ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕಾಗಿ ಅಗತ್ಯವಸ್ತುಗಳ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಪ್ರತಿ ಲೀಟರ್‍ಗೆ ಕ್ರಮವಾಗಿ 8 ರೂ. ಮತ್ತು 6 ರೂ. ಕಡಿತ ಮಾಡಿದೆ. ಇದರಿಂದ ಪೆಟ್ರೋಲ್ ಲೀಟರ್‍ಗೆ 9.50 ರೂ. ಮತ್ತು ಡಿಸೇಲ್ ಲೀಟರ್‍ಗೆ 7 ರೂ.ನಷ್ಟು ಕಡಿಮೆ ಆಗಿದೆ.


COMMERCIAL BREAK
SCROLL TO CONTINUE READING

ಭಾರತದ ಸ್ವತಂತ್ರ ವಿದೇಶಾಂಗ ನೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೊಮ್ಮೆ ಭಾರತವನ್ನು ಹೊಗಳಿದಿದ್ದಾರೆ. ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರವನ್ನು ಇಳಿಕೆ ಮಾಡಿರುವುದಕ್ಕೆ ಇಮ್ರಾನ್ ಖಾನ್ ಶ್ಲಾಘಿಸಿದ್ದು, ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ.   


ಇದನ್ನೂ ಓದಿWATCH: ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡ ಭಾಷಣ


‘ಕ್ವಾಡ್ ಸದಸ್ಯ ರಾಷ್ಟ್ರವಾದರೂ ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ಜನರಿಗೆ ನೆರವಾಗಿದೆ. ಸ್ವತಂತ್ರ ವಿದೇಶಾಂಗ ನೀತಿಯ ಮೂಲಕ ಇದೇ ರೀತಿಯ ಸಾಧನೆ ಮಾಡಬೇಕೆಂದು ನಮ್ಮ ಸರ್ಕಾರ ಉದ್ದೇಶಿಸಿತ್ತು’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.


Guinness Record: 50 ವರ್ಷಗಳ ಕಾಲ ಬರ್ಗರ್ ತಿಂದು ವಿಶ್ವದಾಖಲೆ ಮಾಡಿದ ವ್ಯಕ್ತಿ


ಇಮ್ರಾನ್ ವಿರುದ್ಧ ಪಾಕಿಸ್ತಾನ ಸಂಸತ್‌ನಲ್ಲಿ ಇತ್ತೀಚೆಗೆ ಅವಿಶ್ವಾಸ ನಿಲುವಳಿ ಮಂಡಿಸಲಾಗಿತ್ತು. ಇದರಲ್ಲಿ ಅವರಿಗೆ ಸೋಲಾಗಿತ್ತು. ತಮ್ಮ ಪದಚ್ಯುತಿ ಹಿಂದೆ ವಿದೇಶಿ ಶಕ್ತಿಗಳ ಷಡ್ಯಂತ್ರವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತ ತೆಗೆದುಕೊಂಡ ನಿಲುವಿನ ಬಗ್ಗೆ ವೈಯಕ್ತಿವಾಗಿ ನನಗೆ ಖುಷಿ ಇದೆ. ನಮ್ಮ ಸರ್ಕಾರದಲ್ಲಿಯೂ ಇದೇ ರೀತಿಯ ನಿಲುವು ತೆಗೆದುಕೊಳ್ಳುವ ಆಲೋಚನೆಯಲ್ಲಿ ನಾವಿದ್ದೇವು ಎಂದು ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.