ಕರೋನಾದ ಈ ಹೊಸ ರೂಪಾಂತರವು ಒಮಿಕ್ರಾನ್‌ನಿಂದ ಎಷ್ಟು ಅಪಾಯಕಾರಿ ? WHO ಹೇಳಿದ್ದೇನು ?

UK ಯ ಬ್ರಿಟಿಷ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಇತ್ತೀಚಿನ ಅಧ್ಯಯನವು ಪ್ರಸ್ತುತ 3 ಹೈಬ್ರಿಡ್ COVID ರೂಪಾಂತರಗಳು ಚಾಲನೆಯಲ್ಲಿವೆ ಎಂದು ಹೇಳಿದೆ. ಡೆಲ್ಟಾ ಮತ್ತು BA.1 ಸಂಯೋಜನೆಯಿಂದ XD ಮತ್ತು XF ಎಂಬ ಎರಡು ವಿಭಿನ್ನ ರೂಪಾಂತರಗಳು ಸೃಷ್ಟಿಯಾಗಿವೆ. ಮೂರನೆಯದು XE.

Written by - Ranjitha R K | Last Updated : Apr 2, 2022, 03:51 PM IST
  • ಕರೋನಾದ ಹೊಸ ರೂಪಾಂತರ XE ಆತಂಕವನ್ನು ಹೆಚ್ಚಿಸಿದೆ
  • ಇದು ಓಮಿಕ್ರಾನ್ ಗಿಂತ 10% ಹೆಚ್ಚು ಸಾಂಕ್ರಾಮಿಕ
  • BA.1 ಮತ್ತು BA.2 ರ ರಿಕಾಂಬಿನೆಟ್ ಸ್ಟ್ರೈನ್ ಆಗಿದೆ
ಕರೋನಾದ ಈ ಹೊಸ ರೂಪಾಂತರವು ಒಮಿಕ್ರಾನ್‌ನಿಂದ ಎಷ್ಟು ಅಪಾಯಕಾರಿ ? WHO ಹೇಳಿದ್ದೇನು ?  title=
Corona new varient (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ವಿಶ್ವದ ಹಲವು ದೇಶಗಳಲ್ಲಿ ಕೊರೊನಾವೈರಸ್ (Coronavirus)ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ ಚೀನಾದ ಹಲವು ನಗರಗಳಲ್ಲಿ ಲಾಕ್‌ಡೌನ್ (Lockdown)ಹೇರಲಾಗಿದೆ.  ಈ ಮಧ್ಯೆ, ಕರೋನವೈರಸ್ XE ನ ಹೊಸ ರೂಪಾಂತರ ಕೂಡಾ ಕದ ತಟ್ಟಿದೆ. ಈ ಹೊಸ ರೂಪಾಂತರವು ಓಮಿಕ್ರಾನ್‌ಗಿಂತ 10 ಪ್ರತಿಶತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು WHO ಹೇಳಿದೆ.

BA.1 ಮತ್ತು BA.2 ರ ರಿಕಾಂಬಿನೆಟ್ ಸ್ಟ್ರೈನ್ XE ಆಗಿದೆ : 
UK ಯ ಬ್ರಿಟಿಷ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಇತ್ತೀಚಿನ ಅಧ್ಯಯನವು ಪ್ರಸ್ತುತ 3 ಹೈಬ್ರಿಡ್ COVID ರೂಪಾಂತರಗಳು ಚಾಲನೆಯಲ್ಲಿವೆ ಎಂದು ಹೇಳಿದೆ. ಡೆಲ್ಟಾ ಮತ್ತು BA.1 ಸಂಯೋಜನೆಯಿಂದ XD ಮತ್ತು XF ಎಂಬ ಎರಡು ವಿಭಿನ್ನ ರೂಪಾಂತರಗಳು ಸೃಷ್ಟಿಯಾಗಿವೆ. ಮೂರನೆಯದು XE. ವರದಿಯ ಪ್ರಕಾರ, XE ರೂಪಾಂತರವು ಹಳೆಯ ಓಮಿಕ್ರಾನ್‌ನಿಂದ BA.1 ಮತ್ತು BA.2 ಎಂಬ ಎರಡು ಉಪ-ವಂಶಗಳ ರಿಕಾಂಬಿನೆಟ್ ತಳಿಯಾಗಿದೆ. ಆದರೂ WHO ತನ್ನ ಇತ್ತೀಚಿನ ವರದಿಯಲ್ಲಿ XE ರೂಪಾಂತರದ ಪ್ರಸರಣ ಮತ್ತು ರೋಗದ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುವವರೆಗೆ, ಅದನ್ನು Omicron ರೂಪಾಂತರಕ್ಕೆ ಲಿಂಕ್ ಮಾಡಲಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ : MBBS ಸಿಲೆಬಸ್ ನಲ್ಲಿ ಭಾರಿ ಬದಲಾವಣೆ, ತಪ್ಪದೆ ಓದಿ

600 ಕ್ಕೂ ಹೆಚ್ಚು XE ಪ್ರಕರಣಗಳನ್ನು ದೃಢ : 
WHO ಹೇಳುವಂತೆ BA.2 ಸಬ್ ವೆರಿಯೇಂಟ್ ಈಗ ಪ್ರಪಂಚದ ಅತಿದೊಡ್ಡ ಚಿಂತೆಯಾಗಿದೆ. ಇದು ಅನುಕ್ರಮ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು 86 ಪ್ರತಿಶತವನ್ನು ಹೊಂದಿದೆ. XE ಸ್ಟ್ರೈನ್ ಅನ್ನು ಮೊದಲು UK ನಲ್ಲಿ ಪತ್ತೆ ಹಚ್ಚಲಾಯಿತು. ಅಂದಿನಿಂದ 600 ಕ್ಕೂ ಹೆಚ್ಚು XE ಪ್ರಕರಣಗಳನ್ನು ದೃಢೀಕರಿಸಲಾಗಿದೆ . ಬ್ರಿಟನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ತಜ್ಞ ಸುಝೇನ್ ಹಾಪ್ಕಿನ್ಸ್ ಪ್ರಕಾರ, ಹೊಸ ರೂಪಾಂತರ XEಯ ಸಾಂಕ್ರಾಮಿಕತೆ, ತೀವ್ರತೆಯ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎನ್ನಲಾಗಿದೆ (Corona new varient). ಲಸಿಕೆ ಇದರ ಮೇಲೆ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಕೂಡಾ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 

ರಿಕಾಂಬಿನೆಟ್ ರೂಪಾಂತರವು ಎಷ್ಟು ಅಪಾಯಕಾರಿ? 
ಹಿಂದಿನ ರೂಪಾಂತರಗಳಂತೆ, ರಿಕಾಂಬಿನೆಟ್ ರೂಪಾಂತರವು ಸಹ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಅವು ಒಂದೇ ವೈರಸ್‌ನಿಂದ ಸ್ಪೈಕ್ ಮತ್ತು ರಚನಾತ್ಮಕ ಪ್ರೋಟೀನ್‌ಗಳನ್ನು ಹೊಂದಿರುತ್ತವೆ (ಉದಾಹರಣೆಗೆ XE ಅಥವಾ XF). ಇವುಗಳಲ್ಲಿ, XD ಅತ್ಯಂತ ಆತಂಕಕಾರಿ ರೂಪಾಂತರವಾಗಿದೆ. ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಡೆನ್ಮಾಕ್ ನಲ್ಲಿ ಈ ರೂಪಾಂತರದ ಸೋಂಕಿತ ರೋಗಿಗಳು ಕಂಡುಬಂದಿದ್ದಾರೆ.

ಇದನ್ನೂ ಓದಿ : 350 ವಸ್ತುಗಳ ಮೇಲೆ ತೆರಿಗೆ ಹೆಚ್ಚಳ; ಹೊಟೇಲ್ ತಿಂಡಿ ಬೆಲೆ ದುಪ್ಪಟ್ಟು ಸಾಧ್ಯತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News