರಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎನ್ನಲಾಗಿದೆ.  ಇದನ್ನು GISAIDಗೆ ಇನ್ನೂ  ಸಲ್ಲಿಸಲಾಗಿಲ್ಲ. GISAID ಎಂಬುದು ಪ್ರಪಂಚದಾದ್ಯಂತದ ವಿಜ್ಞಾನಿಗಳು ಕರೋನಾ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಸ್ಥಳವಾಗಿದೆ (coronavirus new case). 


ಇದನ್ನೂ  ಓದಿ : Economic Crisis:ಆರ್ಥಿಕ ಬಿಕ್ಕಟ್ಟಿನ ಜೊತೆಗೆ ರಾಜಕೀಯ ಸಂಕಷ್ಟ: ಸಂಪುಟ ತೊರೆದ ಈ ದೇಶದ ಎಲ್ಲಾ ಸಚಿವರು!


ಡಲಿಯನ್ ನಗರದಲ್ಲಿ ಮೊದಲ ಪ್ರಕರಣ ಪತ್ತೆ : 
ಶುಕ್ರವಾರ, ಉತ್ತರ ಚೀನಾದ ಡಲಿಯನ್ ನಗರದಲ್ಲಿ ಈ ಹೊಸ ಉಪ-ವೇರಿಯಂಟ್‌ನ ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ. ಕರೋನಾ ವೈರಸ್‌ನ (coronavirus) ಈ ರೂಪಾಂತರವು ಬೇರೆ ಯಾವುದೇ ರೂಪಾಂತರದೊಂದಿಗೆ ಹೊಂದಿಕೆಯಾಗುವುದಿಲ್ಲ ಎನ್ನಲಾಗಿದೆ. . ಡಲಿಯನ್ ಸ್ಥಳೀಯ ಆಡಳಿತವೂ ಇದನ್ನು ದೃಢಪಡಿಸಿದೆ. ಶನಿವಾರ ಚೀನಾದಾದ್ಯಂತ ವರದಿಯಾದ ಸುಮಾರು 12,000 ಪ್ರಕರಣಗಳನ್ನು ಲಕ್ಷಣರಹಿತವೆಂದು ಘೋಷಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಕರೋನಾವನ್ನು ತಡೆಯಲು ಚೀನಾ ಸರ್ಕಾರ ಎರಡು ನಿರ್ಬಂಧಗಳನ್ನು ಜಾರಿಗೆ ತಂದಿದೆ. ಕೊರೊನಾದಿಂದಾಗಿ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಮಾಧ್ಯಮಗಲ್ಲಿ ವರದಿ ಮಾಡಲಾಗಿದೆ.  


ದೊಡ್ಡ ಪ್ರಮಾಣದಲ್ಲಿ ಕರೋನಾ ಪರೀಕ್ಷೆ ನಡೆಸಲು ಸೂಚನೆ :
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವೈಸ್ ಪ್ರೀಮಿಯರ್ ಸನ್ ಚುನ್ಲಾನ್, ಸೋಂಕು ತಡೆಗಟ್ಟುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ದೇಶದಲ್ಲಿ ವೈರಸ್ ಹಾಟ್‌ಸ್ಪಾಟ್ ಆಗಿರುವ  ನಗರಕ್ಕೆ ಭೇಟಿ ನೀಡಿದ್ದಾರೆ. ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ, ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


ಇದನ್ನೂ ಓದಿ : Corona 4th Wave: ಶಾಂಘೈನಲ್ಲಿ ಕೊರೊನಾ 4ನೇ ಅಲೆಯ ಅಬ್ಬರ: 24 ಗಂಟೆಯಲ್ಲಿ 1,366 ಕೇಸ್‌ ದಾಖಲು


ಭಾರತದಲ್ಲಿ ಕರೋನಾ ಪ್ರಕರಣಗಳಲ್ಲಿ ಪರಿಹಾರ :
ಈ ಎಲ್ಲದರ ನಡುವೆ, ಭಾರತದಲ್ಲಿ ಕೊರೊನಾ (Corona) ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. 24 ಗಂಟೆಗಳಲ್ಲಿ ದೇಶದಲ್ಲಿ ಕೇವಲ 1,096 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಇಂದು ಬೆಳಗ್ಗೆ 7 ಗಂಟೆಯವರೆಗೆ ದೇಶದಲ್ಲಿ 184 ಕೋಟಿ 66 ಲಕ್ಷ 86 ಸಾವಿರದ 260 ಕೋವಿಡ್ ಲಸಿಕೆಗಳನ್ನು (corona vaccine) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1,096 ಹೊಸ ಕೋವಿಡ್ ಸೋಂಕಿತರು ಮುಂಚೂಣಿಗೆ ಬಂದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.