Fourth wave of Covid: ನಿಮ್ಮ ಹಲ್ಲುಗಳು/ಒಸಡುಗಳಲ್ಲಿನ ಈ ಸಮಸ್ಯೆಗಳು ಕೋವಿಡ್‌ನ ಲಕ್ಷಣಗಳಾಗಿರಬಹುದು!

Fourth wave of Covid: ಇತ್ತೀಚಿನ ಅಧ್ಯಯನಗಳಲ್ಲಿ ಹಲ್ಲುಗಳು/ಒಸಡುಗಳಲ್ಲಿನ ಕೆಲವು ಸಮಸ್ಯೆಗಳು  ಕೋವಿಡ್ -19 ನೊಂದಿಗೆ ಸಂಪರ್ಕವನ್ನು ಹೊಂದಿರಬಹುದು ಎಂದು ಪತ್ತೆಯಾಗಿದೆ.

Written by - Yashaswini V | Last Updated : Apr 4, 2022, 10:09 AM IST
  • ಹಲ್ಲಿನ ಸಮಸ್ಯೆ ಈಗ ಕೋವಿಡ್-19 ಪ್ರಮುಖ ಲಕ್ಷಣವಾಗಿದೆಯೇ?
  • ಒಸಡು/ಹಲ್ಲುಗಳ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ
  • ಗಮನಿಸಬೇಕಾದ ಕೋವಿಡ್ ಹಲ್ಲಿನ ಲಕ್ಷಣಗಳು
Fourth wave of Covid: ನಿಮ್ಮ ಹಲ್ಲುಗಳು/ಒಸಡುಗಳಲ್ಲಿನ ಈ ಸಮಸ್ಯೆಗಳು ಕೋವಿಡ್‌ನ ಲಕ್ಷಣಗಳಾಗಿರಬಹುದು! title=
Fourth Covid wave symptoms

Fourth wave of Covid: ಇತ್ತೀಚಿಗೆ ಕೊರೊನಾವೈರಸ್‌ನ ಮತ್ತೊಂದು ಹೊಸ ರೂಪಾಂತರದ ಹೊರಹೊಮ್ಮುವಿಕೆ ಬಗ್ಗೆ ವರದಿಯಾಗುತ್ತಿದೆ. ನೆರೆಯ ದೇಶಗಳಾದ ಚೀನಾ, ತೈವಾನ್ ಮತ್ತು ಇತರ ದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು, ಭಾರತದಲ್ಲಿ ಕೋವಿಡ್ ನಾಲ್ಕನೇ ತರಂಗದ ಭೀತಿಯನ್ನು ಹೆಚ್ಚಿಸಿವೆ. 

ವಾಸ್ತವವಾಗಿ, ಭಾರತದಲ್ಲಿ ಹೊಸ ಕೋವಿಡ್-19 (Covid-19) ಪ್ರಕರಣಗಳು ನಿರಂತರವಾಗಿ ಕ್ಷೀಣಿಸುತ್ತಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಕರೋನಾವೈರಸ್-ಸಂಬಂಧಿತ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಘೋಷಿಸಲಾಗುತ್ತಿದೆ. ಆದಾಗ್ಯೂ, Omicron, BA.2 ಅಥವಾ ಸ್ಟೆಲ್ತ್ ಓಮಿಕ್ರಾನ್‌ನ ಸೋಂಕಿನ ಲಕ್ಷಣಗಳ ಬಗ್ಗೆ ಆರೋಗ್ಯ ಅಧಿಕಾರಿಗಳು ಇನ್ನೂ ಎಚ್ಚರಿಕೆ ನೀಡುತ್ತಲೇ ಇದ್ದಾರೆ. 

ಇಂತಹ ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ, ಕೋವಿಡ್-19 ರ ಹೊಸ ಲಕ್ಷಣಗಳು ಅಥವಾ ಚಿಹ್ನೆಗಳ ಬಗ್ಗೆ ತಿಳಿದಿರುವುದು ಕೂಡ ಅತ್ಯಗತ್ಯವಾಗಿದೆ. ಇದಕ್ಕೆ ಉತ್ತರ ನಿಮ್ಮ ಬಾಯಿಯ ಆರೋಗ್ಯ, ಹಲ್ಲು ಮತ್ತು ಒಸಡುಗಳಲ್ಲಿರಬಹುದು.

ಇದನ್ನೂ ಓದಿ- ಕೋವಿಡ್ ನಿಂದ ಗುಣಮುಖರಾದವರಿಗೆ ಕ್ಷಯ ಸೋಂಕು, ವರದಿ ಸಲ್ಲಿಸಲು ಸೂಚನೆ

ತಜ್ಞರ ಪ್ರಕಾರ, ಕೇವಲ ಜ್ವರ ಮತ್ತು ಕೆಮ್ಮು ಇನ್ನು ಮುಂದೆ ಕರೋನಾ ಪರಿಚಯದ ಲಕ್ಷಣಗಳಲ್ಲ. ಆದರೆ ಹೊಸ ರೂಪಾಂತರಗಳು ನಿಮ್ಮ ಹಲ್ಲು ಮತ್ತು ಒಸಡುಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಹೊಸ ಕರೋನವೈರಸ್ ಸೋಂಕುಗಳು ಹಲ್ಲು ಮತ್ತು ಒಸಡುಗಳ ಮೇಲೆ ಪರಿಣಾಮ ಬೀರುತ್ತವೆಯೇ?
ಇತ್ತೀಚಿನ ಅಧ್ಯಯನವು ಹಲ್ಲಿನ ಅಥವಾ ಮೌಖಿಕ ಆರೋಗ್ಯವು ಕೋವಿಡ್ -19 ನೊಂದಿಗೆ ಸಂಪರ್ಕವನ್ನು ಹೊಂದಿರಬಹುದು ಎಂದು ಕಂಡುಹಿಡಿದಿದೆ. ಅಧ್ಯಯನದ ಪ್ರಕಾರ, ಕರೋನವೈರಸ್ (Coronavirus) ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ ಮತ್ತು ಕರೋನಾದಿಂದ ಬಳಲುತ್ತಿರುವ 75% ಜನರು ಅಂತಹ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಆದಾಗ್ಯೂ, ಕೋವಿಡ್ -19 ಸೋಂಕಿನ ಲಕ್ಷಣಗಳ ವಿಷಯಕ್ಕೆ ಬಂದಾಗ ದಂತ ಮತ್ತು ವಸಡು ಸಮಸ್ಯೆ ಹೊಸದೇನಲ್ಲ. ಭಾರತದಲ್ಲಿ ಮಾರಣಾಂತಿಕ ಎರಡನೇ ಕೋವಿಡ್ ತರಂಗದಲ್ಲಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಅನೇಕ ಜನರು ವಸಡು ನೋವು ಮತ್ತು ದಂತ ಸೂಕ್ಷ್ಮತೆಯ ಬಗ್ಗೆ ದೂರು ನೀಡಿದ್ದಾರೆ.

ಹಲ್ಲಿನ ಸಮಸ್ಯೆ ಈಗ ಕೋವಿಡ್-19 ಪ್ರಮುಖ ಲಕ್ಷಣವಾಗಿದೆಯೇ?
ಕೋವಿಡ್ -19 ರ ಪ್ರಮುಖ ರೋಗಲಕ್ಷಣಗಳ ಕುರಿತು 54 ಅಧ್ಯಯನಗಳ ವರದಿಯು ಕರೋನಾದ ಪ್ರಮುಖ 12 ರೋಗಲಕ್ಷಣಗಳು ಹಲ್ಲುನೋವು ಅಥವಾ ಬಾಯಿಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಒಳಗೊಂಡಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ- ಮಾಸ್ಕ್ ದಂಡ ನಿಯಮಕ್ಕೆ ಬಹುತೇಕ ಫುಲ್ ಸ್ಟಾಪ್!

ಕರೋನಾ ಸೋಂಕಿತರರಲ್ಲಿ 81.2% ಜನರಲ್ಲಿ ಜ್ವರ, 58.5% ರಲ್ಲಿ ಕೆಮ್ಮು ಮತ್ತು ಸುಮಾರು 38.5% ರೋಗಿಗಳಲ್ಲಿ ಆಯಾಸದಂತಹ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.

ಒಸಡು/ಹಲ್ಲುಗಳ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ:
ಆದಾಗ್ಯೂ, ಹಲ್ಲು ಮತ್ತು ಒಸಡುಗಳಲ್ಲಿ ಯಾವುದೇ ಹಠಾತ್ ಬದಲಾವಣೆ ಅಥವಾ ನೋವನ್ನು ನಿರ್ಲಕ್ಷಿಸಬಾರದು. ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡು ಬಂದರೂ ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಗಮನಿಸಬೇಕಾದ ಕೋವಿಡ್ ಹಲ್ಲಿನ ಲಕ್ಷಣಗಳು:
ನಿಮ್ಮ ಬಾಯಿ ಅಥವಾ ಒಸಡುಗಳಿಗೆ ಸಂಬಂಧಿಸಿದ ಕೆಲವು ರೋಗಲಕ್ಷಣಗಳು ಕೋವಿಡ್-19 ರ ಆರಂಭಿಕ ಚಿಹ್ನೆಗಳಾಗಿ ಕಾಣಿಸಿಕೊಳ್ಳಬಹುದು. ಇದಲ್ಲದೆ ಕೆಳಗಿನ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
* ಒಸಡುಗಳಲ್ಲಿ ನೋವು
* ಜ್ವರ
* ನಿರಂತರ ಕೆಮ್ಮು
* ವಿಪರೀತ ಆಯಾಸ
* ಒಸಡುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ
* ದವಡೆ ಅಥವಾ ಹಲ್ಲಿನಲ್ಲಿ ನೋವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News